ನವದೆಹಲಿ :ಪದವಿಪೂರ್ವ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ನಡೆದಿದ್ದ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (NEET) 2021 ಫಲಿತಾಂಶ ಪ್ರಕಟವಾಗಿದೆ. ಮೂವರು ಅಭ್ಯರ್ಥಿಗಳು ಸಮನಾಗಿ ಅಂಕ ಹಂಚಿಕೊಂಡಿದ್ದು ಮೊದಲ ಸ್ಥಾನ ಅಲಂಕರಿಸಿದ್ದಾರೆ.
ತೆಲಂಗಾಣದ ಮೃಣಾಲ್ ಕತ್ತೇರಿ, ದೆಹಲಿಯ ತನ್ಮಯ್ ಗುಪ್ತಾ ಮತ್ತು ಮಹಾರಾಷ್ಟ್ರದ ಕಾರ್ತಿಕಾ ನಾಯರ್ ಸಮನಾಗಿ 720 ಅಂಕಗಳಿಗೆ 720 ಅಂಕ ಪಡೆದಿದ್ದಾರೆ. ನೀಟ್ ಫಲಿತಾಂಶವನ್ನು neet.nta.nic.in ಮತ್ತು ntaresults.ac.inನಲ್ಲಿ ವೀಕ್ಷಿಸಬಹುದು.
ಈ ವರ್ಷ ಒಟ್ಟು 16,14,777 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು. ಇದು ಕಳೆದ ವರ್ಷದ ಸಂಖ್ಯೆಗಿಂತ ಶೇ.1.09ರಷ್ಟು ಅಧಿಕವಾಗಿತ್ತು. ಅವರಲ್ಲಿ 15,44,275 ಮಂದಿ ಪರೀಕ್ಷೆಗೆ ಹಾಜರಾಗಿದ್ದು, 8,70,074 ಮಂದಿ ಅರ್ಹತೆ ಪಡೆದಿದ್ದಾರೆ. ಅರ್ಹತೆಗಾಗಿ ಕನಿಷ್ಠ ಅಂಕಗಳು ಅಥವಾ NEET ಕಟ್-ಆಫ್‌ಗಳನ್ನು ಈ ವರ್ಷ ಕೈಬಿಡಲಾಗಿದೆ.