ಅರಾರಿಯಾ (ಬಿಹಾರ) :ಪೊಲೀಸರು ಮತ್ತು ಎಸ್‌ಎಸ್‌ಬಿ ಸಿಬ್ಬಂದಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಭಾರತ-ನೇಪಾಳ ಗಡಿ ಬಳಿ ಹವಾಲಾ ವ್ಯಾಪಾರಿಯೊಬ್ಬನನ್ನು ಬಂಧಿಸಲಾಗಿದೆ.
ಬಿಹಾರದ ಅರಾರಿಯಾ ಜಿಲ್ಲೆಯಲ್ಲಿರುವ ಭಾರತ-ನೇಪಾಳ ಗಡಿ ಪ್ರದೇಶವಾದ ಜೋಗಬಾನಿ ಎಂಬಲ್ಲಿ ಲಕ್ಷ್ಮಣ್ ಕುಮಾರ್ ಸಾಹ್ (29) ಎಂಬ ಹವಾಲಾ ವ್ಯಾಪಾರಿಯನ್ನು ಅರೆಸ್ಟ್ ಮಾಡಲಾಗಿದೆ. ಆತನಿಂದ 12 ಲಕ್ಷ ರೂ. ನಗದು ಹಾಗೂ ನೇಪಾಳದ ನಂಬರ್ ಪ್ಲೇಟ್ವುಳ್ಳ ಒಂದು ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.