ಕರ್ನಾಟಕ

karnataka

ETV Bharat / bharat

ನಿಮಗೊಂದು ಸಲಾಂ: ಹರಿಯುವ ನದಿ ದಾಟಿ ವ್ಯಾಕ್ಸಿನ್​ ನೀಡುವ ಆರೋಗ್ಯ ಕಾರ್ಯಕರ್ತರು - ನದಿ ದಾಟಿ ವ್ಯಾಕ್ಸಿನ್ ನೀಡುವ ಆರೋಗ್ಯ ಕಾರ್ಯಕರ್ತರು

ಆರೋಗ್ಯ ಕಾರ್ಯಕರ್ತರಿಬ್ಬರು ಹರಿಯುವ ನದಿ ದಾಟಿ, ಗ್ರಾಮವೊಂದಕ್ಕೆ ತೆರಳಿ ಕೋವಿಡ್​​ ವ್ಯಾಕ್ಸಿನ್​ ನೀಡುತ್ತಿದ್ದಾರೆ. ಅದರ ವಿಡಿಯೋ ಇದೀಗ ವೈರಲ್​ ಆಗಿದೆ.

Health workers cross a river
Health workers cross a river

By

Published : Jul 10, 2021, 10:45 PM IST

ರಾಜೌರಿ(ಜಮ್ಮು-ಕಾಶ್ಮೀರ): ದೇಶಾದ್ಯಂತ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ವ್ಯಾಕ್ಸಿನ್​​ ನೀಡಲಾಗ್ತಿದ್ದು, ಇದಕ್ಕೋಸ್ಕರ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇನ್ನಿಲ್ಲದ ಯೋಜನೆ ರೂಪಿಸಿಕೊಂಡಿವೆ. ಎಲ್ಲರಿಗೂ ವ್ಯಾಕ್ಸಿನ್​ ಸಿಗಬೇಕೆಂಬ ಉದ್ದೇಶದಿಂದ ಸ್ಥಳೀಯ ಮಟ್ಟದಲ್ಲಿ ಆರೋಗ್ಯ ಕಾರ್ಯಕರ್ತರು ಹಗಲು-ರಾತ್ರಿ ಕೆಲಸ ಮಾಡ್ತಿದ್ದು, ಅವರ ಸೇವೆಗೆ ಇನ್ನಿಲ್ಲದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಹರಿಯುವ ನದಿ ದಾಟಿ ವ್ಯಾಕ್ಸಿನ್ ನೀಡುವ ಆರೋಗ್ಯ ಕಾರ್ಯಕರ್ತರು

ಆರೋಗ್ಯ ಕಾರ್ಯಕರ್ತರು, ನರ್ಸ್​​ ಹಾಗೂ ಆಶಾ ಕಾರ್ಯಕರ್ತೆಯರು ತಮ್ಮ ಪ್ರಾಣ ಪಣಕ್ಕಿಟ್ಟು ಕೆಲವೊಂದು ಪ್ರದೇಶಗಳಿಗೆ ತೆರಳಿ ಕೋವಿಡ್​ ವ್ಯಾಕ್ಸಿನ್​ ನೀಡ್ತಿದ್ದು, ಸದ್ಯ ಅಂತಹದೊಂದು ವಿಡಿಯೋ ವೈರಲ್​ ಆಗಿದೆ. ಜಮ್ಮು-ಕಾಶ್ಮೀರದ ರಾಜೌರಿ ಜಿಲ್ಲೆಯ ಟ್ರಾಲಾ ಗ್ರಾಮಕ್ಕೆ ತೆರಳಲು ನದಿ ದಾಟಬೇಕಾಗಿದ್ದು, ಆರೋಗ್ಯ ಕಾರ್ಯಕರ್ತರಿಬ್ಬರು ತುಂಬಿ ಹರಿಯುತ್ತಿರುವ ನದಿ ದಾಟಿ ತಮ್ಮ ಕೆಲಸ ಮಾಡ್ತಿದ್ದಾರೆ.

ಕೋವಿಡ್​ ವ್ಯಾಕ್ಸಿನ್​ ಡಬ್ಬಿ ಹೆಗಲಿಗೆ ಹಾಕಿಕೊಂಡು ತುಂಬಿ ಹರಿಯುತ್ತಿರುವ ನದಿ ದಾಟಿ, ಅಲ್ಲಿನ ಜನರಿಗೆ ವ್ಯಾಕ್ಸಿನ್​ ನೀಡಲಾಗುತ್ತಿದೆ. ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಪ್ರಕಾರ ಓರ್ವ ಮಹಿಳೆ ಹಾಗೂ ಪುರುಷ ಸಿಬ್ಬಂದಿ ಒಬ್ಬರನ್ನೊಬ್ಬರು ಹಿಡಿದುಕೊಂಡು ನದಿ ದಾಟುತ್ತಿದ್ದಾರೆ. ಅಲ್ಲಿನ ಆರೋಗ್ಯಧಿಕಾರಿ ಈ ವಿಡಿಯೋ ಹಂಚಿಕೊಂಡಿದ್ದಾರೆ.

ABOUT THE AUTHOR

...view details