ಮುಂಬೈ:ಮಹಾರಾಷ್ಟ್ರದಲ್ಲಿ ಮುಂಗಾರು ಮಳೆ ಅಬ್ಬರ ಶುರುವಾಗಿದೆ. ಕಳೆದ 12 ಗಂಟೆ ಅವಧಿಯಲ್ಲಿ 95.81 ಮಿಮೀ ಮಳೆಯಾಗಿದ್ದು, ಬಡಾವಣೆಗಳು, ರಸ್ತೆಗಳೆಲ್ಲಾ ನೀರು ತುಂಬಿಕೊಂಡಿದೆ. ಮಳೆಯಿಂದ ಹಲವು ಪ್ರದೇಶಗಳು ಜಲಾವೃತವಾಗಿದ್ದು, ಸಂಚಾರಕ್ಕೆ ತೊಂದರೆಯುಂಟಾಗಿದೆ. ಇದರಿಂದ ಜನಜೀವನ ಅಸ್ತವ್ಯಸ್ತವಾಗಿದೆ.
ರತ್ನಗಿರಿ ಜಿಲ್ಲೆಯಲ್ಲಿ ಸೋಮವಾರ ಧಾರಾಕಾರ ಮಳೆ ಸುರಿದಿದೆ. ಚಿಪ್ಲುನ್ ಪಟ್ಟಣದ ಡಿಬಿಜೆ ಕಾಲೇಜು ಹಾಗೂ ಕಪ್ಸಾಲ್‌ನಲ್ಲಿ ಜಲಾವೃತಗೊಂಡಿವೆ. ಒಂದರಿಂದ ಒಂದೂವರೆ ಅಡಿ ನೀರು ನಿಂತುಕೊಂಡಿದ್ದು, ವಾಹನಗಳ ಸಂಚಾರ ಸ್ಥಗಿತವಾಗಿದೆ.
ನದಿಗಳ ಒಳಹರಿವು ಹೆಚ್ಚಳ:ಮಳೆಯಿಂದಾಗಿ ನದಿಗಳ ಒಳಹರಿವು ದಿಢೀರ್ ಏರಿಕೆಯಾಗಿದೆ. ನದಿನೀರು ಹೊರಬಿಡಲಾಗಿದ್ದು, ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಇದರಿಂದ ಪ್ರವಾಹ ಉಂಟಾಗಿದ್ದು, ನದಿಪಾತ್ರದ ಜನರನ್ನು ಸ್ಥಳಾಂತರ ಮಾಡಲಾಗುತ್ತಿದೆ.