ಕರ್ನಾಟಕ

karnataka

ETV Bharat / bharat

'ಲಸಿಕೆಗೂ ಮುನ್ನ ವಿಮೆ ನೀಡಿ' - ಆರೋಗ್ಯ ಕಾರ್ಯಕರ್ತರ ಒತ್ತಾಯ

ಲಸಿಕೆ ಹಾಕಿಸಿಕೊಂಡು ನಮಗೇನಾದರೂ ಆದರೆ ಅದಕ್ಕೆ ಯಾರು ಜವಾಬ್ದಾರಿ? ಲಸಿಕೆ ಹಾಕುವ ಮುನ್ನ ಆರೋಗ್ಯ ವಿಮೆ ನೀಡಿ ಎಂದು ಆರೋಗ್ಯ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

health workers refuse to vaccinate in Haryana and Gujarat
ಕೊರೊನಾ ವ್ಯಾಕ್ಸಿನ್​ ಪಡೆಯಲು ನಿರಾಕರಿಸಿದ ಆರೋಗ್ಯ ಕಾರ್ಯಕರ್ತರು

By

Published : Jan 16, 2021, 1:37 PM IST

Updated : Jan 16, 2021, 2:08 PM IST

ರಾಜ್​ಕೋಟ್​/ರೆವಾರಿ: ಗುಜರಾತ್​ ಹಾಗೂ ಹರಿಯಾಣ ರಾಜ್ಯಗಳಲ್ಲಿ ಕೋವಿಡ್​ ಲಸಿಕೆ ಪಡೆಯಲು ಆರೋಗ್ಯ ಕಾರ್ಯಕರ್ತರು ಮೀನಮೇಷ ಎಣಿಸಿದ್ದಾರೆ.

ಲಸಿಕೆ ಹಾಕಿಸಿಕೊಂಡು ನಮಗೇನಾದರು ಹೆಚ್ಚುಕಡಿಮೆಯಾದರೆ ಅದರ ಜವಾಬ್ದಾರಿಯನ್ನು ಯಾರು ತೆಗೆದುಕೊಳ್ಳುತ್ತಾರೆ ಎಂದು ಹರಿಯಾಣ ರೆವಾರಿಯಲ್ಲಿ ಆರೋಗ್ಯ ಕಾರ್ಯಕರ್ತರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಕಡಿಮೆ ಅವಧಿಯಲ್ಲಿ 2 'ಮೇಡ್ ಇನ್ ಇಂಡಿಯಾ' ಲಸಿಕೆಗಳು ಸಿದ್ಧ: ವ್ಯಾಕ್ಸಿನೇಷನ್ ಡ್ರೈವ್​ಗೆ ಚಾಲನೆ ನೀಡಿದ ಪಿಎಂ

ಇನ್ನು ವ್ಯಾಕ್ಸಿನೇಷನ್​​ನಿಂದ ಯಾವುದಾದರೂ ಅಡ್ಡಪರಿಣಾಮಗಳಿದ್ದರೆ ಅದಕ್ಕೆ ಆರೋಗ್ಯ ವಿಮೆ ಲಭ್ಯವಿರಬೇಕು. ಲಸಿಕೆ ಹಾಕುವ ಮುನ್ನ ವಿಮೆ ನೀಡುವ ಭರವಸೆ ನೀಡುವಂತೆ ಗುಜರಾತ್​​ನ ರಾಜ್​ಕೋಟ್​ನಲ್ಲಿ ಆರೋಗ್ಯ ಕಾರ್ಯಕರ್ತರು ಬೇಡಿಕೆಯಿಟ್ಟಿದ್ದಾರೆ.

Last Updated : Jan 16, 2021, 2:08 PM IST

ABOUT THE AUTHOR

...view details