ವೈಶಾಲಿ(ಬಿಹಾರ):ದೇಶದಲ್ಲಿ ಅನೇಕ ಚಿತ್ರ-ವಿಚಿತ್ರ ಪ್ರೇಮ ಪ್ರಕರಣ ಬೆಳಕಿಗೆ ಬಂದಿವೆ.ಆದರೆ, ಬಿಹಾರದಲ್ಲಿ ನಡೆದಿರುವ ಪ್ರೇಮಕಥೆವೊಂದು ಇವೆಲ್ಲವೂದರಕ್ಕಿಂತಲೂ ಭಿನ್ನವಾಗಿದೆ. ಕೇವಲ ಐದು ದಿನದಲ್ಲಿ ಪರಸ್ಪರ ಪ್ರೀತಿಸಲು ಶುರು ಮಾಡಿದ್ದ ಜೋಡಿ ತಾಯಿಯ ಅನುಮತಿ ಪಡೆದುಕೊಂಡು ಸಪ್ತಪದಿ ತುಳಿದಿದೆ.
ಆಸ್ಪತ್ರೆಯಲ್ಲಿ ತಾಯಿಗೆ ಚಿಕಿತ್ಸೆ ಕೊಡಿಸಲು ಬಂದ ಯುವತಿಯೊಬ್ಬಳಿಗೆ ಅಲ್ಲಿನ ಆರೋಗ್ಯ ಕಾರ್ಯಕರ್ತನ ಮೇಲೆ ಲವ್ ಆಗಿದ್ದು, ಇದೀಗ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಾಯಿಯ ಆರೋಗ್ಯ ಹದಗೆಟ್ಟ ಕಾರಣ ಇಲ್ಲಿನ ಹಾಜಿಪುರ್ ಸದರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೋಸ್ಕರ ದಾಖಲು ಮಾಡಲಾಗಿತ್ತು. ತಾಯಿಗೆ ಚಿಕಿತ್ಸೆ ನಡೆಯುತ್ತಿದ್ದ ವೇಳೆ ಯುವತಿಗೆ ಆಸ್ಪತ್ರೆಯಲ್ಲಿ ಕೆಲಸ ಮಾಡ್ತಿದ್ದ ಆರೋಗ್ಯ ಕಾರ್ಯಕರ್ತ ಮಣಿಂದರ್ ಕುಮಾರ್ ಸಿಂಗ್ ಪರಿಚಯವಾಗಿದ್ದು, ಅದು ಪ್ರೀತಿಗೆ ತಿರುಗಿದೆ.
ಈ ವೇಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ತಾಯಿ ಬಳಿ ಇಬ್ಬರ ಪ್ರೇಮದ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಅದಕ್ಕೆ ತಾಯಿ ಕೂಡ ಗ್ರೀನ್ ಸಿಗ್ನಲ್ ನೀಡಿದ್ದು, ಇದರ ಬೆನ್ನಲ್ಲೇ ದೇವಸ್ಥಾನದಲ್ಲಿ ಇಬ್ಬರ ಮದುವೆ ಸಹ ನಡೆಸಿದೆ. ಹುಡುಗಿಯ ತಂದೆ ತುಂಬಾ ವರ್ಷಗಳ ಹಿಂದೆ ಸಾವನ್ನಪ್ಪಿದ್ದರಿಂದ ಮಗಳ ಜವಾಬ್ದಾರಿ ತಾಯಿ ಮೇಲೆ ಇತ್ತು. ಆದರೆ, ಇದೀಗ ಮಗಳು ಸಪ್ತಪದಿ ತುಳಿದಿದ್ದಾಳೆ. ಮಗಳು ಸಪ್ತಪದಿ ತುಳಿದ ಎರಡನೇ ದಿನಕ್ಕೆ ತಾಯಿ ಕೂಡ ಸಾವನ್ನಪ್ಪಿದ್ದಾಳೆ.
ಇದನ್ನೂ ಓದಿ:'ರಬ್ ನೇ ಬನಾದಿ ಜೋಡಿ' 36 ಇಂಚಿನ ವರನ ಕೈ ಹಿಡಿದ 34 ಇಂಚಿನ ವಧು!
ಏಳೇ ದಿನದಲ್ಲಿ ಮದುವೆ: ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಇಬ್ಬರ ನಡುವೆ ಪ್ರೇಮಾಂಕುರವಾಗಿದ್ದು, ಕೇವಲ 7 ದಿನದಲ್ಲೇ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಾಜಿಪುರದ ಐತಿಹಾಸಿಕ ದೇವಾಲಯ ಪಾತಾಳೇಶ್ವರನಾಥ ದೇವಾಲಯದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆ ನಡೆದಿದೆ. ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಸಿಬ್ಬಂದಿ ಭಾಗಿಯಾಗಿದ್ದರು.