ಕರ್ನಾಟಕ

karnataka

ETV Bharat / bharat

ಒಮ್ಮೆ ಈ ವಿಡಿಯೋ ನೋಡಿ:  ಗ್ರಾಮಕ್ಕೆ ರಸ್ತೆ ಸಂಪರ್ಕ ಇಲ್ಲದಿದ್ದರೂ, ಜನರಿಗೆ ಸಿಕ್ತು ಲಸಿಕೆ..! - ಪಂಚಾಯಿತಿ ಮುಖ್ಯಸ್ಥ ತಿಲಕ್ ವರ್ಮಾ

ಸ್ವಾತಂತ್ರ್ಯ ಬಂದು 7 ದಶಕಗಳು ಪೂರೈಸಿದರೂ ಸರ್ಟೆಯೋಲಾ ಪಂಚಾಯಿತಿ ವ್ಯಾಪ್ತಿಗೆ ರಸ್ತೆ ಸೌಲಭ್ಯಗಳಿಲ್ಲ. ಆದರೂ, ಜನರ ರಕ್ಷಣೆಗಾಗಿ ಆರೋಗ್ಯ ಇಲಾಖೆ ಸಿಬ್ಬಂದಿ ಅಪಾಯ ಲೆಕ್ಕಿಸದೇ ತೆರಳಿ ವ್ಯಾಕ್ಸಿನ್ ನೀಡಿದ್ದಾರೆ. ವೈದ್ಯಕೀಯ ತಂಡವು ಒಂದೆಡೆ ಜೆಸಿಬಿ ಬಕೆಟ್​ನಲ್ಲಿ ಕುಳಿತು ಹಳ್ಳ ದಾಟಬೇಕಾಯಿತು.

ಗ್ರಾಮಕ್ಕೆ ರಸ್ತೆ ಸಂಪರ್ಕವಿಲ್ಲದಿದ್ದರೂ, ಜನರಿಗೆ ಸಿಕ್ತು ಲಸಿಕೆ
ಗ್ರಾಮಕ್ಕೆ ರಸ್ತೆ ಸಂಪರ್ಕವಿಲ್ಲದಿದ್ದರೂ, ಜನರಿಗೆ ಸಿಕ್ತು ಲಸಿಕೆ

By

Published : May 29, 2021, 7:25 PM IST

ಕಾರ್ಸೋಗ್ (ಹಿಮಾಚಲ ಪ್ರದೇಶ): ಜಿಲ್ಲೆಯ ಸರ್ಟೆಯೋಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ವೃದ್ಧರಿಗೆ ಲಸಿಕೆ ನೀಡಲು ಆರೋಗ್ಯ ಇಲಾಖಾ ಸಿಬ್ಬಂದಿ ಬೆಟ್ಟ, ಗುಡ್ಡಗಳನ್ನು ಹತ್ತಿಳಿದು ಪ್ರಯಾಣಿಸಬೇಕಿದೆ.

ಸ್ವಾತಂತ್ರ್ಯ ಬಂದು 7 ದಶಕಗಳು ಪೂರೈಸಿದರೂ ಸರ್ಟೆಯೋಲಾ ಪಂಚಾಯಿತಿ ವ್ಯಾಪ್ತಿಗೆ ರಸ್ತೆ ಸೌಲಭ್ಯಗಳಿಲ್ಲ. ಆದರೂ, ಜನರ ರಕ್ಷಣೆಗಾಗಿ ಆರೋಗ್ಯ ಇಲಾಖೆ ಸಿಬ್ಬಂದಿ ಅಪಾಯ ಲೆಕ್ಕಿಸದೆ ತೆರಳಿ ವ್ಯಾಕ್ಸಿನ್ ನೀಡಿದ್ದಾರೆ. ವೈದ್ಯಕೀಯ ತಂಡವು ಒಂದೆಡೆ ಜೆಸಿಬಿ ಬಕೆಟ್​ನಲ್ಲಿ ಕುಳಿತು ಹಳ್ಳ ದಾಟಬೇಕಾಯಿತು.

ಗ್ರಾಮಕ್ಕೆ ರಸ್ತೆ ಸಂಪರ್ಕವಿಲ್ಲದಿದ್ದರೂ, ಜನರಿಗೆ ಸಿಕ್ತು ಲಸಿಕೆ

ಆರೋಗ್ಯ ಇಲಾಖೆಗೆ ಧನ್ಯವಾದ

ಗ್ರಾಮಕ್ಕೆ ರಸ್ತೆ ಸೌಲಭ್ಯವಿಲ್ಲದಿದ್ದರೂ ಬೆಟ್ಟಗುಡ್ಡ ಏರಿ ಬಂದು ವೃದ್ಧರಿಗೆ ಲಸಿಕೆ ನೀಡಿದ್ದಕ್ಕೆ ಪಂಚಾಯಿತಿ ವ್ಯಾಪ್ತಿಯ ಜನತೆ ಆರೋಗ್ಯ ಇಲಾಖೆಗೆ ಧನ್ಯವಾದ ತಿಳಿಸಿದ್ದಾರೆ. ಇನ್ಮುಂದೆಯೂ ಜನರಿಗೆ ತೊಂದರೆ ತಪ್ಪಿಸುವ ನಿಟ್ಟಿನಲ್ಲಿ ಗ್ರಾಮಗಳಿಗೆ ಬಂದು ಲಸಿಕೆ ನೀಡಲು ವೈದ್ಯರಿಗೆ ಮನವಿ ಮಾಡಲಾಗಿದೆ ಎಂದು ಪಂಚಾಯಿತಿ ಮುಖ್ಯಸ್ಥ ತಿಲಕ್ ವರ್ಮಾ ತಿಳಿಸಿದ್ದಾರೆ.

ABOUT THE AUTHOR

...view details