ಹೈದರಾಬಾದ್:ಹೈದರಾಬಾದ್‌ನ ಹಲವೆಡೆ ಧಾರಾಕಾರ ಮಳೆಯಾಗಿದ್ದು, ಬಿರು ಬಿಸಿಲಿನಿಂದ ಕಂಗೆಟ್ಟ ಜನತೆಗೆ ಸ್ವಲ್ಪ ರಿಲೀಫ್ ಸಿಕ್ಕಂತಾಗಿದೆ.
ಮಂಗಳವಾರ ಸಂಜೆಯಿಂದ ತಂಪು ಗಾಳಿ ಮತ್ತು ಮೋಡದಿಂದ ಕೂಡಿದ ವಾತಾವರಣವಿತ್ತು. ಇಂದು ಬೆಳಿಗ್ಗೆಯಿಂದ ಹೈದರಾಬಾದ್‌ನಲ್ಲಿ ಮಳೆಯಾಗುತ್ತಿದೆ.
ಹೈದರಾಬಾದ್‌ನ ಪಂಜಗುಟ್ಟ, ಖೈರತಾಬಾದ್, ಎರ್ರಮಂಜಿಲ್, ಅಮೀರ್‌ಪೇಟ್, ಎಸ್‌ಆರ್ ನಗರ, ಕರ್ಮನ್‌ಘಾಟ್, ಚಂಪಪೇಟ್, ಐಎಸ್ ಸದಾನ್, ಮೀರ್‌ಪೇಟ್, ಸಂತೋಷ್ ನಗರ, ಮಿಯಾಪುರ, ಚಂದನಗರ, ಗಚ್ಚಿಬೌಲಿ, ಮಾಧಾಪುರ, ಕುಟ್ಬುಲ್ಲಾಪುರ, ಕೋಟಿ, ಎಲ್.ಬಿ.ನಗರ, ವನಸ್ಥಲಿಪುರಂ ಹಾಗು ಹಯತ್ ನಗರ ಸೇರಿ ನಗರದ ಹಲವೆಡೆ ಮಳೆ ಸುರಿಯುತ್ತಿದೆ.