ಕರ್ನಾಟಕ

karnataka

ETV Bharat / bharat

HDFC ಬ್ಯಾಂಕ್​ನ 100 ಗ್ರಾಹಕರ ಖಾತೆಗೆ ಬಂತು ತಲಾ 13 ಕೋಟಿ ರೂಪಾಯಿ! - ಚೆನ್ನೈನ ಟಿ ನಗರ ಶಾಖೆಯಲ್ಲಿರುವ ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ 100 ಗ್ರಾಹಕರ ಖಾತೆಗೆ ತಪ್ಪಾಗಿ ತಲಾ 13 ಕೋಟಿ ರೂ ಜಮಾ ಮಾಡಿದೆ

ತಮಿಳುನಾಡಿನಲ್ಲಿ 100 ಜನ ಗ್ರಾಹಕರಿಗೆ ಬಂಪರ್​ ಹೊಡೆದಿದೆ. ಅದು ಅನಿರೀಕ್ಷಿತವಾಗಿ ಹೆಚ್​ಡಿಎಫ್​ಸಿ ಬ್ಯಾಂಕ್​ನ ಗ್ರಾಹಕರ ಖಾತೆಗೆ ಕೋಟ್ಯಂತರ ಹಣ ಬಂದಿದೆ.

HDFC Bank mistakenly deposits Rs.13 crore each in its 100 customer's account
HDFC Bank mistakenly deposits Rs.13 crore each in its 100 customer's account

By

Published : May 29, 2022, 9:58 PM IST

ಚೆನ್ನೈ (ತಮಿಳುನಾಡು): ಚೆನ್ನೈನ ಟಿ.ನಗರ ಶಾಖೆಯಲ್ಲಿರುವ ಹೆಚ್‌ಡಿಎಫ್‌ಸಿ ಬ್ಯಾಂಕ್ ತನ್ನ 100 ಗ್ರಾಹಕರ ಖಾತೆಗೆ ತಪ್ಪಾಗಿ ತಲಾ 13 ಕೋಟಿ ರೂಪಾಯಿ ಜಮಾ ಮಾಡಿರುವ ಅಚ್ಚರಿಯ ಘಟನೆ ಬೆಳಕಿಗೆ ಬಂದಿದೆ. ಅಪಾರ ಪ್ರಮಾಣದ ಹಣವನ್ನು ಸ್ವೀಕರಿಸಿದ ಗ್ರಾಹಕರು ಅಪರಾಧ ವಿಭಾಗದ ಪೊಲೀಸರು ಮತ್ತು ಬ್ಯಾಂಕ್ ವಂಚನೆ ಘಟಕಕ್ಕೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಗ್ರಾಹಕರ ಖಾತೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ತನಿಖೆ ನಡೆಸುತ್ತಿದ್ದಾರೆ.

100 ಗ್ರಾಹಕರ ಖಾತೆಗೆ ತಲಾ 13 ಕೋಟಿ ಹಾಕಿದ HDFC ಬ್ಯಾಂಕ್

ಬ್ಯಾಂಕ್ ಸರ್ವರ್ ಹ್ಯಾಕ್ ಮಾಡಿ ಹಣ ವರ್ಗಾವಣೆ ಮಾಡಲಾಗಿದೆಯೇ ಎಂಬ ರೀತಿಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದರೂ, ಇದುವರೆಗೆ ಹೆಚ್‌ಡಿಎಫ್‌ಸಿ ಕಡೆಯಿಂದ ಯಾವುದೇ ದೂರು ಅಥವಾ ವಿವರಣೆ ನೀಡಿಲ್ಲವಂತೆ.

100 ಗ್ರಾಹಕರ ಖಾತೆಗೆ ತಲಾ 13 ಕೋಟಿ ಹಾಕಿದ HDFC ಬ್ಯಾಂಕ್

ಇದನ್ನೂ ಓದಿ: ಶೈಕ್ಷಣಿಕ ವರ್ಷದಿಂದ ಶಾಲಾ ಕಾಲೇಜುಗಳಲ್ಲಿ ಪಠ್ಯವಾಗಿ ಯೋಗ: ಸಿಎಂ

For All Latest Updates

ABOUT THE AUTHOR

...view details