ಹರಿದ್ವಾರ:ಅತ್ಯಾಚಾರದ ಸುಳ್ಳು ಆರೋಪ ಮಾಡುವ ಮೂಲಕ ಶಾಂತಿಕುಂಜ್ ಮುಖ್ಯಸ್ಥ ಡಾ. ಪ್ರಣವ್ ಪಾಂಡ್ಯ ಅವರನ್ನು ಬ್ಲಾಕ್‌ಮೇಲ್ ಮಾಡಿದ್ದ ಹೇಮಲತಾ ಸಾಹು ಎಂಬ ಮತ್ತೊಬ್ಬ ಮಹಿಳೆಯನ್ನು ಕೊತ್ವಾಲಿ ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕ ಮೂಲದ ಆರೋಪಿ ಮಹಿಳೆಯನ್ನು ಹರಿದ್ವಾರದ ಕೊತ್ವಾಲಿ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 6 ಮಂದಿಯನ್ನು ಬಂಧಿಸಲಾಗಿದೆ.
2021 ರಲ್ಲಿ ಛತ್ತೀಸ್‌ಗಢದ ಮಹಿಳೆಯೊಬ್ಬರು ದೆಹಲಿಯ ವಿವೇಕ್ ವಿಹಾರ್ ಪೊಲೀಸ್ ಠಾಣೆಯಲ್ಲಿ ಶಾಂತಿಕುಂಜ್ ಹರಿದ್ವಾರದ ಮುಖ್ಯಸ್ಥ ಡಾ. ಪ್ರಣವ್ ಪಾಂಡ್ಯ ಮತ್ತು ಅವರ ಪತ್ನಿ ಶೈಲ್ ಬಾಲಾ ವಿರುದ್ಧ ದೂರು ನೀಡಿದ್ದರು. ಈ ದೂರಿನ ವಿಚಾರವಾಗಿ ವಿಚಾರಣೆ ನಡೆಸಲು ಶುರು ಮಾಡಿದಾಗ, ನಾನಾ ಆರೋಪ, ಪ್ರತ್ಯಾರೋಪಗಳು ಕೇಳಿ ಬಂದವು. ವಿಷಯ ತುಂಬಾ ಗಂಭೀರವಾದ ನಂತರ ತನಿಖೆಯನ್ನು ಪ್ರಾರಂಭಿಸಲಾಯಿತು. ಈ ವೇಳೆ ಶಾಂತಿಕುಂಜ್ ಅವರಿಗೂ ಮೊದಲು ಕೆಲಸ ಮಾಡಿದವರ ಪಿತೂರಿ ಇರುವುದು ಕಂಡುಬಂತು.
ಏನಿದು ಪ್ರಕರಣ:ದೂರಿನಲ್ಲಿ 2010 ರಲ್ಲಿ ಶಾಂತಿಕುಂಜ್‌ನಲ್ಲಿದ್ದಾಗ ಪ್ರಣವ್ ಪಾಂಡ್ಯ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಮತ್ತು ಶೈಲ್ ಬಾಲಾ ನನಗೆ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ಆರೋಪ ಮಾಡಿದ್ದರು. ಎಫ್‌ಐಆರ್ ಅನ್ನು ಹರಿದ್ವಾರಕ್ಕೆ ವರ್ಗಾಯಿಸಿದಾಗ, ಪೊಲೀಸರು ಈ ಬಗ್ಗೆ ತನಿಖೆ ನಡೆಸಿದರು. ನಂತರ ಪ್ರಣವ್ ಪಾಂಡ್ಯ ವಿರುದ್ಧದ ಎಲ್ಲಾ ಆರೋಪಗಳು ಸುಳ್ಳು ಎಂದು ತಿಳಿದುಬಂದಿವೆ ಮತ್ತು ಪೊಲೀಸರು ಅದರ ಅಂತಿಮ ವರದಿಯನ್ನು ಸಹ ಸಲ್ಲಿಸಿದರು.