ನವದೆಹಲಿ:ವಿದ್ಯಾರ್ಥಿಗಳವೈಯಕ್ತಿಕ ಸಾಮರ್ಥ್ಯಕ್ಕೆ ಹೊಂದಣಿಕೆ ಆಗುವಂತೆ ನಿರೀಕ್ಷೆ ಇರಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದರು. 'ಪರೀಕ್ಷಾ ಪೇ ಚರ್ಚಾ'ದಲ್ಲಿ ಮಾತನಾಡಿದ ಪ್ರಧಾನ ಮಂತ್ರಿ, ಸಾಮಾಜಿಕ ಒತ್ತಡದಿಂದ ನಿಮ್ಮ ಮಕ್ಕಳ ಮೇಲೆ ಹೆಚ್ಚಿನ ನಿರೀಕ್ಷೆ ಹೇರಬೇಡಿ ಎಂದು ಇದೇ ವೇಳೆ ಮನವಿ ಮಾಡಿದರು. ಪೋಷಕರು ಮಕ್ಕಳ ಮೇಲೆ ಭಾರೀ ನಿರೀಕ್ಷೆ ಹೊಂದುವುದು ಸಾಮಾನ್ಯ. ಆದರೆ, ಇದು ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಇರಬೇಕು. ಅದನ್ನು ಮೀರಿ ನಿರೀಕ್ಷೆ ಹೊಂದುವುದು ದೊಡ್ಡ ಸಮಸ್ಯೆ ಆಗಿದೆ. ವಿದ್ಯಾರ್ಥಿಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಈ ನಿರೀಕ್ಷೆ ಇರಬೇಕು. ಇದೇ ವೇಳೆ, ನೀವು ಗುರಿಯತ್ತ ಗಮನ ಹೊಂದಿರಬೇಕು ಎಂದು ವಿದ್ಯಾರ್ಥಿ, ಶಿಕ್ಷಕರು ಮತ್ತು ಪೋಷಕರಿಗೆ ತಿಳಿ ಹೇಳಿದರು.
ಮಕ್ಕಳ ಮೇಲೆ ನಿರೀಕ್ಷೆ ಇಟ್ಟುಕೊಳ್ಳುವುದು ತಪ್ಪಲ್ಲ. ಆದರೆ, ಸಾಮಾಜಿಕ ಒತ್ತಡದಿಂದ ಮಕ್ಕಳಿಗೆ ನಿರಂತರ ಒತ್ತಡ ಹೇರುವುದರಿಂದ ಅವರು ಈ ಒತ್ತಡ ಬರಿಸಲಾಗದೇ ತಪ್ಪು ಆಯ್ಕೆಯನ್ನು ಮಾಡುವ ಸಾಧ್ಯತೆ ಇರುತ್ತದೆ ಎಂದು ಪೋಷಕರಿಗೆ ಸಲಹೆ ನೀಡಿದರು. ಇದೇ ವೇಳೆ, ವಿದ್ಯಾರ್ಥಿಗಳು ಕೂಡ ತಮ್ಮ ಸಾಮರ್ಥ್ಯವನ್ನು ತಪ್ಪು ಅಂದಾಜಿಸಬಾರದು ಎಂದು ಕಿವಿಮಾತು ಹೇಳಿದರು.
ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ 6ನೇ ಕಂತಿನ ವಾರ್ಷಿಕ ಪರೀಕ್ಷಾ ಪೆ ಚರ್ಚಾದಲ್ಲಿ 38.80 ಲಕ್ಷ ಜನರು ಭಾಗಿಯಾಗಿದ್ದಾರೆ. ಇದರಲ್ಲಿ 31. 24 ಲಕ್ಷ ಜನರು ವಿದ್ಯಾರ್ಥಿಗಳಿದ್ದು, 5.60 ಲಕ್ಷ ವಿದ್ಯಾರ್ಥಿಗಳು ಮತ್ತು 1.95 ಲಕ್ಷ ಪೋಷಕರು ಭಾಗಿಯಾಗಿದ್ದಾರೆ. ರಾಜ್ಯ ಮಂಡಳಿ, ಸಿಬಿಎಸ್ಸಿ, ಕೆವಿಎಸ್, ಎನ್ವಿಎಸ್ ಮತ್ತು ಇತರ ಮಂಡಳಿಗಳ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ಕಾರ್ಯಕ್ರಮಕ್ಕೆ ನವೆಂಬರ್ 25ರಿಂದ 30ರವರೆಗೆ ನೋಂದಾಣಿ ಆರಂಭವಾಗಿತ್ತು. ಈ ಕಾರ್ಯಕ್ರಮವನ್ನು ಶಿಕ್ಷಣ ಇಲಾಖೆ ನಡೆಸುತ್ತಿದ್ದು, ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳು ಒತ್ತಡದಿಂದ ಹೊರಬರಲು ಪ್ರಧಾನಿ ಸಹಾಯ ಮಾಡುವುದರ ಜೊತೆ ಹಲವು ಸಲಹೆ ನೀಡಿದರು.