ಕರ್ನಾಟಕ

karnataka

ETV Bharat / bharat

ಚೆನ್ನೈ ವಿಮಾನ ನಿಲ್ದಾಣದಲ್ಲಿ 100 ಕೋಟಿ ರೂ ಮೌಲ್ಯದ ಹೆರಾಯಿನ್​ ವಶ - ಚೆನ್ನೈ ವಿಮಾನ ನಿಲ್ದಾಣದಲ್ಲಿ ಹೆರಾಯಿನ್​ ವಶ

ಚೆನ್ನೈ ವಿಮಾನ ನಿಲ್ದಾಣದಲ್ಲಿ ಇಬ್ಬರು ತಾಂಜೇನಿಯಾದ ಪ್ರಜೆಗಳಿಂದ 100 ಕೋಟಿ ರೂ. ಮೌಲ್ಯದ ಹೆರಾಯಿನ್ ಅನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

Heroin
Heroin

By

Published : May 7, 2021, 8:48 PM IST

ಚೆನ್ನೈ: ಇಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 100 ಕೋಟಿ ರೂ. ಮೌಲ್ಯದ ಹೆರಾಯಿನ್ ಮಾದಕ ದ್ರವ್ಯ ವಶಪಡಿಸಿಕೊಳ್ಳಲಾಗಿದೆ.

ಆಫ್ರಿಕಾದಿಂದ ಭಾರತಕ್ಕೆ ಕೆಲವು ಮಾದಕ ದ್ರವ್ಯವನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ ಎಂಬ ಮಾಹಿತಿಯ ಮೇರೆಗೆ ಕಸ್ಟಮ್ಸ್ ಇಲಾಖೆ 46 ವರ್ಷದ ಮಹಿಳೆ ಮತ್ತು ಆಕೆಯ 45 ವರ್ಷದ ಸಹಚರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದೆ ಎಂದು ಕಸ್ಟಮ್ಸ್ ಆಯುಕ್ತ ರಾಜನ್ ಚೌಧರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆರಾಯಿನ್ ಅನ್ನು ಬ್ಯಾಗ್​ನಲ್ಲಿ ಮರೆಮಾಚಿದ್ದು, ಅದರ ವಾಸನೆ ಬರದಂತೆ ಕೆಲವು ಮಸಾಲೆಯುಕ್ತ ಪುಡಿಯನ್ನು ಚಿಮುಕಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಹಿಳೆ ಬೆಂಗಳೂರಿನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ತನ್ನ ಅಟೆಂಡೆಂಟ್ ಜೊತೆಗೆ ವೈದ್ಯಕೀಯ ಚಿಕಿತ್ಸೆ ಉದ್ದೇಶವನ್ನು ಉಲ್ಲೇಖಿಸಿ ಭಾರತಕ್ಕೆ ಪ್ರಯಾಣ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.ಇವರಿಬ್ಬರು ಬೆಂಗಳೂರಿಗೆ ನೇರ ವಿಮಾನ ಸಿಗದ ಕಾರಣ ಅವರು ಚೆನ್ನೈಗೆ ಬಂದಿಳಿದಿದ್ದು, ಇಲ್ಲಿ ಅವರನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details