ಕರ್ನಾಟಕ

karnataka

ETV Bharat / bharat

LPG ಬೆಲೆ ಏರಿಕೆ: ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ

ಗೃಹ ಬಳಕೆಯ ಎಲ್​ಪಿಜಿ ಸಿಲಿಂಡರ್ ಬೆಲೆಯಲ್ಲಿ 50 ರೂಪಾಯಿ ಏರಿಕೆ ಮಾಡಲಾಗಿದ್ದು, ಈ ವಿಚಾರವನ್ನಿಟ್ಟುಕೊಂಡು ರಾಹುಲ್ ಗಾಂಧಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Rahul Gandhi slams govt after LPG price hike
Rahul Gandhi slams govt after LPG price hike

By

Published : Jul 6, 2022, 5:29 PM IST

ನವದೆಹಲಿ:ಗೃಹ ಬಳಕೆ ಅಡುಗೆ ಅನಿಲ ದರದಲ್ಲಿ ಇಂದು ಮತ್ತಷ್ಟು ಏರಿಕೆ ಕಂಡು ಬಂದಿದ್ದು, ಇದೇ ವಿಷಯವನ್ನಿಟ್ಟುಕೊಂಡು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕೇಂದ್ರ ಬಿಜೆಪಿ ಕೇವಲ ಮುಖ್ಯಾಂಶ ನಿರ್ವಹಿಸುತ್ತಿದ್ದು, ಆರ್ಥಿಕತೆ ಬಗ್ಗೆ ಯಾವುದೇ ರೀತಿಯ ಗಮನ ಹರಿಸುತ್ತಿಲ್ಲ. ಹೀಗಾಗಿ, ದೇಶದ ಆರ್ಥಿಕತೆ ಹಾಳು ಮಾಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಅಡುಗೆ ಅನಿಲ ದರದಲ್ಲಿ ಪ್ರತಿ ಸಿಲಿಂಡರ್​ಗೆ 50 ರೂಪಾಯಿ ಏರಿಕೆಯಾಗಿದ್ದು, ಕಳೆದ ಮೇ ತಿಂಗಳಿನಿಂದ ಅಡುಗೆ ಅನಿಲ ದರದಲ್ಲಿ ಮೂರನೇ ಸಲ ಹೆಚ್ಚಳ ಕಂಡು ಬಂದಿದೆ.

ಇದನ್ನೂ ಓದಿರಿ:ಗೃಹ ಬಳಕೆ ಎಲ್​ಪಿಜಿ ಸಿಲಿಂಡರ್​ ಮತ್ತೆ 50 ರೂಪಾಯಿ ಹೆಚ್ಚಳ

ಸರ್ಕಾರಿ ಸ್ವಾಮ್ಯದ ಸಬ್ಸಿಡಿ ರಹಿತ ಇಂಧನ ಬೆಲೆ ಸದ್ಯ 14.2 ಕೆಜಿಗೆ 1,053 ರೂ ಆಗಿದ್ದು, ಹೆಡ್​​ಲೈನ್ಸ್ ಮ್ಯಾನೇಜ್ಡ್​​, ಎಕಾನಮಿ ಮಿಸ್​ ಮ್ಯಾನೇಜ್ಡ್​​ ಎಂದು ಟ್ವೀಟ್ ಮಾಡಿದ್ದಾರೆ. ದೇಶದಲ್ಲಿ ಭ್ರಷ್ಟ ಸರ್ಕಾರವಿದ್ದರೆ ದೇಶದ ಆರ್ಥಿಕತೆ ಹಾಗೂ ಕರೆನ್ಸಿ ಕುಸಿಯುತ್ತದೆ ಎಂದು ಈ ಹಿಂದೆ ಬಿಜೆಪಿ ಹೇಳಿಕೆ ನೀಡಿರುವ ಫೋಟೋವೊಂದನ್ನ ಟ್ವೀಟ್ ಮಾಡಿದ್ದು, ಆ ಮೂಲಕ ಆಡಳಿತ ಪಕ್ಷಕ್ಕೆ ಟಾಂಗ್ ನೀಡಿದ್ದಾರೆ.

ABOUT THE AUTHOR

...view details