ಕರ್ನಾಟಕ

karnataka

ETV Bharat / bharat

ಬ್ರಹ್ಮಕುಮಾರಿ ಸಂಸ್ಥೆಯ ಮುಖ್ಯಸ್ಥೆ ಇನ್ನಿಲ್ಲ - ಇಂದು ರಾತ್ರಿ ಅಂತ್ಯಸಂಸ್ಕಾರ - ರಾಜ್ಯೋಗಿನಿ ದಾದಿ ಹೃದಯ ಮೋಹಿನಿ

ಹೃದಯ ಮೋಹಿನಿ ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಸಲುವಾಗಿ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಗುರುವಾರದಂದು ಎಲ್ಲರನ್ನೂ ಅಗಲಿದ್ದಾರೆ. ಇಂದು ರಾತ್ರಿ 10 ರ ಸುಮಾರಿಗೆ ಶಾಂತಿವನದಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು.

Head of Brahma Kumaris Sansthan will be cremated today in Shantivan
ಬ್ರಹ್ಮ ಕುಮಾರಿ ಸಂಸ್ಥೆಯ ಮುಖ್ಯಸ್ಥೆ ಇನ್ನಿಲ್ಲ - ಇಂದು ರಾತ್ರಿ ಅಂತ್ಯಸಂಸ್ಕಾರ

By

Published : Mar 13, 2021, 12:18 PM IST

ಮುಂಬೈ (ಮಹಾರಾಷ್ಟ್ರ):ಬ್ರಹ್ಮ ಕುಮಾರಿ ಸಂಸ್ಥೆಯ ಮುಖ್ಯಸ್ಥೆ ರಾಜಯೋಗಿನಿ ದಾದಿ ಹೃದಯ ಮೋಹಿನಿ (93) ಗುರುವಾರದಂದು ಇಹಲೋಕ ತ್ಯಜಿಸಿದ್ದಾರೆ.

93ರ ಇಳಿವಯಸ್ಸಿನ ಹೃದಯ ಮೋಹಿನಿ ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಸಲುವಾಗಿ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಗುರುವಾರದಂದು ಎಲ್ಲರನ್ನೂ ಅಗಲಿದ್ದಾರೆ. ಇಂದು ರಾತ್ರಿ 10 ರ ಸುಮಾರಿಗೆ ಶಾಂತಿವನದಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು.

ರಾಜಯೋಗಿನಿ ದಾದಿ ಹೃದಯ ಮೋಹಿನಿ (93) ವಿಧಿವಶ

ಬ್ರಹ್ಮ ಕುಮಾರಿ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ ಜನತೆ, ದೇಶ ಮತ್ತು ವಿದೇಶಗಳಿಂದ ಗೌರವ ಸಲ್ಲಿಸುತ್ತಿದ್ದಾರೆ. ಅಧ್ಯಕ್ಷ ರಾಮನಾಥ್ ಕೋವಿಂದ್ ಕೂಡ ಸಂತಾಪ ಸಂದೇಶ ಕಳುಹಿಸುವ ಮೂಲಕ ಗೌರವ ಸಲ್ಲಿಸಿದ್ದಾರೆ.

2021ರ ಮಾರ್ಚ್ 11 ರಂದು ಮುಂಬೈಯಿಂದ ಸಿರೊಹಿಯ ಮೌಂಟ್ ಅಬುನ ಬ್ರಹ್ಮ ಕುಮಾರಿ ಸಂಸ್ಥಾನದ ಅಂತರಾಷ್ಟ್ರೀಯ ಪ್ರಧಾನ ಕಚೇರಿಗೆ ಅವರ ದೇಹವನ್ನು ಏರ್ ಆಂಬುಲೆನ್ಸ್ ಮೂಲಕ ತರಲಾಯಿತು. ಶುಕ್ರವಾರ ಬೆಳಗ್ಗೆ ಮೃತದೇಹವನ್ನು ಅಲಂಕರಿಸಿದ ರಥದಲ್ಲಿ ಇರಿಸಿ ಮೆರವಣಿಗೆ ಮಾಡಲಾಯಿತು. ಇಡೀ ಯಾತ್ರೆಯ ಸಮಯದಲ್ಲಿ ಜನರು ಗೌರವ ಸಲ್ಲಿಸಿದರು. ಇದರ ನಂತರ ಶವವನ್ನು ಮಧ್ಯಾಹ್ನ 3 ಗಂಟೆಗೆ ಶಾಂತಿವನಕ್ಕೆ ತರಲಾಯಿತು. ಸದ್ಯ ಮೃತ ದೇಹವನ್ನು ಶಾಂತಿವನದ ಅಸೆಂಬ್ಲಿ ಹಾಲ್‌ನಲ್ಲಿ ಇರಿಸಲಾಗಿದ್ದು, ಅಲ್ಲಿಗೆ ಜನರು ಗೌರವ ಸಲ್ಲಿಸಲು ಬರುತ್ತಿದ್ದಾರೆ. ಇಂದು ಸಂಜೆ ಅಂತ್ಯಸಂಸ್ಕಾರ ನಡೆಯಲಿದೆ.

ಇದನ್ನೂ ಓದಿ:'ಈ ಜಗತ್ತಿಗೆ ವಿದಾಯ ಹೇಳುವ ಸಮಯ ಬಂದಿದೆ ' ಎಂದು ಪೊಲೀಸ್ ಸ್ಟೇಟಸ್​ ಹಾಕಿದ ಪೊಲೀಸ್​ ಅಧಿಕಾರಿ ಸಚಿನ್​ ವಾಜೆ

ರಾಜಯೋಗಿನಿ ದಾದಿ ಹೃದಯ ಮೋಹಿನಿಯನ್ನು ಕಳೆದ ವರ್ಷ ರಾಜಯೋಗಿನಿ ದಾದಿ ಜಾನಕಿ ಅವರ ನಿಧನದ ನಂತರ ಸಂಘಟನೆಯ ಮುಖ್ಯಸ್ಥರನ್ನಾಗಿ ಮಾಡಲಾಗಿತ್ತು.

ABOUT THE AUTHOR

...view details