ಮುಂಬೈ(ಮಹಾರಾಷ್ಟ್ರ): ಮಹತ್ವದ ಕಾರ್ಯಾಚರಣೆಯೊಂದರಲ್ಲಿ ದೆಹಲಿ ಪೊಲೀಸ್ ವಿಶೇಷ ವಿಭಾಗದ ಅಧಿಕಾರಿಗಳು ದಾಖಲೆಯ ಮಟ್ಟದಲ್ಲಿ ಹೆರಾಯಿನ್ ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮುಂಬೈನ ನವ ಶೇವಾ ಬಂದರಿನಲ್ಲಿ ಕಂಟೈನರ್ನಲ್ಲಿ 22 ಟನ್ ಹೆರಾಯಿನ್ ಜಪ್ತಿ ಮಾಡಲಾಗಿದೆ.
ಲೈಕೋರೈಸ್ ಹೊಂದಿರುವ ಕಂಟೈನರ್ನಲ್ಲಿ ಇಷ್ಟೊಂದು ಹೆರಾಯಿನ್ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಹೆರಾಯಿನ್ ಮೊತ್ತ 1,725 ಕೋಟಿ ರೂಪಾಯಿ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.