ಜೋಧ್‌ಪುರ(ರಾಜಸ್ಥಾನ):ಪಾಕಿಸ್ತಾನದ 90 ಸಾವಿರ ಸೈನಿಕರನ್ನು ಸದೆಬಡಿದು ವಿಜಯ ಕಹಳೆ ಮೊಳಗಿಸಿದ 'ವಿಜಯ್ ದಿವಸ್'ಗೆ 50 ವಸಂತಗಳು ಕಳೆದಿವೆ. 1971 ಡಿಸೆಂಬರ್ 16 ರಂದು ಪಾಕಿಸ್ತಾನ ಸೇನೆಯ ವಿರುದ್ಧ ಸಿಕ್ಕ ವಿಜಯದ ಸಂಭ್ರಮಾಚರಣೆ ಕಳೆದ ವಾರವಷ್ಟೇ ನಡೆಸಲಾಗಿತ್ತು. ಈ ಮಧ್ಯೆಯೇ ರಣಭೂಮಿಯಲ್ಲಿ ಹೋರಾಡಿ ಜಯ ತಂದಿದ್ದ ವೀರಯೋಧ ಭೈರೋನ್ ಸಿಂಗ್ ರಾಥೋಡ್(81) ಅವರು ಅನಾರೋಗ್ಯದಿಂದ ಸೋಮವಾರ ಹುತಾತ್ಮರಾಗಿದ್ದಾರೆ.
1971 ರ ಯುದ್ಧದಲ್ಲಿ ಧೀರೋದಾತ್ತವಾಗಿ ಹೋರಾಡಿದ ರಾಥೋಡ್ ಅವರು ಕೆಲ ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ವಿಜಯ್ ದಿವಸ್ 50 ರ ಸಂಭ್ರಮದ ಎರಡು ದಿನದ ಮೊದಲು ಅವರನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರ ತೀವ್ರ ಅನಾರೋಗ್ಯದಿಂದ ವೀರಯೋಧ ಕೊನೆಯುಸಿರೆಳೆದಿದ್ದಾರೆ.
ಬಾರ್ಡರ್ನಲ್ಲಿ ಎದೆಯೊಡ್ಡಿದ್ದ ಜವಾನ್:ಪಶ್ಚಿಮ ಪಾಕಿಸ್ತಾನದಿಂದ(ಈಗಿನ ಪಾಕಿಸ್ತಾನ) ಪೂರ್ವ ಪಾಕಿಸ್ತಾನವನ್ನು (ಈಗಿನ ಬಾಂಗ್ಲಾದೇಶ) ವಿಮುಕ್ತಿಗೊಳಿಸಲು ಪಾಕ್ ಮೇಲೆ ಯುದ್ಧ ಸಾರಿತು. 1971 ರಲ್ಲಿ ನಡೆದ ರಣದಲ್ಲಿ ಭಾರತ ವಿಜಯದುಂದುಬಿ ಮೊಳಗಿಸಿತು. ರಾಜಸ್ಥಾನದ ಲಾಂಗೆವಾಲಾ ಪೋಸ್ಟ್ನಲ್ಲಿ ಭೈರೋನ್ ಸಿಂಗ್ ರಾಥೋಡ್ ಅವರು ತೋರಿದ ಶೌರ್ಯ ಅಜರಾಮರ. ಅವರ ಸಾಹಸದಿಂದ ಪಾಕ್ ಪಡೆಗಳು ಮಂಡಿಯೂರಿದವು.