ಬಿಹಾರ/ ಬೇಗುಸರೈ: ಜಿಲ್ಲೆಯ ಸಿಮಾರಿಯಾ ಗ್ರಾಮದ ನದಿಗೆ ಸೇತುವೆ ನಿರ್ಮಾಣ ಕೆಲಸ ಮಾಡುತ್ತಿದ್ದ ಕ್ರೇನ್ ಮತ್ತು ಜೆಟ್ಟಿ ಮಂಗಳವಾರ ಸಂಜೆ ಗುಡುಗು ಸಹಿತ ಸುರಿದ ಭಾರಿ ಮಳೆಗೆ ಮುಳುಗಿವೆ.
ಭಾರಿ ಮಳೆ: ಸೇತುವೆ ನಿರ್ಮಾಣದಲ್ಲಿ ತೊಡಗಿದ್ದ ಕ್ರೇನ್ ಮುಳುಗಡೆ - ವಿಡಿಯೋ - heavy rain ,
ಮಂಗಳವಾರ ಸಂಜೆ ಸುರಿದ ಭಾರಿ ಮಳೆಗೆ ಬಿಹಾರದ ಬೆಗುಸರೈ ಜಿಲ್ಲೆಯ ಸಿಮಾರಿಯಾ ಗ್ರಾಮದ ಸೇತುವೆ ನಿರ್ಮಾಣ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಕ್ರೇನ್ ಮತ್ತು ಜೆಟ್ಟಿ ನದಿಯಲ್ಲಿ ಮುಳುಗಿವೆ.
![ಭಾರಿ ಮಳೆ: ಸೇತುವೆ ನಿರ್ಮಾಣದಲ್ಲಿ ತೊಡಗಿದ್ದ ಕ್ರೇನ್ ಮುಳುಗಡೆ - ವಿಡಿಯೋ Crane sinking](https://etvbharatimages.akamaized.net/etvbharat/prod-images/768-512-11988245-thumbnail-3x2-sanju.jpg)
ಕ್ರೇನ್ ಮುಳುಗಡೆ
ಸೇತುವೆ ನಿರ್ಮಾಣದಲ್ಲಿ ತೊಡಗಿದ್ದ ಕ್ರೇನ್ ಮುಳುಗಡೆ
ಘಟನೆಯ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಸಂಪೂರ್ಣ ವಿಡಿಯೋ ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಇದೀಗ ವೈರಲ್ ಆಗಿದೆ. ಕ್ರೇನ್ ಮತ್ತು ಜೆಟ್ಟಿ 1100 ಕೋಟಿ ಮೌಲ್ಯದ ಸೇತುವೆ ನಿರ್ಮಾಣ ಕಾರ್ಯದಲ್ಲಿ ತೊಡಗಿತ್ತು ಎಂದು ತಿಳಿದುಬಂದಿದೆ.
ಓದಿ:VIDEO: ಅರಣ್ಯಾಧಿಕಾರಿಗಳು ವಶಪಡಿಸಿಕೊಂಡ ವಾಹನಗಳನ್ನೇ ಕೊಂಡೊಯ್ದ ದರೋಡೆಕೋರರು!