ಕರ್ನಾಟಕ

karnataka

By

Published : Apr 24, 2021, 10:20 PM IST

ETV Bharat / bharat

ರೈತರ ಹೋರಾಟಕ್ಕೆ ಕೈ ಜೋಡಿಸಿದ್ದ ಗ್ರೇಟಾ ಥನ್​​ಬರ್ಗ್ : ಭಾರತದ ಕೊರೊನಾ ಉಲ್ಬಣಕ್ಕೆ 'ಹಾರ್ಟ್ ಬ್ರೇಕಿಂಗ್' ಟ್ವೀಟ್!

ತನ್ನ ಟ್ವೀಟ್ ಜೊತೆಗೆ, ಥನ್ಬರ್ಗ್ ಭಾರತದ ಚಾಲ್ತಿಯಲ್ಲಿ ಇರುವ ಆರೋಗ್ಯ ಬಿಕ್ಕಟ್ಟಿನ ಬಗ್ಗೆ ಸುದ್ದಿ ವರದಿಯನ್ನು ಹಂಚಿಕೊಂಡಿದ್ದಾರೆ. ದೇಶವು ಪ್ರತಿದಿನ 3 ಲಕ್ಷ ಪ್ರಕರಣಗಳನ್ನು ವರದಿ ಆಗುತ್ತಿದೆ..

ಗ್ರೇಟಾ ಥನ್​​ಬರ್ಗ್
ಗ್ರೇಟಾ ಥನ್​​ಬರ್ಗ್

ನವದೆಹಲಿ :ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರ ಹೋರಾಟಕ್ಕೆ ಕೈ ಜೋಡಿಸಿದ್ದ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್​ಬರ್ಗ್, ಭಾರತದಲ್ಲಿ ನಡೆಯುತ್ತಿರುವ ಕೊರೊನಾ ವೈರಸ್ ಬಿಕ್ಕಟ್ಟು ಹೃದಯ ವಿದ್ರಾವಕವಾಗಿದೆ ಎಂದು ಹೇಳಿದ್ದಾರೆ.

ಹವಾಮಾನ ಬದಲಾವಣೆಯ ಕಾರ್ಯಕರ್ತೆ ಜಾಗತಿಕ ಸಮುದಾಯಕ್ಕೆ ಮುಂದೆ ಬಂದು ಬಿಕ್ಕಟ್ಟಿನಿಂದ ಭಾರತಕ್ಕೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.

ಭಾರತದ ಇತ್ತೀಚಿನ ಬೆಳವಣಿಗೆಗಳು ನೋಡಿದರೇ ಹೃದಯ ವಿದ್ರಾವಕವಾಗಿದೆ. ಜಾಗತಿಕ ಸಮುದಾಯವು ಹೆಜ್ಜೆ ಹಾಕಬೇಕು ಮತ್ತು ತಕ್ಷಣವೇ ಅಗತ್ಯವಾದ ಸಹಾಯನೀಡಬೇಕು ಎಂದು 18 ವರ್ಷದ ಥನ್​ಬರ್ಗ್ ಟ್ವೀಟ್ ಮಾಡಿದ್ದಾರೆ.

ಗ್ರೇಟಾ ಥನ್​​ಬರ್ಗ್ ಟ್ವೀಟ್

ತನ್ನ ಟ್ವೀಟ್ ಜೊತೆಗೆ, ಥನ್ಬರ್ಗ್ ಭಾರತದ ಚಾಲ್ತಿಯಲ್ಲಿ ಇರುವ ಆರೋಗ್ಯ ಬಿಕ್ಕಟ್ಟಿನ ಬಗ್ಗೆ ಸುದ್ದಿ ವರದಿಯನ್ನು ಹಂಚಿಕೊಂಡಿದ್ದಾರೆ. ದೇಶವು ಪ್ರತಿದಿನ 3 ಲಕ್ಷ ಪ್ರಕರಣಗಳನ್ನು ವರದಿ ಆಗುತ್ತಿದೆ.

ಹೊಸ ದಾಖಲೆಯ ಗರಿಷ್ಠ ಮಟ್ಟದಲ್ಲಿದ್ದು, ಭಾರತವು 3.46 ಲಕ್ಷ ಕೋವಿಡ್ -19 ಸೋಂಕುಗಳೊಂದಿಗೆ ವಿಶ್ವದ ಅತಿ ಹೆಚ್ಚು ದೈನಂದಿನ ಉಲ್ಬಣ ದಾಖಲಿಸಿದೆ. ದೇಶಾದ್ಯಂತ 1.66 ಕೋಟಿಗೂ ಅಧಿಕ ಕೇಸ್​ ದಾಟಿದೆ.

ABOUT THE AUTHOR

...view details