ನವದೆಹಲಿ:ಭಾರತದಲ್ಲಿ ಬಿಸಿಲಿನ ಬೇಗೆ ಆರಂಭವಾಗಿದೆ. ಜನರು ಆರಂಭದ ಬಿಸಿಲಿಗೆ ತತ್ತರಿಸುತ್ತಿದ್ದಾರೆ. ದೇಶದ ಕೆಲವೊಂದು ಭಾಗದಲ್ಲಿ ಮುಂದಿನ ನಾಲ್ಕೈದು ದಿನಗಳಲ್ಲಿ ಮತ್ತಷ್ಟು ಬಿಸಿಲು ಹೆಚ್ಚಾಗುವ ಸಾಧ್ಯತೆಯಿದೆ ಭಾರತೀಯ ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ.
ದೆಹಲಿಯ ಮೂಲ ನಿಲ್ದಾಣವಾದ ಸಫ್ದರ್‌ಜಂಗ್‌ನಲ್ಲಿ 39.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಮತ್ತು ಗುರುವಾರ ಮತ್ತು ಶುಕ್ರವಾರದಂದು ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಇರಲಿದೆ. ಪಶ್ಚಿಮ ರಾಜಸ್ಥಾನದ ಹೆಚ್ಚಿನ ಭಾಗಗಳಲ್ಲಿ, ಹಿಮಾಚಲ ಪ್ರದೇಶದ ಹಲವು ಭಾಗಗಳಲ್ಲಿ ಮತ್ತು ಹರಿಯಾಣದ ಕೆಲವು ಭಾಗಗಳಲ್ಲಿ ತೀವ್ರ ಬಿಸಿಲಿನ ಶಾಖ ಕಂಡು ಬಂದರೆ, ಉತ್ತರಪ್ರದೇಶ, ಪೂರ್ವ ರಾಜಸ್ಥಾನ, ಮಧ್ಯಪ್ರದೇಶದ ಕೆಲವು ಭಾಗಗಳಲ್ಲಿ ಮತ್ತು ಜಮ್ಮು-ಕಾಶ್ಮೀರದಲ್ಲಿ ಸಾಧರಣ ಮಟ್ಟದ ಬಿಸಲಿನ ಬೇಗೆ ಕಂಡು ಬರುತ್ತಿದೆ.
ಓದಿ:ಆಂಧ್ರದ ಶ್ರೀಶೈಲಂನಲ್ಲಿ ಕನ್ನಡಿಗರು, ಸ್ಥಳೀಯರ ನಡುವೆ ಘರ್ಷಣೆ: ವಾಹನಗಳು, ಅಂಗಡಿಗಳಿಗೆ ಹಾನಿ
ಮಹಾರಾಷ್ಟ್ರ ದಾಖಲೆ: ಮಹಾರಾಷ್ಟ್ರದ ಚಂದ್ರಾಪುರದಲ್ಲಿ 44.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾದರೆ, ಅಕೋಲಾದಲ್ಲಿ (ಮಹಾರಾಷ್ಟ್ರ) 43.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಈ ಮೂಲಕ ಭಾರತದಾದ್ಯಂತ ಅತಿ ಹೆಚ್ಚು ಗರಿಷ್ಠ ತಾಪಮಾನವನ್ನು ದಾಖಲಿಸಿದ ನಗರಗಳಾಗಿವೆ.
41 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ತಾಪಮಾನ ದಾಖಲು:
- ಗುಜರಾತ್ನ ರಾಜ್ಕೋಟ್ನಲ್ಲಿ 41.3, ಅಮ್ರೇಲಿಯಲ್ಲಿ 41.5, ಭುಜ್ನಲ್ಲಿ 41.8 ಮತ್ತು ಸುರೇಂದ್ರ ನಗರದಲ್ಲಿ 41.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ
- ಮಹಾರಾಷ್ಟ್ರದ ಅಮರಾವತಿಯಲ್ಲಿ 41.8, ವಾಶಿಮ್ನಲ್ಲಿ 42.5, ವಾರ್ಧಾದಲ್ಲಿ 42.8, ನಾಗ್ಪುರದಲ್ಲಿ 42.1, ಬ್ರಹ್ಮಪುರಿಯಲ್ಲಿ 41.8 ಮತ್ತು ಗೊಂಡಿಯಾದಲ್ಲಿ 41.5, ಮಾಲೆಗಾಂವ್ನಲ್ಲಿ 41, ಸೊಲ್ಲಾಪುರದಲ್ಲಿ 42.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ
- ರಾಜಸ್ಥಾನದ ಗಂಗಾನಗರದಲ್ಲಿ 41.3, ಚುರುದಲ್ಲಿ 43, ಬಿಕಾನೇರ್ದಲ್ಲಿ 42.5, ಜೈಸಲ್ಮೇರ್ದಲ್ಲಿ 41.8, ಬಾರ್ಮರ್ದಲ್ಲಿ 42.7, ಜೋಧ್‌ಪುರದಲ್ಲಿ 41.2, ಪಿಲಾನಿಯಲ್ಲಿ 42.8 ಮತ್ತು ಕೋಟಾದಲ್ಲಿ 41.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ
- ಮಧ್ಯಪ್ರದೇಶದ ರತ್ಲಂನಲ್ಲಿ 41.8, ಗ್ವಾಲಿಯರ್ನಲ್ಲಿ 41.7, ರಾಜ್‌ಗಢದಲ್ಲಿ 42, ಖಾಂಡ್ವಾದಲ್ಲಿ 42.1, ಖಾರ್ಗೋನ್ನಲ್ಲಿ 42.4, ಧಾರ್ನಲ್ಲಿ 41.2, ಖಜುರಾಹೊದಲ್ಲಿ 42.4, ದಾಮೋಹ್ದಲ್ಲಿ 41.8 ಮತ್ತು ಸತ್ನಾದಲ್ಲಿ 41.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ
- ಕರ್ನಾಟಕದ ರಾಯಚೂರಿನಲ್ಲಿ 42.8, ಕಲಬುರಗಿಯಲ್ಲಿ 42 ಮತ್ತು ಬೀದರ್ ಜಿಲ್ಲೆಯಲ್ಲಿ 39 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು IMD ಡೇಟಾ ತೋರಿಸಿದೆ.
ಓದಿ:ಯುದ್ಧದ ಕುರಿತು ರಷ್ಯಾ ಮಿಲಿಟರಿ ಸಲಹೆಗಾರರಿಂದ ಪುಟಿನ್ಗೆ ತಪ್ಪು ಮಾಹಿತಿ: ಶ್ವೇತಭವನ
ಹೆಚ್ಚಿನ ಭಾಗಗಳಲ್ಲಿ ಸಾಧಾರಣ ಬಿಸಿಲಿನ ಮಟ್ಟದಿಂದ ತೀವ್ರ ಬಿಸಿಲಿನ ಮಟ್ಟಕ್ಕೆ ಇಂದಿನಿಂದ ಹಲವು ಭಾಗಗಳಲ್ಲಿ ಹೆಚ್ಚಾಗುವ ಸಾಧ್ಯತೆಯಿದೆ. ಕೆಲವು ಭಾಗಗಳಲ್ಲಿ ಪಶ್ಚಿಮ ಉತ್ತರ ಪ್ರದೇಶ, ಪೂರ್ವ ರಾಜಸ್ಥಾನ ಮತ್ತು ಪಶ್ಚಿಮ ಮಧ್ಯಪ್ರದೇಶ, ದಕ್ಷಿಣ ಹರಿಯಾಣ ಮತ್ತು ದೆಹಲಿಯಲ್ಲಿ ಸಾಧಾರಣ ಮಟ್ಟದ ಬಿಸಿಲು ಮುಂದುವರಿಯು ಸಾಧ್ಯತೆ ಹೆಚ್ಚಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.