ರಾಂಚಿ(ಜಾರ್ಖಂಡ್):ಶಾಲೆಯಲ್ಲಿ ವಿದ್ಯಾರ್ಥಿಗಳ ಮುಂದೆಯೇ ರಾಷ್ಟ್ರಧ್ವಜವನ್ನು ಕತ್ತರಿಸಿ ಅದರಿಂದ ಕುರ್ಚಿ, ಮೇಜು ಮತ್ತು ಬೋರ್ಡ್ ಸ್ವಚ್ಛಗೊಳಿಸಿದ ಆರೋಪದಡಿ ಓರ್ವ ಮುಖ್ಯ ಶಿಕ್ಷಕನನ್ನು ಬಂಧಿಸಲಾಗಿದೆ. ಈ ಘಟನೆ ಜಾರ್ಖಂಡ್‌ನ ಪೂರ್ವ ಸಿಂಗ್‌ಭೂಮ್ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಘಟಶಿಲಾದಲ್ಲಿರುವ ಶಾಲೆಯ ಮುಖ್ಯ ಶಿಕ್ಷಕ, ಆರೋಪಿ ಶಫಾಕ್ ಇಕ್ಬಾಲ್ ಬಂಧಿತರು.
ಗುರುವಾರ ತರಗತಿಯಲ್ಲೇ ರಾಷ್ಟ್ರಧ್ವಜಕ್ಕೆ ಶಫಾಕ್ ಇಕ್ಬಾಲ್ ಅಪಮಾನ ಮಾಡಿರುವುದನ್ನು ಗಮನಿಸಿದ ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ವಿಷಯ ತಿಳಿಸಿದ್ದಾರೆ. ಇದರಿಂದ ಅನೇಕ ಗ್ರಾಮಸ್ಥರು ಶಾಲೆಯಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಇದರ ಮಾಹಿತಿ ಪಡೆದ ಬ್ಲಾಕ್ ಶಿಕ್ಷಣ ವಿಸ್ತರಣಾಧಿಕಾರಿ ಸುಬೋಧ ರೈ ಮತ್ತು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಕೇಶವ ಭಾರತಿ ಪೊಲೀಸರೊಂದಿಗೆ ಶಾಲೆಗೆ ಆಗಮಿಸಿದ್ದಾರೆ.