ಜೈಪುರ (ರಾಜಸ್ಥಾನ): ಭಾರತದ ಭೂ ಪ್ರದೇಶದೊಳಗೆ ಪಾಕಿಸ್ತಾನವು ಡ್ರೋನ್ ಮೂಲಕ ಸುಮಾರು 15 ಕೋಟಿ ಮೌಲ್ಯದ ಹೆರಾಯಿನ್ ಎಸೆದ ಪ್ರಕರಣ ಸಂಬಂಧ ಗಡಿ ಭದ್ರತಾ ಪಡೆ (ಬಿಎಸ್ಎಫ್) ಸಿಬ್ಬಂದಿ ನಾಲ್ವರು ಕಳ್ಳಸಾಗಣಿಕೆದಾರರನ್ನು ಬಂಧಿಸಿ, ಹೆರಾಯಿನ್ ವಶಪಡಿಸಿಕೊಂಡಿದ್ದಾರೆ.
ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯಲ್ಲಿ ಭಾರತ-ಪಾಕ್ ಗಡಿಯಲ್ಲಿ ಮಂಗಳವಾರ ಅಂದಾಜು 3.5 ಕೆಜಿ ಹೆರಾಯಿನ್ನನ್ನು ದ್ರೋನ್ ಮೂಲಕ ಭಾರತದ ಗಡಿಯೊಳಗೆ ಬಿಡಲಾಗಿತ್ತು. ಈ ಹೆರಾಯಿನ್ನನ್ನು ಬಂಡಲ್ನಲ್ಲಿ ಸುತ್ತಲಾಗಿತ್ತು. ಬಂಧಿತ ನಾಲ್ವರು ಆರೋಪಿಗಳು ಪಂಜಾಬ್ ನಿವಾಸಿಗಳಾಗಿದ್ದಾರೆ. ಅವರನ್ನು ಬಿಎಸ್ಎಫ್ ಅಧಿಕಾರಿಗಳು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.