ಪ್ರಕಾಶಂ( ಆಂಧ್ರಪ್ರದೇಶ):ನಾಯಕ ನಟ ಹಾಗೂ ಹಿಂದೂಪುರಂ ಶಾಸಕ ನಂದಮೂರಿ ಬಾಲಕೃಷ್ಣ ಕುಟುಂಬ ಸದಸ್ಯರೊಂದಿಗೆ ಸಂಕ್ರಾಂತಿ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ. ಸಹೋದರಿ ದಗ್ಗುಬಾಟಿ ಪುರಂದೇಶ್ವರಿ ಮತ್ತು ಸೋದರ ಮಾವ ದಗ್ಗುಬಾಟಿ ವೆಂಕಟೇಶ್ವರ ರಾವ್ ಅವರು ಪ್ರಕಾಶಂ ಜಿಲ್ಲೆಯ ಕಾರಂಚೇಡುವಿನ ತಮ್ಮ ನಿವಾಸದಲ್ಲಿ ಸಂಕ್ರಾಂತಿ ಹಬ್ಬ ಆಚರಿಸುತ್ತಿದ್ದಾರೆ.
ಸೋದರ ಮಾವನ ಮನೆಯಲ್ಲಿ ಕುದುರೆ ಏರಿ ಸಂಭ್ರಮಿಸಿದ ಬಾಲಯ್ಯ.. ಹೀರೋ ನೋಡಿ ಮುಗಿಬಿದ್ದ ಜನ! - ಪ್ರಕಾಶಂ ಜಿಲ್ಲೆಯಲ್ಲಿ ಸಂಕ್ರಾಂತಿ ಸಂಭ್ರಮದಲ್ಲಿ ಕುದುರೆ ಏರಿ ರಂಜಿಸಿದ ಬಾಲಯ್ಯ
ನಂದಮೂರಿ ಬಾಲಕೃಷ್ಣ ಕುಟುಂಬ ಸದಸ್ಯರೊಂದಿಗೆ ಹಬ್ಬದ ಸವಿಯನ್ನು ಸವಿಯುತ್ತಿದ್ದಾರೆ. ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿರುವ ತನ್ನ ಸಹೋದರಿ ಮನೆಗೆ ಭೇಟಿ ನೀಡಿರುವ ಬಾಲಕೃಷ್ಣ ಸಂಕ್ರಾಂತಿ ಸಂಭ್ರಮದಲ್ಲಿ ತೊಡಗಿದ್ದಾರೆ.
ಸೋದರ ಮಾವನ ಮನೆಯಲ್ಲಿ ಕುದುರೆ ಏರಿ ಸಂಭ್ರಮಿಸಿದ ಬಾಲಯ್ಯ
ಸೋದರ ಮಾವನ ಮನೆಗೆ ಭೇಟಿ ನೀಡಿರುವ ಬಾಲಕೃಷ್ಣ ಕುದುರೆ ಸವಾರಿ ಮಾಡಿ ಅಭಿಮಾನಿಗಳನ್ನು ರಂಜಿಸಿದರು. ಬಾಲಕೃಷ್ಣ ಅವರನ್ನು ನೋಡಲು ಸುತ್ತಮುತ್ತಲ ಗ್ರಾಮಗಳಿಂದ ಸಾವಿರಾರೂ ಜನರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಎಲ್ಲ ತೆಲುಗು ಪ್ರೇಮಿಗಳಿಗೆ ಬಾಲಕೃಷ್ಣ ಸಂಕ್ರಾಂತಿ ಹಬ್ಬದ ಶುಭಾಶಯ ತಿಳಿಸಿದ್ದಾರೆ.