ತಿರುಪತಿ(ಆಂಧ್ರ ಪ್ರದೇಶ): ನಿರಂತರ ಮಳೆಯಿಂದಾಗಿ ತಿರುಪತಿ ತಿಮ್ಮಪ್ಪನ ಸನ್ನಿಧಿ ಅಕ್ಷರಶಃ ನಲುಗಿ ಹೋಗಿದ್ದು,(heavy-rains-in-tirumala) ದೇವಸ್ಥಾನದ ಸುತ್ತಮುತ್ತ ಪ್ರದೇಶ ಜಲಾವೃತವಾಗಿದೆ. ತಿರುಮಲದ ಬೀದಿಗಳು, ಸಮೀಪದ ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ.
ನಿನ್ನೆ ಮಧ್ಯಾಹ್ನ 3 ಗಂಟೆಯಿಂದ ರಾತ್ರಿಯವರೆಗೆ ತಿರುಮಲದಲ್ಲಿ ವರುಣನ ಆರ್ಭಟದಿಂದ(flood) ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ವೈಕುಂಠಂ ಕ್ಯೂ ಕಾಂಪ್ಲೆಕ್ಸ್‌ಗೆ(viakunata complex)ನೀರು ನುಗ್ಗಿ ಭಕ್ತರು ಪರದಾಡುವಂತಾಗಿದೆ. ಪ್ರವಾಹದ ಪರಿಸ್ಥಿಯಿಂದಾಗಿ ನಾರಾಯಣಗಿರಿ ವಸತಿ ಸಮುಚ್ಚವೂ ಮಳೆ ನೀರಿನಿಂದ ತುಂಬಿ ಹೋಗಿದೆ.
ದೇವಸ್ಥಾನ ಮಾರ್ಗದ ರಸ್ತೆಗಳಲ್ಲಿ ಪ್ರವಾಹದ ನೀರು ಜಲಪಾತಗಳ ರೀತಿಯಲ್ಲಿ ಇಳಿಯುವುದರಿಂದ ಭೂಕುಸಿತದ ಆಂತಕ ಶುರುವಾಗಿದೆ. ಅಲಿಪಿರಿ-ಶ್ರೀವಾರಿ ಮೆಟ್ಟಿಲು ಪಾದಚಾರಿ ಮಾರ್ಗದಲ್ಲಿ ನೀರು ತುಂಬಿರುವ ಕಾರಣ ಈಗಾಗಲೇ ಈ ಮಾರ್ಗಗಳನ್ನು ಬಂದ್ ಮಾಡಲಾಗಿದೆ.