ನವದೆಹಲಿ: ಡೈರೆಕ್ಟರೇಟ್ ಜನರಲ್ ಆಫ್ ಹೆಲ್ತ್ ಸರ್ವಿಸ್ (ಡಿಜಿಹೆಚ್ಎಸ್) ಹೊರಡಿಸಿದ ಕೊರೊನಾ ಹೊಸ ಮಾರ್ಗಸೂಚಿಗಳಂತೆ ಐವರ್ಮೆಕ್ಟಿನ್, ಎಚ್‌ಸಿಕ್ಯು ಮತ್ತು ಇನ್ಹಲೇಷನ್ ಬುಡೆಸೊನೈಡ್ ಔಷಧ ಬಳಕೆಯನ್ನು ಕೈಬಿಟ್ಟಿವೆ. ಹಾಗೆಯೇ ಕೋವಿಡ್ -19 ಸೋಂಕನ್ನು ಪತ್ತೆಹಚ್ಚುವ ಮತ್ತು ಪರೀಕ್ಷಿಸುವ ಉದ್ದೇಶದಿಂದ ಹೈ ರೆಸಲ್ಯೂಷನ್ ಸಿಟಿ (ಎಚ್‌ಆರ್‌ಸಿಟಿ) ಎದೆ ಸ್ಕ್ಯಾನ್ ಅಗತ್ಯ ಇಲ್ಲ ಎಂದು ತಿಳಿಸಲಾಗಿದೆ.
ಪ್ರಮುಖ ವಿಷಯ ಎಂದರೆ ಡಿಜಿಹೆಚ್ಎಸ್ ಹೊರಡಿಸಿದ ಮಾರ್ಗಸೂಚಿಗಳು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಮಾರ್ಗಸೂಚಿಗಳಿಗೆ ವಿರುದ್ಧವಾಗಿವೆ. ಕೋವಿಡ್ 19 ರೋಗಿಗಳಿಗೆ ಚಿಕಿತ್ಸೆ ನೀಡಲು ಐವರ್ಮೆಕ್ಟಿನ್ ಮತ್ತು ಹೈಡ್ರಾಕ್ಸಿಕ್ಲೋರೋಕ್ವಿನ್ ಎರಡನ್ನೂ ಬಳಸಲು ಶಿಫಾರಸು ಮಾಡಿದೆ.
ಔಷಧಿಗಳ ಬಳಕೆಯು ವೈಜ್ಞಾನಿಕ ಪುರಾವೆಗಳ ಲಭ್ಯತೆಯನ್ನು ಅವಲಂಬಿಸಿರುತ್ತದೆ ಎಂದು ಐಸಿಎಂಆರ್ ಹಿರಿಯ ಸಲಹೆಗಾರ ಮತ್ತು ಖ್ಯಾತ ಆರೋಗ್ಯ ತಜ್ಞ ಡಾ. ಸುನೀಲಾ ಗರ್ಗ್ ಈ ಸಂಬಂಧ ಪ್ರತಿಕ್ರಿಯಿಸಿದ್ದಾರೆ.