ಕರ್ನಾಟಕ

karnataka

ETV Bharat / bharat

ಕೊರೊನಾ ಮುಕ್ತವಾದರೂ ಮನೆಗೋಗಲು ಮನಸ್ಸಿಲ್ಲ.. ವೈದ್ಯೆಯನ್ನು ತಬ್ಬಿಕೊಂಡು ವೃದ್ಧೆಯ ಕೃತಜ್ಞತೆ!

ವೈದ್ಯರ ನಿರಂತರ ಸೇವೆಯಿಂದ ಅಜ್ಜಿವೋರ್ವರು ಕೋವಿಡ್​ಅನ್ನು ಗೆದ್ದಿದ್ದಾರೆ. ಸೋಂಕಿನಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ವೃದ್ಧೆ ಲತಾಬೆನ್​ಗೆ ಮನೆಗೆ ಹೋಗಲು ಇಷ್ಟವಿರಲಿಲ್ಲ. ಹೆತ್ತ ತಾಯಿಯಂತೆ ನೋಡಿಕೊಂಡಿದ್ದ ವೈದ್ಯೆ, ಸಿಬ್ಬಂದಿಯನ್ನು ಬಿಟ್ಟೋಗಲು ಮನಸ್ಸಿಗೆ ತುಂಬ ಭಾರವಾಗಿದೆ ಎಂದು ಹೇಳಿ ಅಳುತ್ತಿದ್ದಳು. ಆಗ ಆಸ್ಪತ್ರೆಯ ಸಿಬ್ಬಂದಿ ಕಣ್ಣಾಲೆಗಳು ಸಹ ತೇವಗೊಂಡಿದ್ದವು.

ವೃದ್ಧೆ
ವೃದ್ಧೆ

By

Published : May 17, 2021, 4:52 PM IST

ಸೂರತ್​(ಗುಜರಾತ್​): ಇಳಿವಯಸ್ಸಿನಲ್ಲಿ ಮಹಾಮಾರಿ ವಕ್ಕರಿಸಿತು. ಇನ್ನೇನು ಜೀವನ ಪಯಣ ಮುಗಿದೇ ಹೋಯಿತು ಅಂದುಕೊಂಡಿದ್ದ ವೃದ್ಧೆ ಈಗ ಫುಲ್​ ಆ್ಯಕ್ಟಿವ್​ ಆಗಿದ್ದಾರೆ. ಮರುಜನ್ಮ ಪಡೆದವರಂತೆ ಖುಷಿಯಾಗಿರುವ ಈ ಅಜ್ಜಿ ವೈದ್ಯರ ಸೇವೆಗೆ ಮನಸೋತಿದ್ದಾರೆ.

ಹೌದು, ಗುಜರಾತ್​ನಲ್ಲಿ ಇಂತಹದೊಂದು ಪ್ರಕರಣ ವೈದ್ಯರ ಮೇಲಿನ ನಂಬಿಕೆಯನ್ನು ಇಮ್ಮಡಿಗೊಳಿಸಿದೆ. ಸತತ ಪ್ರಯತ್ನದಿಂದ ವೈರಸ್‌ನಿಂದ ತನ್ನನ್ನು ಪಾರು ಮಾಡಿ ತನಗೆ ಮತ್ತೊಂದು ಜನ್ಮ ನೀಡಿದ ವೈದ್ಯರು, ಸಿಬ್ಬಂದಿಯನ್ನು ಬಿಟ್ಟು ಹೋಗಲು ಈ ವೃದ್ಧೆ ಮನಸ್ಸಿಗೆ ಭಾರವೆನಿಸಿದೆ.

ಸೂರತ್‌ ಮೂಲದ ಲತಾಬೆನ್ ಕೋವಿಡ್ ಸೋಂಕಿಗೆ ಒಳಗಾಗಿ ಇಲ್ಲಿನ ಮೋದಿ ಐಸೋಲೇಷನ್​ ಸೆಂಟರ್​ಗೆ ದಾಖಲಾಗಿದ್ರು. ಈ ವೇಳೆ ಅವರನ್ನು ಬದುಕಿಸಲು ಆಸ್ಪತ್ರೆ ಸಿಬ್ಬಂದಿ ಬಹಳಷ್ಟು ಆರೈಕೆ ಮಾಡಿದ್ರು.

ವೈದ್ಯೆಯನ್ನು ಬಿಟ್ಟು ಹೋಗದ ವೃದ್ಧೆ

ಹೆತ್ತ ತಾಯಿಯಂತೆ ನೋಡಿದ್ದ ಸಿಬ್ಬಂದಿ

ವೈದ್ಯರ ಸಹಾಯದಿಂದ ರೋಗದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಲತಾಬೆನ್​ಗೆ ಮನೆಗೆ ಹೋಗಲು ಇಷ್ಟವಿರಲಿಲ್ಲ. ಹೆತ್ತ ತಾಯಿಯಂತೆ ನೋಡಿಕೊಂಡಿದ್ದ ವೈದ್ಯೆ, ಸಿಬ್ಬಂದಿಯನ್ನು ಬಿಟ್ಟು ಹೋಗಲು ಮನಸ್ಸು ಒಪ್ಪುತ್ತಿಲ್ಲ ಎಂದು ಹೇಳಿ ಆನಂದಭಾಷ್ಪ ಸುರಿಸಿದ ಅಜ್ಜಿಯನ್ನು ಕಂಡ ಸಿಬ್ಬಂದಿಯ ಕಣ್ಣಾಲೆಗಳು ತುಂಬಿದ್ದವು.

ಹೆತ್ತ ತಾಯಿಯಂತೆ ನೋಡಿದ್ದ ಸಿಬ್ಬಂದಿ

ನನಗೆ ಮನೆಗೆ ಹೋಗಳು ಇಷ್ಟವಿಲ್ಲ. ಎಲ್ಲರೂ ನನಗೆ ಎಷ್ಟೋ ಸೇವೆ ಮಾಡಿದ್ದೀರಿ, ಇಲ್ಲಿದ್ದರೆ ನನಗೆ ಮನೆಯಲ್ಲಿದ್ದ ಭಾವನೆ ಇರುತ್ತದೆ ಎಂದು ಹೇಳಿ ಅಳುತ್ತಿದ್ದಂತೆ, ಡಾ. ಪೂಜಾಸಹ್ನಿ, ಲತಾಬೆನ್​ ಅವರನ್ನು ಸಮಾಧಾನಪಡಿಸಿ ಬಳಿಕ ಆಕೆಗೆ ತುಳಸಿ ಗಿಡ ಕೊಟ್ಟು ಮನೆಗೆ ಕಳುಹಿಸಿದ್ದಾರೆ. ಇಲ್ಲಿಗೆ ಬರುವ ಸೋಂಕಿತರಿಗೆ ಉತ್ತಮ ಚಿಕಿತ್ಸೆ ನೀಡಿ ಅವರನ್ನು ಸಂತೋಷವಾಗಿಡಲು ಬಹಳ ಶ್ರಮಿಸುತ್ತಿದ್ದೇವೆ ಎಂದು ಡಾ. ಪೂಜಾಸಹ್ನಿ ಹೇಳಿದರು.

ABOUT THE AUTHOR

...view details