ಚೆನ್ನೈ(ತಮಿಳುನಾಡು) : ಸೋಮವಾರ ಹೃದಯಾಘಾತದಿಂದ ತಿರುಮಲ ತಿರುಪತಿ ದೇವಸ್ಥಾನದ ಇಒ ಧರ್ಮರೆಡ್ಡಿ ಅವರ ಪುತ್ರ ಚಂದ್ರಮೌಳಿ ರೆಡ್ಡಿ ಅವರ ಆರೋಗ್ಯ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ಚೆನ್ನೈನ ಕಾವೇರಿ ಆಸ್ಪತ್ರೆಯ ಸಹ ಸಂಸ್ಥಾಪಕ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಅರವಿಂದನ್ ಸೆಲ್ವರಾಜ್ ಹೇಳಿದ್ದಾರೆ.
ಹಠಾತ್ ಹೃದಯ ಸ್ತಂಭನದಿಂದ ಚೆನ್ನೈನ ಕಾವೇರಿ ಆಸ್ಪತ್ರೆಗೆ ಡಿ.18 ರಂದು ಚಂದ್ರಮೌಳಿ ರೆಡ್ಡಿ ಅವರನ್ನು ಕರೆತರಲಾಯಿಗಿತ್ತು. ತಕ್ಷಣವೇ ಅವರಿಗೆ ಕಾರ್ಡಿಯೋ ಪಲ್ಮನರಿ ರೆಸಸಿಟೇಶನ್ (CPR) ಮಾಡಲಾಯಿತು ಮತ್ತು ಅವರನ್ನು ಕ್ಯಾಥ್‌ಲ್ಯಾಬ್‌ಗೆ ಸ್ಥಳಾಂತರಿಸಲಾಗಿದೆ.