ಕರ್ನಾಟಕ

karnataka

ETV Bharat / bharat

ಭಾರತದಲ್ಲಿ ಕೋವಿಡ್​ ಲಸಿಕೆ ವಿತರಣೆ ಹೇಗೆ ನಡೆಯಲಿದೆ?: ಇಲ್ಲಿದೆ ಸಂಪೂರ್ಣ ಮಾಹಿತಿ - ಭಾರತದಲ್ಲಿ ಕೋವಿಡ್​ ಲಸಿಕೆ ವಿತರಣೆ ಹೇಗೆ ನಡೆಯಲಿದೆ

ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಈಗಾಗಲೇ ಕೋವಿಡ್ ಲಸಿಕೆ ವಿತರಣೆ ನಡೆಯುತ್ತಿದೆ. ಭಾರತದಲ್ಲಿ ಕೂಡ ಲಸಿಕೆ ವಿತರಣೆಯ ತಾಲೀಮು ಯಶಸ್ವಿಯಾಗಿ ಮುಗಿದಿದ್ದು, ಜನಸಾಮಾನ್ಯರಿಗೆ ಲಸಿಕೆ ವಿತರಿಸಲು ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಹಾಗಾದರೆ, ಭಾರತದಲ್ಲಿ ವಿತರಣಾ ಕಾರ್ಯ ಹೇಗೆ ನಡೆಯಲಿದೆ ಎಂಬುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

plan for vaccine roll out in India
ಭಾರತದಲ್ಲಿ ಕೋವಿಡ್​ ಲಸಿಕೆ ವಿತರಣಾ ವ್ಯವಸ್ಥೆ

By

Published : Jan 7, 2021, 4:04 PM IST

ನವದೆಹಲಿ :ಜನವರಿ 13 ರೊಳಗೆ ಕೋವಿಡ್ ಲಸಿಕೆ ವಿತರಣೆ ಪ್ರಾರಂಭಿಸಲು ಕೇಂದ್ರ ಆರೋಗ್ಯ ಸಚಿವಾಲಯ ಸಿದ್ದತೆ ನಡೆಸಿದ್ದು, ಲಸಿಕೆ ವಿತರಣೆ ಪ್ರಾರಂಭಿಸುವ ಅಂತಿಮ ದಿನಾಂಕ ಇನ್ನಷ್ಟೇ ನಿರ್ಧಾರವಾಗಬೇಕಿದೆ.

ಭಾರತದಲ್ಲಿ ಕೋವಿಡ್​ ಲಸಿಕೆ ವಿತರಣಾ ವ್ಯವಸ್ಥೆ

ಲಸಿಕೆ ವಿತರಣೆಗಾಗಿ ಡಾಟಾಬೇಸ್ ಮ್ಯಾನೇಜ್​ಮೆಂಟ್ ನಿರ್ವಹಣಾ ವ್ಯವಸ್ಥೆ ಕೋ-ವಿನ್ ಬಳಸಲು ಸರ್ಕಾರ ನಿರ್ಧರಿಸಿದೆ. ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಕೋ-ವಿನ್​ನಲ್ಲಿ ಲಸಿಕೆ ಪಡೆದವರಿಗೆ ವಿಶಿಷ್ಟ ಆರೋಗ್ಯ ಐಡಿ ರಚಿಸಲಾಗುತ್ತದೆ ಎರಡೂ ಡೋಸ್​ ಲಸಿಕೆ ನೀಡಿದ ಬಳಿಕ, ಕ್ಯೂಆರ್ ಕೋಡ್ ಪ್ರಮಾಣ ಪತ್ರ ಕ್ರಿಯೇಟ್ ಆಗಲಿದೆ. ಅದನ್ನು ಸರ್ಕಾರದ ಡಿಜಿಲಾಕರ್ ಅಪ್ಲಿಕೇಶನ್‌ನಲ್ಲಿ ಸಂಗ್ರಹಿಸಲಾಗುತ್ತದೆ.

ಭಾರತದಲ್ಲಿ ಕೋವಿಡ್​ ಲಸಿಕೆ ವಿತರಣಾ ವ್ಯವಸ್ಥೆ

ಓದಿ : ಇಂದು ಅಥವಾ ನಾಳೆಯಿಂದ ಕೋವಿಡ್​ ಲಸಿಕೆ ಸಾಗಾಟ ಆರಂಭ

ಲಸಿಕೆ ಪಡೆದ ಬಳಿಕ ಯಾವುದೇ ವ್ಯತಿರಿಕ್ತ ಪರಿಣಾಮಗಳು ಬೀರಿದಲ್ಲಿ, ಸರಿಯಾದ ಸಮಯಕ್ಕೆ ಮಾಹಿತಿ ನೀಡಲು ವ್ಯವಸ್ಥೆ ಮಾಡಲಾಗಿದೆ. ಇನ್ನುಳಿದಂತೆ 12 ಭಾಷೆಗಳಲ್ಲಿ ಎಸ್​ಎಂಎಸ್​, 24X7 ಸಹಾಯವಾಣಿ, ಚಾಟಿಂಗ್ ವ್ಯವಸ್ಥೆಯನ್ನು ಕೋ-ವಿನ್ ಒಳಗೊಂಡಿರುತ್ತದೆ. ಸದ್ಯದ ಮಾಹಿತಿ ಪ್ರಕಾರ, ದೇಶದ 700 ಕ್ಕೂ ಅಧಿಕ ಜಿಲ್ಲೆಗಳಲ್ಲಿ 90 ಸಾವಿರಕ್ಕೂ ಹೆಚ್ಚು ಬಳಕೆದಾರರಿಗೆ ತರಬೇತಿ ನೀಡಲಾಗಿದೆ.

ABOUT THE AUTHOR

...view details