ಕರ್ನಾಟಕ

karnataka

ETV Bharat / bharat

ನಿಮಿಷಕ್ಕೆ ಎರಡು ಬಿರಿಯಾನಿ ಡೆಲಿವರಿ ನೀಡಿದ ಸ್ವಿಗ್ಗಿ: 3.50 ಲಕ್ಷಕ್ಕೂ ಹೆಚ್ಚು ಆರ್ಡರ್‌ ಪಡೆದ ಕಂಪನಿ

ಹೊಸ ವರ್ಷ ಸಂಭ್ರಮಕ್ಕೆ ಬಿರಿಯಾನಿ ಆರ್ಡರ್​ ಜೋರು - ಹೈದರಾಬಾದ್​ ಬಿರಿಯಾನಿಗೆ ಎಲ್ಲಿಲ್ಲದ ಬೇಡಿಕೆ - ಶನಿವಾರ ಒಂದೇ ದಿನ 3.50 ಲಕ್ಷ ಡೆಲಿವರಿ ನೀಡಿದ ಸ್ವಿಗ್ಗಿ.

heavy Biryani order for New Year celebrations
ನಿಮಿಷಕ್ಕೆ ಎರಡು ಬಿರಿಯಾನಿ ಡೆಲಿವರಿ ನೀಡಿದ ಸ್ವಿಗ್ಗಿ

By

Published : Jan 2, 2023, 4:37 PM IST

ಹೈದರಾಬಾದ್(ತೆಲಂಗಾಣ): ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಬಿರಿಯಾನಿ ರುಚಿ ಸವಿದಿದ್ದಾರೆ. ಡಿಸೆಂಬರ್ 31ರ ರಾತ್ರಿ ಇದಕ್ಕೆ ಭಾರಿ ಬಿರಿಯಾನಿ ಆರ್ಡರ್‌ಗಳನ್ನು ಮಾಡಲಾಗಿತ್ತು. ಬೇಡಿಕೆಗೆ ಅನುಗುಣವಾಗಿ, ಹೈದರಾಬಾದ್‌ನ ಜನಪ್ರಿಯ ರೆಸ್ಟೋರೆಂಟ್ ಶನಿವಾರ ರಾತ್ರಿ 15 ಸಾವಿರ ಕೆಜಿ ಬಿರಿಯಾನಿ ಮಾರಾಟ ಮಾಡಿವೆ.

ಲೆಕ್ಕಾಚಾರದ ಪ್ರಕಾರ ನಿಮಿಷಕ್ಕೆ ಎರಡು ಬಿರಿಯಾನಿ ವಿತರಿಸಿದಂತಾಗಿದೆ. ದೇಶಾದ್ಯಂತ ಹೈದರಾಬಾದ್ ಬಿರಿಯಾನಿಗೆ ಬಾರಿ ಆರ್ಡರ್‌ಗಳು ಬರುತ್ತಿವೆ ಎಂದು ಸ್ವಿಗ್ಗಿ ಬಹಿರಂಗಪಡಿಸಿದೆ. ಟ್ವಿಟರ್‌ನಲ್ಲಿ ನಡೆಸಿದ ಸಮೀಕ್ಷೆಯ ಫಲಿತಾಂಶಗಳ ಪ್ರಕಾರ, 75.4 ಶೇ ಆರ್ಡರ್‌ಗಳು ಹೈದರಾಬಾದ್ ಬಿರಿಯಾನಿಯಿಂದಲೇ ಬಂದಿವೆ. ಲಖನೌ ಬಿರಿಯಾನಿಗೇ ಶೇ 14.2 ರಷ್ಟು ಜನ ಆರ್ಡರ್​ ಮಾಡಿದರೆ, ಕೋಲ್ಕತ್ತಾ ಬಿರಿಯಾನಿ ಶೇ 10.4 ರಷ್ಟು ಮಾರಾಟವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಅತಿ ಹೆಚ್ಚು ವಿತರಿಸಲಾದ ಆಹಾರ ಪದಾರ್ಥಗಳ ಪಟ್ಟಿಯಲ್ಲಿ ಬಿರಿಯಾನಿ ಅಗ್ರಸ್ಥಾನದಲ್ಲಿದೆ. ಸ್ವಿಗ್ಗಿ ಶನಿವಾರ ರಾತ್ರಿ 10.25 ರ ವೇಳೆಗೆ ದೇಶಾದ್ಯಂತ 3.50 ಲಕ್ಷ ಬಿರಿಯಾನಿ ಆರ್ಡರ್‌ಗಳನ್ನು ತಲುಪಿಸಿದೆ. ಬಿರಿಯಾನಿ ನಂತರ, ಪಿಜ್ಜಾಗಳು ಮತ್ತು ಚಿಪ್ಸ್ ಪ್ಯಾಕೆಟ್‌ಗಳಿಗೆ ಹೆಚ್ಚಿನ ಬೇಡಿಕೆ ಬಂದಿತ್ತು ಎಂದು ತಿಳಿಸಿದೆ.

ಮದ್ಯದಲ್ಲಿ 215.75 ಕೋಟಿ ಆದಾಯ ಗಳಿಕೆ:ಹೈದರಾಬಾದ್​ನಲ್ಲಿ 2,17,399 ಕೇಸ್​ ಐಎಂಎಲ್​ ಮದ್ಯ ಮತ್ತು 1,28,446 ಕೇಸ್​ ಬಿಯರ್‌ ಮಾರಾಟವಾಗಿದೆ. ಹೊಸ ವರ್ಷದ ಮುನ್ನಾದಿನ ಬರೋಬ್ಬರಿ 215.74 ಕೋಟಿ ರೂ. ಆದಾಯ ಮದ್ಯದಿಂದ ಬಂದಿದೆ ಎಂದು ತೆಲಂಗಾಣದ ಅಬಕಾರಿ ಇಲಾಖೆ ತಿಳಿಸಿದೆ.

ಕಳೆದ ವರ್ಷ ಹೊಸ ವರ್ಷದ ಮುನ್ನಾದಿನದಂದು ರೂ.171.93 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿತ್ತು. ವರ್ಷಾಂತ್ಯದ ಮಾರಾಟದಲ್ಲಿ 43 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 925.92 ಕೋಟಿ ರೂಪಾಯಿ ಮದ್ಯ ಮಾರಾಟವಾಗಿದ್ದು, ಡಿಸೆಂಬರ್ 25 ರಿಂದ ಡಿಸೆಂಬರ್ 31 ರವರೆಗೆ 1,111.29 ಕೋಟಿ ರೂಪಾಯಿಗಳ ಮದ್ಯ ಮಾರಾಟ ಮಾಡಲಾಗಿದೆ.

ಅಬಕಾರಿ ಇಲಾಖೆ ನೀಡಿರುವ ಅಂಕಿ- ಅಂಶಗಳ ಪ್ರಕಾರ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸುಮಾರು 185 ಕೋಟಿ ರೂಪಾಯಿ ಹೆಚ್ಚು ಮದ್ಯ ಮಾರಾಟವಾಗಿದೆ. ಕಳೆದ ವರ್ಷದಂತೆ ವೈನ್ ಶಾಪ್‌ಗಳಲ್ಲಿ ಮಾರಾಟಕ್ಕೆ ಎರಡು ಗಂಟೆಗಳ ಹೆಚ್ಚುವರಿ ಸಮಯವನ್ನು ನೀಡಲಾಯಿತು.

ಇದನ್ನೂ ಓದಿ:ಅಬಕಾರಿ ಇಲಾಖೆಗೆ ಕಿಕ್ಕೇರಿಸಿದ ಹೊಸ ವರ್ಷ.. ಲಕ್ಷಾಂತರ ಲೀಟರ್​ ಮದ್ಯ ಮಾರಾಟ, ನೂರಾರು ಕೋಟಿ ಆದಾಯ

ABOUT THE AUTHOR

...view details