ನವದೆಹಲಿ: ಭಾರತದಲ್ಲಿನ ಯುರೋಪಿಯನ್ ರಾಷ್ಟ್ರಗಳ ಒಕ್ಕೂಟದ ಮುಖ್ಯಸ್ಥರು ಶುಕ್ರವಾರ ತಮ್ಮ ಉಕ್ರೇನಿಯನ್ ಕೌಂಟರ್‌ಪಾರ್ಟ್‌ನೊಂದಿಗೆ ಐಕಮತ್ಯ ವ್ಯಕ್ತಪಡಿಸಿದರು. ಉಕ್ರೇನ್ ಮೇಲೆ ರಷ್ಯಾದ ದಾಳಿ ನ್ಯಾಯ ಸಮ್ಮತವಲ್ಲ ಎಂದು ಖಂಡಿಸಿದರು.
ಭಾರತ ಮತ್ತು ಭೂತಾನ್‌ನ ಯುರೋಪಿಯನ್ ಒಕ್ಕೂಟದ ರಾಯಭಾರಿ ಉಗೊ ಅಸ್ಟುಟೊ, ಯುರೋಪಿಯನ್ ಒಕ್ಕೂಟ ಮತ್ತು ಅದರ ಸದಸ್ಯ ರಾಷ್ಟ್ರಗಳು ಭಾರತದಲ್ಲಿ ಉಕ್ರೇನಿಯನ್ ರಾಯಭಾರಿ ಇಗೊರ್ ಪೊಲಿಖಾ ಅವರೊಂದಿಗೆ ಒಗ್ಗಟ್ಟಿನಲ್ಲಿ ನಿಂತಿವೆ ಎಂದು ಹೇಳಿದರು.
ರಷ್ಯಾದ ಒಕ್ಕೂಟದ ಅಪ್ರಚೋದಿತ ಮತ್ತು ನ್ಯಾಯಸಮ್ಮತವಲ್ಲದ ಮಿಲಿಟರಿ ದಾಳಿಯನ್ನು ಯುರೋಪಿಯನ್ ಒಕ್ಕೂಟ ಪ್ರಬಲವಾಗಿ ವಿರೋಧಿಸುತ್ತದೆ. ಯುರೋಪಿಯನ್ ಒಕ್ಕೂಟ ಉಕ್ರೇನ್ ಮತ್ತು ಅದರ ಜನರೊಂದಿಗೆ ಇದೆ ಎಂದು ಯುರೋಪಿಯನ್ ಒಕ್ಕೂಟದ ರಾಯಭಾರಿ ಉಗೊ ಅಸ್ಟುಟೊ ಹೇಳಿದರು.