ತೆಲಂಗಾಣ :ವಾಯುವ್ಯ ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಕಡಿಮೆ ಒತ್ತಡದ ಪರಿಣಾಮ ರಾಜ್ಯದಲ್ಲಿ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಹೈದರಾಬಾದ್ ಸೇರಿದಂತೆ ಬಹುತೇಕ ಎಲ್ಲ ಜಿಲ್ಲೆಗಳಲ್ಲಿಯೂ ಮಳೆಯಾಗಿದೆ. ಕನ್ನೈಗುಡೆಂನಲ್ಲಿ ಅತಿ ಹೆಚ್ಚು ಅಂದರೆ 98.4 ಮಿಮೀ ಮಳೆ ದಾಖಲಾಗಿದೆ. ಮುಂದಿನ ಮೂರು ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಂತಿಕುಮಾರಿ ಅವರಿಂದು ಭದ್ರಾದ್ರಿ ಕೊತಗುಡೆಂ, ಜನಾಂವ್, ಕಾಮರೆಡ್ಡಿ, ಕರೀಂನಗರ, ಖಮ್ಮಂ, ಮಹಬೂಬಾಬಾದ್, ಮುಳುಗು, ಪೆದ್ದಪಲ್ಲಿ, ಸಿದ್ದಿಪೇಟೆ, ವಾರಂಗಲ್ ಮತ್ತು ಹನ್ಮಕೊಂಡ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಟೆಲಿಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು. ಮುಂದಿನ 3 ದಿನ ಭಾರಿ ಮಳೆಯಾಗುವ ನಿರೀಕ್ಷೆಯಿದ್ದು, ಯಾವುದೇ ಪ್ರಾಣಹಾನಿಯಾಗದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಆದೇಶಿಸಿದರು. ಜೊತೆಗೆ, ಅಪಾಯವಿರುವ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಮತ್ತು ತುರ್ತು ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಇದನ್ನೂ ಓದಿ :ಬೆಳಗಾವಿ : ಧಾರಾಕಾರ ಮಳೆಗೆ ಸೇತುವೆ, ರಸ್ತೆ, ದೇವಸ್ಥಾನಗಳು ಜಲಾವೃತ
ಮುಂದಿನ 3 ದಿನಗಳಲ್ಲಿ ಮೆಹಬೂಬಾಬಾದ್, ವಾರಂಗಲ್, ಹನುಮಕೊಂಡ ಮತ್ತು ಖಮ್ಮಂ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ. ಸಿದ್ದಿಪೇಟೆ, ಜನಗಾಮ, ನಿಜಾಮಾಬಾದ್, ಪೆದ್ದಪಲ್ಲಿ, ಜಗಿತ್ಯಾಲ, ಜಯಶಂಕರ್ ಭೂಪಾಲಪಲ್ಲಿ ಸಹ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಹಾಗೆಯೇ, ಆದಿಲಾಬಾದ್, ಕುಮುರಂ ಭೀಮ್ ಆಸಿಫಾಬಾದ್, ಮಂಚಿರ್ಯಾಲ, ನಿರ್ಮಲ್, ನಿಜಾಮಾಬಾದ್, ರಾಜಣ್ಣ ಸಿರಿಸಿಲ್ಲ, ಮೇದಕ್, ಮೇಡ್ಚಲ್ ಮಲ್ಕಾಜಿಗಿರಿ, ಸಂಗಾರೆಡ್ಡಿ ಮತ್ತು ರಂಗಾರೆಡ್ಡಿ ಭಾಗದಲ್ಲಿ ಭಾರಿ ಮಳೆಯಾಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.