ಆಂಧ್ರಪ್ರದೇಶ :ಪೊಲೀಸ್ ಕಾನ್‌ಸ್ಟೇಬಲ್ ಒಬ್ಬರು 50 ವರ್ಷದ ಅಪರಿಚಿತ ವ್ಯಕ್ತಿಯ ಮೃತ ದೇಹವನ್ನು ಇನ್ನೊಬ್ಬ ವ್ಯಕ್ತಿಯ ಸಹಾಯದಿಂದ ಎರಡು ಕಿಲೋಮೀಟರ್ ಹೊತ್ತು ಸಾಗಿಸಿ ಮಾನವೀಯತೆ ಮೆರೆದಿದ್ದಾರೆ.
ಅಪರಿಚಿತ ಶವವನ್ನು 2 ಕಿ.ಮೀ ಹೊತ್ತು ಸಾಗಿದ ಹೆಡ್ ಕಾನ್‌ಸ್ಟೇಬಲ್.. ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಪೆದ್ದದೋರ್ನಾಲ ವಲಯದ ನಲ್ಲಮಲಾ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಬುಡಕಟ್ಟ ಜನಾಂಗದ ಮಾರಿಪಾಲೆಮ್ ಚೆಂಚು ಗ್ರಾಮದ ಬಳಿ 50 ವರ್ಷದ ವ್ಯಕ್ತಿಯ ಮೃತಪಟ್ಟಿರುವ ಮಾಹಿತಿಯನ್ನು ಸ್ಥಳೀಯರು ಪೊಲೀಸರಿಗೆ ನೀಡಿದ್ದರು. ಮೃತ ದೇಹ ನಲ್ಲಮಲಾ ಕಾಡಿನಲ್ಲಿದ್ದ ಕಾರಣ ವಾಹನ ತೆರಳಲು ಅಸಾಧ್ಯವಾಗಿತ್ತು.
ಇದರೊಂದಿಗೆ ಹೆಡ್ ಕಾನ್‌ಸ್ಟೇಬಲ್ ಸುರೇಶ್, ಆಟೋ ಡ್ರೈವರ್ ಸಹಾಯದಿಂದ ಮೃತ ದೇಹವನ್ನು ಸುಮಾರು 2 ಕಿಲೋಮೀಟರ್ ದೂರ ಹೆಗಲ ಮೇಲೆ ಹೊತ್ತು ಮಾರಿಪಾಲೆಮ್ ಗುಡೆಮ್‌ಗೆ ತಂದರು. ಅಲ್ಲಿಂದ ಶವಪರೀಕ್ಷೆಗಾಗಿ ಮಾರ್ಕಪುರಂ ಜಿಲ್ಲಾಸ್ಪತ್ರೆಗೆ ರವಾನಿಸಲಾಯಿತು.
ಮೃತ ವ್ಯಕ್ತಿ ಕಳೆದ ಮೂರು ದಿನಗಳಿಂದ ಮಾರ್ಕಪುರಂನಲ್ಲಿ ತರಕಾರಿಗಳನ್ನು ಮಾರಾಟ ಮಾಡುತ್ತಿದ್ದ, ಬಿಸಿಲಿನ ತಾಪ, ಅನಾರೋಗ್ಯದಿಂದ ಆತ ಮೃತಪಟ್ಟಿದ್ದಾರೆ ಎಂದು ಊಹಿಸಲಾಗಿದೆ. ಮೃತ ದೇಹದ ಮೇಲೆ ಯಾವುದೇ ಗಾಯಗಳಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.