ಕರ್ನಾಟಕ

karnataka

ETV Bharat / bharat

ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆ ಇಂದಿಗೂ ಮರೀಚಿಕೆ!

ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಸೂಕ್ತ ಆರೋಗ್ಯ ಸೌಲಭ್ಯಗಳು ಲಭ್ಯವಿಲ್ಲ. ಈ ಕುರಿತು ಒಂದು ವರದಿ.

healthcare-in-rural-india-is-still-a-mirage
healthcare-in-rural-india-is-still-a-mirage

By

Published : Apr 14, 2023, 5:38 PM IST

ಛತ್ತೀಸ್​ಗಢ: 19 ವರ್ಷದ ಪೂನಂ ಗೊಂಡಾ, ಆನುವಂಶಿಕ ರಕ್ತದ ಸಮಸ್ಯೆಯಾದ ಸಿಕಲ್​ ಸೆಲ್​ ಸಮಸ್ಯೆ ವಿರುದ್ಧ ಹೋರಾಡುತ್ತಿದ್ದಾರೆ. ಕಳೆದ ಏಳು ತಿಂಗಳಿನಿಂದ ನೋವಿನಲ್ಲೇ ಸಮಯ ಕಳೆಯುತ್ತಿರುವುದಾಗಿ ಅವರು ಹೇಳುತ್ತಾರೆ. ಆದರೆ, ಸಾಮಾಜಿಕ ಕಾರ್ಯಕರ್ತರಾದ ಗೀತಾ ಅಯಮ್​ ಅವರ ಪರಿಸ್ಥಿತಿ ವಿಭಿನ್ನ. ಈಕೆ ಪೂನಂನಂತೆಯೇ ಸಮಸ್ಯೆ ಹೊಂದಿದ್ದರೂ, ಉತ್ತಮ ಕಾಳಜಿಯಿಂದಾಗಿ ವಿಭಿನ್ನ ಜೀವನ ನಡೆಸುತ್ತಿದ್ದಾರೆ. ದೇಶದ ಉತ್ತಮ ವೈದ್ಯಕೀಯ ಸೌಲಭ್ಯ ಪಡೆಯದ ಗ್ರಾಮೀಣ ಪ್ರದೆಶದ ಜನರು ಸೂಕ್ತ ಸಮಯದಲ್ಲಿ ಸರಿಯಾದ ವೈದ್ಯಕೀಯ ಚಿಕಿತ್ಸೆ ಪಡೆಯದೇ ಯಾವ ರೀತಿಯ ಸಮಸ್ಯೆ ಅನುಭವಿಸುತ್ತಿದ್ದಾರೆ ಎಂಬುದಕ್ಕೆ ಪೂನಂ ಉದಾಹರಣೆ.

1947ರ ಸ್ವಾತಂತ್ರ್ಯದ ಬಳಿಕ ಭಾರತದ ಜನಸಂಖ್ಯೆ ನಾಲ್ಕು ಪಟ್ಟು ಹೆಚ್ಚಾಗಿದೆ. ವೈದ್ಯಕೀಯ ಸೇವೆಯೂ ನಿರೀಕ್ಷಿತ ಮಟ್ಟದ ಪ್ರಗತಿ ಸಾಧಿಸಿಲ್ಲ. ದೇಶದೆಲ್ಲೆಡೆ ಸೂಕ್ತ ವೈದ್ಯಕೀಯ ಕೇಂದ್ರಗಳಿಲ್ಲ. ಒಂದು ವೇಳೆ ಕೇಂದ್ರವಿದ್ದರೂ ಸಿಬ್ಬಂದಿ ಸಮಸ್ಯೆ ಮತ್ತು ಅಗತ್ಯ ಔಷಧ ಸಿಗದೇ ಸಮಸ್ಯೆ ಅನುಭವಿಸುವಂತಾಗಿದೆ. ಲಕ್ಷಾಂತರ ಜನರು ಆರೋಗ್ಯ ಸೇವೆ ಎಂದರೆ ದೂರದ ಸರ್ಕಾರಿ ಅಸ್ಪತ್ರೆಗಳತ್ತ ಪ್ರಯಾಣ ಎಂದೇ ಭಾವಿಸಿದ್ದಾರೆ. ಈ ರೀತಿಯ ಅಸಮಾನತೆ ಭಾರತದಲ್ಲಿ ಹೊಸದಲ್ಲ. ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ಭಾರತ ಚೀನಾವನ್ನೇ ಮೀರಿಸುತ್ತಿದೆ. ಇದರ ಜೊತೆಗೆ ಆದಾಯದಿಂದ ಆರೋಗ್ಯ ಸೇವೆಯವರೆಗೆ ಭಾರಿ ಪರಿಣಾಮವನ್ನು ಕಾಣಬಹುದಾಗಿದೆ.

ಸಿಕೆಲ್​ ಸೆಲ್​ ಎಂದರೇನು?: ಆನುವಂಶಿಕ ಕಾಯಿಲೆಯಾದ ಸಿಕಲ್​ ಸೆಲ್​ ದೀರ್ಘಕಾಲಿನ ಆರೋಗ್ಯ ಸಮಸ್ಯೆಯಾಗಿದೆ. ಪೂನಾಂ ಅವರಲ್ಲಿದು ತಡವಾಗಿ ಪತ್ತೆಯಾಗಿದ್ದು, ಸಮಸ್ಯೆ ನಿಯಂತ್ರಿಸಿ, ನೋವನ್ನು ಕಡಿಮೆ ಮಾಡುವ ಯಾವುದೇ ಚಿಕಿತ್ಸೆ ಆಕೆ ಪಡೆದಿಲ್ಲ. ನೋವಿನ ಕಾರಣದಿಂದಾಗಿ ಆಕೆಗೆ ಕೆಲಸ ಮಾಡಲಾಗುತ್ತಿಲ್ಲ. ಸಮಸ್ಯೆ ಉಲ್ಭಣದಿಂದ ಮುಂದಿನ ಆರೋಗ್ಯ ಚಿಕಿತ್ಸೆಯ ಲಭ್ಯತೆಯೂ ಕಡಿಮೆಯಾಗಿದೆ.

ಪೂನಂ ಅವರಂತೆ ಅಯಮ್​ ಕೂಡ ಛತ್ತೀಸ್​ಗಢದ ಸ್ಥಳೀಯ ಕೃಷಿ ಕುಟುಂಬದಲ್ಲಿ ಜನಿಸಿದವರು. ಆಕೆಯ ಸಮಸ್ಯೆ ಆರಂಭವಾಗುವ ಮೊದಲೇ ಆಕೆ ವಿದ್ಯಾಭ್ಯಾಸವನ್ನು ಮುಗಿಸಿದ್ದಳು. ಅಲ್ಲದೆ ನಗರದ ಲಾಭರಹಿತ ಸಾರ್ವಜನಿಕ ಆರೋಗ್ಯ ಸಂಸ್ಥೆ ಸಂಘವಾರಿಯಲ್ಲಿ ಕೆಲಸ ಮಾಡಲು ಶುರು ಮಾಡಿದ್ದರು. ಮಧ್ಯವಯಸ್ಸಿನ ಶಿಕ್ಷಿತೆಯ ಜೊತೆಗೆ ಡಾಕ್ಟರ್​ ಆಗಿ ಕೆಲಸ ಮಾಡುತ್ತಿದ್ದ ಈಕೆಗೆ ಈ ಸಮಸ್ಯೆ ಪತ್ತೆಯಾದಾಗ ತಕ್ಷಣಕ್ಕೆ ಚಿಕಿತ್ಸೆ ಪಡೆದರು. ಇದು ರೋಗವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುವುದರ ಜೊತೆಗೆ ಉತ್ತಮ ಕಾಳಜಿ ಪಡೆಯಲು ಸಾಧ್ಯವಾಗಿದೆ.

ಗ್ರಾಮೀಣ ಆರೋಗ್ಯ ವ್ಯವಸ್ಥೆ: ಭಾರತದ ಗ್ರಾಮೀಣ ಆರೋಗ್ಯ ವ್ಯವಸ್ಥೆ ದುರ್ಬಲಗೊಳ್ಳುತ್ತಿದ್ದು, ಹಲವು ದಶಕಗಳಿಂದಲೇ ನಿರ್ಲಕ್ಷ್ಯಗೊಂಡಿದೆ. ಆರೋಗ್ಯ ಸೇವೆ ಎಂಬುದು ನಗರದಲ್ಲಿನ ಉತ್ತಮ ವೇತನದ ಕೆಲಸಗಳಿಗೆ ಮಾತ್ರ ಎಂಬಂತಾಗಿದೆ. ಭಾರತ 2019ರಲ್ಲಿ ಭಾರತ ಒಟ್ಟು ದೇಶಿಯ ಉತ್ಪಾದನೆ ಮೇಲೆ 3.01 ರಷ್ಟು ವ್ಯಯಿಸಿದ್ದು, ಇದು ನೆರೆಯ ಚೀನಾ ಶೇ 5.3 ಮತ್ತು ನೇಪಾಳದ ಶೇ 4.45ಕ್ಕಿಂತ ಕಡಿಮೆ ಎಂದು ವಿಶ್ವ ಬ್ಯಾಂಕ್​ ತಿಳಿಸಿದೆ.

ಭಾರತದ ಬಡ ರಾಜ್ಯಗಳಲ್ಲಿ ಛತ್ತೀಸ್​ಗಢ ಒಂದಾಗಿದ್ದು, ಹೆಚ್ಚಿನ ಜನಸಂಖ್ಯೆ ಹೊಂದಿದೆ. ಇಲ್ಲಿ 16 ಸಾವಿರ ಜನರಿಗೆ ಒಬ್ಬ ವೈದ್ಯರಿದ್ದಾರೆ. ಇದನ್ನು ನಗರಗಳಿಗೆ ಹೋಲಿಕೆ ಮಾಡಿದರೆ, ನವದೆಹಲಿಯಲ್ಲಿ 300 ಜನರಿಗೆ ಒಬ್ಬ ವೈದ್ಯರಿದ್ದಾರೆ. ಬಡ ಜನರಿಗೆ ಉತ್ತಮ ಆರೋಗ್ಯ ಸೇವೆ ಲಭ್ಯವಾಗುತ್ತಿಲ್ಲ ಎಂದು ಸಂಘವಾರಿ ಸಾರ್ವಜನಿಕ ಆರೋಗ್ಯ ಸ್ಪೆಷಲಿಸ್ಟ್​ ಯೋಗೇಶ್​ ಜೈನ್​ ತಿಳಿಸಿದ್ದಾರೆ.

ಪೂನಾಂ 19 ವರ್ಷಕ್ಕೆ ತನ್ನ ಜೀವನದ ಅರ್ಥ ಬವಣೆ ಕಳೆದಿದ್ದಾರೆ. ಆಕೆಯ ತಾಯಿ ಕೂಡ ಪೂನಾಂ 6 ವರ್ಷವಿದ್ದಾಗಲೇ ಇದೇ ಸಿಕಲ್​ ಸೆಲ್​ ಡಿಸೀಸ್‌ ನಿಂದ ಸಾವನ್ನಪ್ಪಿದ್ದರು. ಮನೆಗೆ ಆಸರೆಯಾಗಬೇಕು ಎಂಬ ಕಾರಣಕ್ಕೆ ಪೂನಾಂ 14 ವರ್ಷಕ್ಕೆ ಶಾಲೆ ಬಿಟ್ಟು ಮನೆ ಸಹಾಯಕ್ಕೆ ಮುಂದಾದರು. ತನ್ನ ಅನಾರೋಗ್ಯ ನಿವಾರಣೆಗೆ ಆಕೆ ಪದೇ ಪದೇ ರಕ್ತದ ವರ್ಗಾವಣೆಗೆ ಒಳಗೊಳ್ಳಬೇಕು. ಇದಕ್ಕಾಗಿ ಆಕೆ ಜಿಲ್ಲಾ ಆಸ್ಪತ್ರೆಗೆ ಪದೇ ಪದೇ ಮೊರೆ ಹೋಗಬೇಕು.

ಸದ್ಯ ಆಕೆಯ ಪರಿಸ್ಥಿತಿ ಕೆಟ್ಟದಾಗಿದ್ದು, ಹಾಸಿಗೆಯಿಂದ ಮೇಲೇಳುವುದು ಕಷ್ಟವಾಗಿದೆ. 2021ರಲ್ಲಿ ಆಕೆ ಬೋನ್​ ಟಿಶ್ಯೂ ಸರ್ಜರಿಗೆ ಒಳಗಾಗಿದ್ದು, ನಡೆದಾಡುವುದೂ ಅಸಾಧ್ಯವಾಗಿದೆ. ಕೂರುವುದು, ಮಲಗುವಾಗಲೂ ನೋವಿನ ಅನುಭವ ಆಗಿದೆ. ದಿನದ ಬಹುತೇಕ ಸಮಯವನ್ನು ಆಕೆ ಪ್ಲಾಸ್ಟಿಕ್​ ಚೇರ್​ ಮೇಲೆ ಕಳೆಯುತ್ತಾಳೆ. ಕೊಂಚ ಹೊತ್ತು ಬಾಗಿಲಿನಿಂದ ಇಣುಕಿ ಜಗತ್ತನ್ನು ಕಾಣುತ್ತಾಳೆ.

ನೋವು ನಿವಾರಕ ಔಷಧ: 2021ರಲ್ಲಿ ಭಾರತ ಅನುಮೋದಿಸಿರುವ ನೋವು ನಿವಾರಕ ಔಷಧಿ ಹೈಡ್ರೊಕ್ಸರಿಯಾ ಅನೇಕ ರೋಗಿಗಳಿಗೆ ಸಾಮಾನ್ಯ ಜೀವನ ನಡೆಸಲು ಅವಕಾಶ ನೀಡಿದೆ. ಆದರೆ, ಪೂನಾಂ ಔಷಧ ವಾರದ ಹಿಂದೆ ಖಾಲಿಯಾಗಿದ್ದು, ಆಕೆಯ ಇರುವ ಸುರ್ಗುಜ್​ ಜಿಲ್ಲೆಯ ಹಳ್ಳಿಯಲ್ಲಿ ಎಲ್ಲೂ ಲಭಿಸುವುದಿಲ್ಲ.

ಈ ಹೈಡ್ರೊಕ್ಸರಿಯಾ ಔಷಧವನ್ನು ಪೂನಾಂ ಪಡೆದಾಗ ಕೆಲವು ವಾರಗಳ ಕಾಲ ಅವರು ನೋವಿನಿಂದ ಶಮನ ಕಾಣುತ್ತಾರೆ. ಅಲ್ಲದೇ ಮೂರು ಮಿಲಿಯನ್​ ಜನರಿಗೆ ಜಿಲ್ಲೆಯಲ್ಲಿ ಒಂದು ದೊಡ್ಡ ಆಸ್ಪತ್ರೆ ಇದೆ. ಈ ಆಸ್ಪತ್ರೆಗೆ ಹೋಗಿ ಔಷಧ ತರಬೇಕು ಎಂದರೆ ಪೂನಾಂ ತಂದೆ ಪ್ರತಿ ತಿಂಗಳು ಕೆಲಸ ಬಿಟ್ಟು ಯಾರ ಬಳಿಯಾದರೂ ಮೋಟರ್​ ಬೈಕ್​ ಪಡೆದು ದೂರ ಪ್ರಯಾಣಿಸಬೇಕು. ಒಂದು ಡಾಲರ್​ಗಿಂತ ಕಡಿಮೆ ಆದಾಯವನ್ನು ಪಡೆಯುವ ಕುಟುಂಬಕ್ಕೆ ಇದು ದೊಡ್ಡ ತ್ಯಾಗವಾಗಿದೆ.

ಪರಿಸ್ಥಿತಿ ಮತ್ತಷ್ಟು ಕೆಟ್ಟದಾದಗ ಪೂನಂ ಆಯಮ್​ ಅವರನ್ನು ಸಂಪರ್ಕಿಸಿದರು. ಆಕೆ ಔಷಧ ತಲುಪಿಸುತ್ತಿದ್ದಾರೆ. ಆದರೆ, ಅನೇಕ ರೋಗಿಗಳು ಆರೋಗ್ಯ ಕೇಂದ್ರದ ವ್ಯವಸ್ಥೆಯನ್ನು ಹೊಂದಿಲ್ಲ ಮತ್ತು ಆಯಮ್​ ಕೂಡ ಈ ರೀತಿ ಸಹಾಯ ಮಾಡಲು ಸಾಧ್ಯವಾಗಿಲ್ಲ. ಸಿಕಲ್​ ಸೆಲ್​ ಅನುವಂಶಿಕ ಕಾಯಿಲೆಯಾಗಿದ್ದು, ಇದು ಕೆಂಪು ರಕ್ತ ಕಣದ ಮೂಲಕ ದೇಹಕ್ಕೆ ಆಮ್ಲಜನಕವನ್ನು ಪೂರೈಕೆ ಮಾಡುವುದಿಲ್ಲ. ಇದರಿಂದ ಅನೇಕ ನೋವು ಉಂಟಾಗುವುದರ ಜೊತೆಗೆ ಅಂಗಾಂಶಗಳ ಹಾನಿಯಾಗಲಿದೆ. ಇದು ಸಾಮಾನ್ಯವಾಗಿ ಆಫ್ರಿಕಾ, ಇಂಡಿಯಾ ಮತ್ತು ಲ್ಯಾಟಿನ್​ ಅಮೆರಿಕ ಮತ್ತು ಮೆಡಿಟೇರಿಯನ್​ ಕೆಲವು ಪ್ರದೇಶದಲ್ಲಿ ಕಂಡು ಬರುವ ರೋಗವಾಗಿದೆ.

ಭಾರತದಲ್ಲಿ ಈ ಕಾಯಿಲೆ ವ್ಯಾಪಕವಾಗಿದ್ದು, ನಿಖರವಾಗಿಲ್ಲ. ಇದು ಸ್ಥಳೀಯ ಜನಸಂಖ್ಯೆಯ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಕೆಲವು ರೋಗಗಳು ಅಂಚಿನ ಸಮಯದಾಯದರಲ್ಲಿದ್ದು, ನಿರ್ಲಕ್ಷಿತಗೊಂಡಿದೆ. ಅಮೆರಿಕ ಈ ಸಿಕಲ್​ ಸೆಲ್​ ಕಾಯಿಲೆಗೆ ನೋವು ಶಮನಕಾರಿಯಾದ ಹೈಡ್ರೊಕ್ಸರಿಯಾ ಔಷಧವನ್ನು ಒಪ್ಪಿದ ಎರಡು ದಶಕಗಳ ಬಳಿಕ ಭಾರತ ಕೂಡ ಇದನ್ನು ಅನುಮೋದಿಸಿತು. ಭಾರತ 2047ರಲ್ಲಿ ಈ ರೋಗ ನಿರ್ಮೂಲನೆಗೆ ಪಣತೊಟ್ಟಿದೆ. ಇದರ ಅಂಗವಾಗಿ 2025ರಲ್ಲಿ ಹೆಚ್ಚಿನ ಅಪಾಯ ಹೊಂದಿರುವ 70 ಮಿಲಿಯನ್​ ಜನರಲ್ಲಿ ರೋಗದ ಆರಂಭದಲ್ಲೇ ಪತ್ತೆ ಮಾಡಲಾಗುವುದು. ಈ ರೋಗವನ್ನು ವಂಶವಾಹಿನಿಯಲ್ಲಿ ಹೊಂದಿರುವವರು ಮದುವೆಯಾಗುವುದರಿಂದ ಆಗುವ ಅಪಾಯ ಕುರಿತು ಸಮಾಲೋಚನೆ ಹೊಂದಿದೆ. ಭಾರತದಲ್ಲಿ 2023ರಲ್ಲಿ 10 ಮಿಲಿಯನ್​ ಜನರನ್ನು ಪತ್ತೆ ಪರೀಕ್ಷೆ ನಡೆಸುವ ಗುರಿ ಹೊಂದಿದೆ.

ಇದನ್ನೂ ಓದಿ:ಎಡಗಾಲು ಬದಲು ಬಲಗಾಲಿಗೆ ಚಿಕಿತ್ಸೆ, ನಿರ್ಲಕ್ಷ್ಯ.. ಇಬ್ಬರು ಖಾಸಗಿ ವೈದ್ಯರ ಮಾನ್ಯತೆ ರದ್ದು ಪಡಿಸಿದ ಸರ್ಕಾರ

ABOUT THE AUTHOR

...view details