ಮುಂಬೈ:ಆನ್‌ಲೈನ್ ಪಾವತಿಯಲ್ಲಿ ಹೆಚ್ಚು ಬಳಕೆಯಲ್ಲಿರುವ ಫೋನ್ ಪೇ ಕೇಂದ್ರ ಕಚೇರಿ ಮುಂಬೈನಿಂದ ಕರ್ನಾಟಕಕ್ಕೆ ಸ್ಥಳಾಂತರಿಸಲು ಕಂಪನಿ ನಿರ್ಧರಿಸಿದೆ. ಈ ಬಗ್ಗೆ ಆಗಸ್ಟ್ 16 ರಂದು ನಡೆದ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಅಂಗೀಕರಿಸಲಾಗಿದೆ.
ವಾಣಿಜ್ಯ ನಗರಿ ಮುಂಬೈನಲ್ಲಿದ್ದ ಫೋನ್ಪೇ ಆಡಳಿತ ಕಚೇರಿ ಕರ್ನಾಟಕಕ್ಕೆ ಸ್ಥಳಾಂತರ ಮಾಡಲು ನಿರ್ಣಯಿಸಿದ್ದು, ಇದಕ್ಕೆ ಅನುಮತಿ ನೀಡಬೇಕು ಎಂದು ಕೋರಿ ಕಂಪನಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಈ ಬಗ್ಗೆ ಜಾಹೀರಾತು ಕೂಡ ನೀಡಿದ್ದು, ಕರ್ನಾಟಕದಲ್ಲಿ ಸ್ಥಳ ನಿಗದಿ ಮಾಡಲು ಕೋರಿದೆ.