ಕರ್ನಾಟಕ

karnataka

ETV Bharat / bharat

ಮುಂಬೈ-ಅಹಮದಾಬಾದ್​ ಬುಲೆಟ್​ ಟ್ರೈನ್: 20 ಸಾವಿರ ಮ್ಯಾಂಗ್ರೋವ್​ ಮರ ಕಡಿಯಲು ಅನುಮತಿ!

ಮ್ಯಾಗ್ರೋವ್​ ಮರಗಳನ್ನು ಕಡಿಯುವ ಸಂಬಂಧ ಅನುಮತಿ ಕೋರಿ ಎನ್​ಎಚ್ಎಸ್​ಆರ್​ಸಿಎಲ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ.ದೀಪಂಕರ್​ ದತ್ತಾ ಮತ್ತು ನ್ಯಾ.ಅಭಯ್​ ಅಹುಜಾ ಒಳಗೊಂಡಿದ್ದ ಪೀಠ ವಿಚಾರಣೆ ನಡೆಸಿತು.

ಮುಂಬೈ ಅಹಮದಾಬಾದ್​ ಬುಲೆಟ್​ ಟ್ರೈನ್​ಗೆ 20000 ಮ್ಯಾಂಗ್ರೋವ್​ ಮರ ಕಡಿಯಲು ಹೈಕೋರ್ಟ್​ ಅನುಮತಿ
hc-allows-mumbai-ahmedabad-bullet-train-to-cut-20000-mangrove-trees

By

Published : Dec 9, 2022, 4:04 PM IST

ಮುಂಬೈ: ಮುಂಬೈ-ಅಹಮದಾಬಾದ್​ ಬುಲೆಟ್​ ಟ್ರೈನ್​ ಯೋಜನೆಗೆ 20,000 ಮ್ಯಾಂಗ್ರೋವ್​ ಮರಗಳಿಗೆ ಕೊಡಲಿ ಏಟು ನೀಡುವುದಕ್ಕೆ ಬಾಂಬೆ ಹೈ ಕೋರ್ಟ್​ ಅನುಮತಿ ನೀಡಿದೆ. ಪಾಲ್ಗರ್​ನಿಂದ ಥಾಣೆ ತೆರಳುವ ರೈಲು ಸಂಚಾರಕ್ಕೆ ನ್ಯಾಷನಲ್​ ಹೈ ಸ್ಪೀಡ್​ ರೈಲ್​ ಕಾರ್ಪೊರೇಷನ್​(ಎನ್​ಎಚ್ಎಸ್​ಆರ್​ಸಿಎಲ್​)ಗೆ ಮರಗಳನ್ನು ಕಡಿಯಲು ಒಪ್ಪಿಗೆ ಸಿಕ್ಕಿದೆ.

ಮ್ಯಾಂಗ್ರೋವ್​ ಮರಗಳನ್ನು ಕಡಿಯುವ ಸಂಬಂಧ ಅನುಮತಿ ಕೋರಿ ಎನ್​ಎಚ್ಎಸ್​ಆರ್​ಸಿಎಲ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ.ದೀಪಂಕರ್​ ದತ್ತಾ ಮತ್ತು ನ್ಯಾ. ಅಭಯ್​ ಅಹುಜಾ ಒಳಗೊಂಡಿದ್ದ ಪೀಠ ವಿಚಾರಣೆ ನಡೆಸಿತು. 2018ರ ಹೈ ಕೋರ್ಟ್​ ಆದೇಶದ ಅನ್ವಯ, ರಾಜ್ಯದಲ್ಲಿ ವಿಸ್ತರಿಸಿರುವ ಮರಗಳನ್ನು ಕಡಿಯಲು ಅನುಮತಿ ಬೇಕು. ಮ್ಯಾಂಗ್ರೋವ್​ ಸುತ್ತ 50 ಮೀ ಬಫರ್​ ಜೋನ್​ ಮಾಡಬೇಕು. ಯಾವುದೇ ಚಟುವಟಿಕೆ ಅಥವಾ ಡಂಪಿಂಗ್​ಗೆ ಬಫರ್​ ಜೋನ್​ನಲ್ಲಿ ಅವಕಾಶ ಇಲ್ಲ.

2020ರಲ್ಲಿ ಅರ್ಜಿ ಸಲ್ಲಿಸಿದ ಎನ್​ಎಚ್​ಎಸ್​ಆರ್​ಸಿಎಲ್​, ಈಗ ಕಡಿಯುವುದಕ್ಕೆ ಐದು ಪಟ್ಟು ಹೆಚ್ಚು ಮ್ಯಾಂಗ್ರೋವ್​ ಮರಗಳನ್ನು ನೆಡಲಾಗುವುದು. ಇದರಿಂದ ಈ ಸಂಖ್ಯೆಯಲ್ಲಿ ಯಾವುದೇ ಕಡಿಮೆಯಾಗುವುದಿಲ್ಲ ಎಂದು ತಿಳಿಸಿತ್ತು. ಆದರೆ, ಈ ಅರ್ಜಿಯನ್ನು ಎನ್​ಜಿಒ ಬಾಂಬೆ ಪರಿಸರ ಕಾರ್ಯ ಗುಂಪು ವಿರೋಧಿಸಿತ್ತು. ಅಲ್ಲದೇ ಎಷ್ಟು ಗಿಡಗಳನ್ನು ನೆಡಲಾಗುವುದು ಎಂಬುದನ್ನು ಸ್ಪಷ್ಟಪಡಿಸಿಲ್ಲ ಎಂದು ತಗಾದೆ ತೆಗೆದಿತ್ತು. ಈ ಆಕ್ಷೇಪ ನಿರಾಕರಿಸಿದ ಎನ್​ಎಚ್​ಎಸ್​ಆರ್​ಸಿಎಲ್​, ಸಾರ್ವಜನಿಕ ಮಹತ್ವದ ಯೋಜನೆಗೆ ಈ ಕಾರ್ಯ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿತ್ತು.

ಇದನ್ನೂ ಓದಿ:'ಖಾಕಿ'ಗೆ ಸ್ಫೂರ್ತಿಯಾಗಿದ್ದ ಐಪಿಎಸ್ ಅಧಿಕಾರಿ ಅಮಿತ್ ಲೋಧಾ ಅಮಾನತು!

ABOUT THE AUTHOR

...view details