ಅರಿಶಿನ ಹಾಲು ಪ್ರಾಚೀನ ಕಾಲದಿಂದಲೂ ಪ್ರತಿ ಭಾರತೀಯನ ಮನೆಯಲ್ಲಿ ಜನಪ್ರಿಯವಾಗಿದೆ. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಅದರ ಬೇಡಿಕೆ ಮತ್ತು ಬಳಕೆಯು, ರೋಗನಿರೋಧಕ ಶಕ್ತಿ ಹೆಚ್ಚಿಸುವ ಗುಣಲಕ್ಷಣಗಳಿಂದಾಗಿ ಸಾಕಷ್ಟು ಹೆಚ್ಚಾಗಿದೆ.
ಆದರೆ, ಇದು ನಮ್ಮ ಆರೋಗ್ಯಕ್ಕೆ ಒದಗಿಸುವ ಇತರ ಕೆಲವು ಅದ್ಭುತ ಪ್ರಯೋಜನಗಳನ್ನು ನಾವು ಕಡೆಗಣಿಸಿದ್ದೇವೆ. ಇಂದು ಅನೇಕ ದೊಡ್ಡ ಎಫ್‌ಎಂಸಿಜಿ ಕಂಪನಿಗಳು ಪ್ಯಾಕ್ ಮಾಡಿದ ಗೋಲ್ಡನ್ ಹಾಲನ್ನು ಮಾರಾಟ ಮಾಡಲು ಪ್ರಾರಂಭಿಸಿವೆ. ಆದರೆ ಅದನ್ನು ಮನೆಯಲ್ಲಿಯೂ ತಯಾರಿಸಬಹುದು.
'ಗೋಲ್ಡನ್ ಮಿಲ್ಕ್'ನ ಆರೋಗ್ಯ ಪ್ರಯೋಜನಗಳು :ಇದು ಭಾರತದಲ್ಲಿ ಪ್ರಾರಂಭವಾಗಿದ್ದು, ಇದನ್ನು 'ಹಲ್ಡಿ ವಾಲಾ ದೂಧ್' ಎಂದು ಕರೆಯಲಾಗುತ್ತದೆ. ಈ ಹಾಲು ವಿಶ್ವಾದ್ಯಂತ ಸಾಕಷ್ಟು ಜನಪ್ರಿಯತೆ ಗಳಿಸಿದೆ ಮತ್ತು ಅರಿಶಿನ ಹಾಲು, ಗೋಲ್ಡನ್ ಹಾಲು, ಅರಿಶಿನ ಲ್ಯಾಟೆ ಮುಂತಾದ ಅನೇಕ ಹೆಸರುಗಳಿಂದ ಇದನ್ನು ಕರೆಯಲಾಗುತ್ತದೆ.
ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಈ ಹಾಲು ಹೆಚ್ಚು ಜನಪ್ರಿಯವಾಯಿತು. ಯಾಕೆಂದರೆ, ಇದು ಹೆಚ್ಚು ರೋಗನಿರೋಧಕ ಶಕ್ತಿ ಹೊಂದಿದೆ. ಅಲ್ಲದೇ ರೋಗನಿರೋಧಕ ಶಕ್ತಿ ಬಲಪಡಿಸಲು ಸಹಾಯ ಮಾಡುತ್ತದೆ. ಇದು ರೋಗನಿರೋಧಕ ಶಕ್ತಿ ಹೆಚ್ಚಿಸಲು ಅತ್ಯುತ್ತಮ ಮಾತ್ರವಲ್ಲ, ಇತರ ಆರೋಗ್ಯ ಪ್ರಯೋಜನಗಳನ್ನು ಸಹ ಹೊಂದಿದೆ.
1. ಕೀಲು ನೋವು ನಿವಾರಣೆ :ಅರಿಶಿನವನ್ನು ಆಯುರ್ವೇದದಲ್ಲಿ ‘ನೈಸರ್ಗಿಕ ಆಸ್ಪಿರಿನ್’ಎಂದು ಕರೆಯುತ್ತಾರೆ. ಇದು ಎಲ್ಲಾ ರೀತಿಯ ನೋವನ್ನು ನಿವಾರಿಸುತ್ತದೆ. ಅರಿಶಿನ ಹಾಲಿನಲ್ಲಿ ಕ್ಯಾಲ್ಸಿಯಂ ಇರುವುದರಿಂದ ಕೀಲುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಮೂಳೆಗಳನ್ನು ಆರೋಗ್ಯವಾಗಿರಿಸುತ್ತದೆ. ಈ ಹಾಲನ್ನು ಪ್ರತಿದಿನ ಸೇವಿಸುವುದರಿಂದ ಭವಿಷ್ಯದಲ್ಲಿ ಆಸ್ಟಿಯೊಪೊರೋಸಿಸ್ ಮತ್ತು ಸಂಧಿವಾತ ಬರುವುದನ್ನು ತಪ್ಪಿಸಬಹುದು.
2. ರೋಗನಿರೋಧಕ ಶಕ್ತಿ ಹೊಂದಿದೆ :ಅರಿಶಿನ ಹಾಲು ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದೆ. ನಮ್ಮ ದೇಹದಲ್ಲಿನ ಜೀವಕೋಶಗಳಿಗೆ ಹಾನಿಯನ್ನುಂಟು ಮಾಡುವ ಮತ್ತು ಆಕ್ಸಿಡೇಟಿವ್ ಒತ್ತಡ ಕಡಿಮೆ ಮಾಡುವ ಸ್ವತಂತ್ರ ರಾಡಿಕಲ್ ವಿರುದ್ಧ ಹೋರಾಡಲು ನಮ್ಮ ದೇಹಕ್ಕೆ ರೋಗನಿರೋಧಕಗಳು ಬೇಕಾಗುತ್ತವೆ. ಆದ್ದರಿಂದ ಇದು ನಮ್ಮ ಕ್ಯಾನ್ಸರ್, ಹೃದ್ರೋಗಗಳು ಮತ್ತು ಇತರ ಕೆಲವು ಸೋಂಕುಗಳು ಮತ್ತು ಆರೋಗ್ಯ ಸಮಸ್ಯೆಗಳ ಅಪಾಯ ಕಡಿಮೆ ಮಾಡುತ್ತದೆ.
3. ಮೆದುಳಿನ ಕಾರ್ಯಗಳನ್ನು ಸುಧಾರಿಸುತ್ತದೆ :ಮೆದುಳಿನ ಕಾರ್ಯಗಳನ್ನು ಸುಧಾರಿಸಲು ಮತ್ತು ಜ್ಞಾಪಕ ಶಕ್ತಿ ಹೆಚ್ಚಿಸಲು ಅರಿಶಿನ ಹಾಲು ಸಹಕಾರಿಯಾಗಿದೆ ಎಂದು ಕೆಲವು ಅಧ್ಯಯನಗಳು ತೋರಿಸಿವೆ. ವಯಸ್ಸಾದಂತೆ ಸಂಭವಿಸುವ ಬುದ್ಧಿಮಾಂದ್ಯತೆ ಮತ್ತು ಆಲ್ ಜೈಮರ್ ಕಾಯಿಲೆ, ನ್ಯೂರೋ ಡಿಜೆನೆರೆಟಿವ್ ಅಸ್ವಸ್ಥತೆಗಳ ಅಪಾಯ ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ ಎಂದು ಕೆಲ ಸಂಶೋಧನೆಗಳು ಸೂಚಿಸುತ್ತವೆ.