ಚಮೋಲಿ: ಹಿಮಾಲಯನ್ ಪ್ರದೇಶದ ಏಳು ಶಿಖರಗಳ ನಡುವೆ ಇರುವ ಪವಿತ್ರ ಹೇಮಕುಂಡ್ ಸಾಹಿಬ್ ಜೂನ್ ತಿಂಗಳಲ್ಲೂ ಸುಮಾರು ಐದು ಅಡಿ ಹಿಮದಿಂದ ಆವೃತವಾಗಿದೆ.
ಹೇಮಕುಂಡ್ ಸರೋವರ್ ಕೂಡ ಹಿಮವಾಗಿ ಮಾರ್ಪಟ್ಟಿದೆ. ಹೇಮಕುಂಡ್ ಮತ್ತು ಗೋವಿಂದಘಾಟ್ ಗುರುದ್ವಾರ ಆಡಳಿತ ಮಂಡಳಿಗೆ ಯಾತ್ರೆ ಪ್ರಾರಂಭಿಸುವ ಬಗ್ಗೆ ಭಕ್ತರಿಂದ ನಿರಂತರವಾಗಿ ಕರೆಗಳು ಬರುತ್ತಿವೆ. ಟ್ರಸ್ಟ್ ಮೇ 10 ರಂದು ಹೇಮಕುಂಡ್ ತೆರೆಯುವ ದಿನಾಂಕವನ್ನು ನಿಗದಿಪಡಿಸಿತ್ತು. ಆದರೆ ಕೊರೊನಾ ಪರಿಣಾಮ ಇದನ್ನು ಮೂಂದೂಡಲಾಗಿದೆ.