ಕರ್ನಾಟಕ

karnataka

ETV Bharat / bharat

ಆಸ್ಪತ್ರೆಗೆ ಗಣ್ಯರ ಭೇಟಿ ವೇಳೆ ಕೋವಿಡ್​ ರೋಗಿಗಳಿಗೆ ಯಾವ ತೊಂದರೆಯೂ ಆಗ್ಬಾರ್ದು.. ಸಚಿವ ಅನಿಲ್​ ವಿಜ್​ - ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್

ರೋಗಿಗಳು ಮತ್ತು ಅವರ ಚಿಕಿತ್ಸೆಯೇ ನಮ್ಮ ಮೊದಲ ಆದ್ಯತೆ ಆಗಿರಬೇಕು. ವಿಐಪಿಗಳ ಭೇಟಿ ವೇಳೆ ಕೋವಿಡ್​ ರೋಗಿಗಳಿಗೆ ಯಾವ ತೊಂದರೆಯೂ ಆಗಬಾರದು..

Haryana Health Minister Anil Vij
ಅನಿಲ್​ ವಿಜ್

By

Published : Apr 30, 2021, 12:54 PM IST

ಚಂಡೀಗಢ (ಹರಿಯಾಣ): ಆಸ್ಪತ್ರೆಗಳಿಗೆ ವಿಐಪಿಗಳ ಭೇಟಿಯ ಸಮಯದಲ್ಲಿ ಕೊರೊನಾ ರೋಗಿಗಳ ಚಿಕಿತ್ಸೆ ಮತ್ತು ದಾಖಲಾತಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಹರಿಯಾಣದ ಎಲ್ಲಾ ಜಿಲ್ಲೆಗಳ ಮುಖ್ಯ ವೈದ್ಯಕೀಯ ಅಧಿಕಾರಿಗಳಿಗೆ (CMO) ಆರೋಗ್ಯ ಸಚಿವ ಅನಿಲ್ ವಿಜ್ ನಿರ್ದೇಶನ ನೀಡಿದ್ದಾರೆ.

ಜಿಂದ್ ಸಿವಿಲ್ ಆಸ್ಪತ್ರೆಗೆ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಬರುತ್ತಾರೆಂದು ಅಧಿಕಾರಿಗಳು ಕೆಲವು ಕಟ್ಟುನಿಟ್ಟಾದ ಪ್ರೋಟೋಕಾಲ್​ಗ​ಳನ್ನು ಜಾರಿಗೆ ತಂದಿದ್ದು, ಇದು ರೋಗಿಗಳ ಚಿಕಿತ್ಸೆಗೆ ಸ್ವಲ್ಪ ಅನಾನುಕೂಲತೆಯನ್ನುಂಟು ಮಾಡಿತ್ತು.

ಈ ವಿಚಾರವನ್ನು ಜಿಂದ್ ಆಸ್ಪತ್ರೆಯ ವೈದ್ಯರೊಬ್ಬರು ಸಿಎಂ ಬಳಿಯೇ ಹೇಳಿಕೊಂಡಿದ್ದಾರೆ. ತಕ್ಷಣವೇ ಸಿಎಂ ಖಟ್ಟರ್ ಅವರು ರೋಗಿಗಳು ಅಥವಾ ಅವರನ್ನು ನೋಡಿಕೊಳ್ಳುವ ವೈದ್ಯಕೀಯ ಸಿಬ್ಬಂದಿಗೆ ಯಾವುದೇ ಅನಾನುಕೂಲತೆಯನ್ನು ಆಗದಂತೆ ಕ್ರಮಕ್ಕೆ ಸೂಚಿಸಿದ್ದರು.

ಈ ಘಟನೆ ಬೆನ್ನಲ್ಲೇ ಟ್ವೀಟ್​ ಮಾಡಿರುವ ಅನಿಲ್ ವಿಜ್, ರೋಗಿಗಳು ಮತ್ತು ಅವರ ಚಿಕಿತ್ಸೆಯೇ ನಮ್ಮ ಮೊದಲ ಆದ್ಯತೆ ಆಗಿರಬೇಕು. ವಿಐಪಿಗಳ ಭೇಟಿ ವೇಳೆ ಕೋವಿಡ್​ ರೋಗಿಗಳಿಗೆ ಯಾವ ತೊಂದರೆಯೂ ಆಗಬಾರದು ಎಂದು ಹೇಳಿದ್ದಾರೆ.

ABOUT THE AUTHOR

...view details