ನವದೆಹಲಿ:ಉಜ್ಬೇಕಿಸ್ತಾನದಲ್ಲಿ ಡಾಕ್-1 ಮ್ಯಾಕ್ಸ್ ಕೆಮ್ಮು ಸಿರಪ್ ಸೇವಿಸಿ 18 ಮಕ್ಕಳು ಮೃತಪಟ್ಟಿರುವ ಆರೋಪದ ಹಿನ್ನೆಲೆ ಕೇಂದ್ರ ಆರೋಗ್ಯ ಸಚಿವಾಲಯವು ನೋಯ್ಡಾ ಮೂಲದ ಮರಿಯನ್ ಬಯೋಟೆಕ್‌ನ ಡಾಕ್-1 ಮ್ಯಾಕ್ಸ್ ಉತ್ಪಾದನೆಯನ್ನು ನಿಷೇಧಿಸಿದೆ.
ಸಿಡಿಎಸ್‌ಸಿಒ ತಂಡ ಪರಿಶೀಲನೆ: ಉಜ್ಬೇಕಿಸ್ತಾನ್ ದೇಶಕ್ಕೆ ಕೆಮ್ಮು ಸಿರಪ್ ಮತ್ತು ಇತರ ಔಷಧಿಗಳ ಪ್ರಮುಖ ಪೂರೈಕೆದಾರ ಭಾರತವಾಗಿದೆ. ಗುರುವಾರ, ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (ಸಿಡಿಎಸ್‌ಸಿಒ) ಮತ್ತು ಯುಪಿ ಡ್ರಗ್ಸ್ ಕಂಟ್ರೋಲ್ ಜಂಟಿ ತಂಡವು ನೋಯ್ಡಾದ ಮರಿಯನ್ ಬಯೋಟೆಕ್‌ನ ಉತ್ಪಾದನಾ ಘಟಕವನ್ನು ಪರಿಶೀಲಿಸಿತು.
"CDSCO ತಂಡವೂ ಪರಿಶೀಲಿಸಿ, ಕೆಮ್ಮು ಸಿರಪ್ ಡಾಕ್ 1 ಮ್ಯಾಕ್ಸ್‌ನಲ್ಲಿ ಕಲಬೆರಕೆ ವರದಿ ಪ್ರಕಟಿಸಿದೆ. ಕಳೆದ ರಾತ್ರಿ ಅದರ ನೋಯ್ಡಾ ಘಟಕದಲ್ಲಿ ಮರಿಯನ್ ಬಯೋಟೆಕ್‌ನ ಎಲ್ಲ ಉತ್ಪಾದನೆ ಸಿರಪ್ಗಳಿಗೆ ತಡೆ ನೀಡಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ಇನ್ನೂ ನಡೆಯಲಿದೆ ಎಂದು ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ.
CDSCO ಉಜ್ಬೇಕಿಸ್ತಾನ್‌ನ ರಾಷ್ಟ್ರೀಯ ಔಷಧ ನಿಯಂತ್ರಕ ಜತೆಗೆ ನಿರಂತರ ಸಂಪರ್ಕದಲ್ಲಿದೆ. ಮರಿಯನ್ ಬಯೋಟೆಕ್ ರಫ್ತಿನ ಪರವಾನಗಿ ಪಡೆದ ಬಳಿಕ Dok1 ಮ್ಯಾಕ್ಸ್ ಕಾಗ್ ಮತ್ತು ಟ್ಯಾಬ್ಲೆಟ್‌ಗಳನ್ನು ತಯಾರಿಸಲು ಪ್ರಾರಂಭಿಸಿತು. ಅದು ಉತ್ತರ ಪ್ರದೇಶದ ಡ್ರಗ್ ಕಂಟ್ರೋಲರ್‌ದ ಪರವಾನಗಿಯನ್ನು ಹೊಂದಿದೆ. "ಕಂಪನಿಯು ಯಾವುದೇ ಅವ್ಯವಹಾರದಲ್ಲಿ ತೊಡಗಿಸಿಕೊಂಡಿರುವುದು ಕಂಡುಬಂದರೆ, ಅದರ ಪರವಾನಗಿಯನ್ನು ರದ್ದುಗೊಳಿಸಬಹುದು.ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು 'ಈಟಿವಿ ಭಾರತ'ಗೆ ತಿಳಿಸಿದ್ದಾರೆ.
ಈ ಮೊದಲು ಕೆಮ್ಮಿನ ಸಿರಪ್‌ನ ಮಾದರಿಗಳನ್ನು ಪರೀಕ್ಷೆಗಾಗಿ ಚಂಡೀಗಢದ ಪ್ರಾದೇಶಿಕ ಔಷಧ ಪರೀಕ್ಷಾ ಪ್ರಯೋಗಾಲಯಕ್ಕೆ (RDTL) ಕಳುಹಿಸಲಾಗಿದೆ. Doc-1 Max syrup ಬಳಕೆಯ ನಂತರ ಉಜ್ಬೇಕಿಸ್ತಾನ್‌ನಲ್ಲಿ 18 ಮಕ್ಕಳು ಸಾವಿಗೀಡಾದ ನಂತರ, ಉಜ್ಬೇಕಿಸ್ತಾನ್ ಸರ್ಕಾರವು ಈಗಾಗಲೇ Marion Biotech ನ ಕಾನೂನು ಪ್ರತಿನಿಧಿಯ ವಿರುದ್ಧ ಕಾನೂನು ಕ್ರಮವನ್ನು ಪ್ರಾರಂಭಿಸಿದೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕೂಡ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ.