ಚೆನ್ನೈ(ತಮಿಳುನಾಡು):ಭಾರತೀಯ ಸೇನೆಯಲ್ಲಿ ಮೇಜರ್ ಆಗಿ ಕಾರ್ಯನಿರ್ವಹಿಸಿ ನಿವೃತ್ತಿಯಾಗಿರುವ ಸ್ಮಿತಾ ಚತುರ್ವೇದಿ ಹೆಚ್ಚೂ ಕಡಿಮೆ ಮೂರು ದಶಕಗಳ ಹಿಂದೆ ಚೆನ್ನೈ ರಕ್ಷಣಾ ತರಬೇತಿ ಅಕಾಡೆಮಿಯಲ್ಲಿ ತರಬೇತಿ ಮುಗಿಸಿದ್ದರು. ಇದೀಗ ಇವರ ಪುತ್ರ ಕೂಡಾ ಇದೇ ಅಕಾಡೆಮಿಯಿಂದ ಪದವಿ ಪಡೆದು ಸೇನೆಗೆ ನೇಮಕವಾಗಿದ್ದಾರೆ. ಈ ಮೂಲಕ ತಾಯಿಯ ಹಾದಿ ಅನುಸರಿಸಿರುವ ಮಗನಿಗೆ ವಿಶೇಷ ಕಾರಣಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಚೆನ್ನೈನಲ್ಲಿರುವ ಸೇನಾಧಿಕಾರಿಗಳ ತರಬೇತಿ ಅಕಾಡೆಮಿಯಲ್ಲಿ ನಡೆದ ಸಮಾರಂಭದಲ್ಲಿ ಮಾಲ್ಡೀವ್ಸ್ ರಕ್ಷಣಾ ಪಡೆಗಳ ಮುಖ್ಯಸ್ಥ ಮೇಜರ್ ಜನರಲ್ ಅಬ್ದುಲ್ಲಾ ಶಮಾಲ್ ಕೆಡೆಟ್‌ಗಳಿಗೆ ಪದವಿ ಪ್ರದಾನ ಮಾಡಿದ್ದಾರೆ. ಈ ಸಂದರ್ಭದಲ್ಲಿ ಒಟ್ಟು 125 ಪುರುಷ ಮತ್ತು 41 ಮಹಿಳಾ ಕೆಡೆಟ್‌ಗಳನ್ನು ಅಕಾಡೆಮಿಯಿಂದ ಭಾರತೀಯ ಸೇನೆಗೆ ಸೇರ್ಪಡೆಗೊಳಿಸಲಾಯಿತು.