ಕರ್ನಾಟಕ

karnataka

ETV Bharat / bharat

ನವೆಂಬರ್ 1ರಿಂದ ಮರಗಳಿಗೆ ಪಿಂಚಣಿ ಯೋಜನೆ ಪ್ರಾರಂಭ: 70 ವರ್ಷ ಮೇಲ್ಪಟ್ಟ ಮರಗಳಿಗೆ ವಾರ್ಷಿಕ 2,750 ರೂ. ಪಿಂಚಣಿ ಸೌಲಭ್ಯ..

Haryana Pran Vayu Devta Pension: ಹರಿಯಾಣ ಸರ್ಕಾರವು ರಾಜ್ಯದಲ್ಲಿ 70 ವರ್ಷ ಮೇಲ್ಪಟ್ಟ ಮರಗಳಿಗೆ ವಾರ್ಷಿಕ 2750 ರೂಪಾಯಿ ಪಿಂಚಣಿ ನೀಡಲಿದೆ. ನವೆಂಬರ್ 1, 2023 ರಿಂದ ಮರಗಳಿಗೆ ಪಿಂಚಣಿ ನೀಡುವ ದೇಶದ ಮೊದಲ ರಾಜ್ಯ ಹರಿಯಾಣ. ಪರಿಸರ ಉಳಿಸಲು ಸರ್ಕಾರದ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಮುಂದಾಗಿದೆ. ಪ್ರಾಣ ವಾಯು ಪಿಂಚಣಿ ಯೋಜನೆ ಬಗ್ಗೆ ತಿಳಿಯಲು ಸಂಪೂರ್ಣ ಸುದ್ದಿ ಓದಿ.

Haryana Pran Vayu Devta Pension
ನವೆಂಬರ್ 1ರಿಂದ ಮರಗಳಿಗೆ ಪಿಂಚಣಿ ಯೋಜನೆ ಪ್ರಾರಂಭ: 70 ವರ್ಷ ಮೇಲ್ಪಟ್ಟ ಮರಗಳಿಗೆ ವಾರ್ಷಿಕ 2750 ರೂ. ಪಿಂಚಣಿ ಸೌಲಭ್ಯ...

By ETV Bharat Karnataka Team

Published : Oct 7, 2023, 11:03 AM IST

ಚಂಡೀಗಢ: ಹರಿಯಾಣದಲ್ಲಿ ಇತ್ತೀಚಿನ ದಿನಗಳಲ್ಲಿ ಹುಲ್ಲು ಸುಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಹುಲ್ಲುಗಾವಲು ಸುಡುವುದರಿಂದ ರಾಜ್ಯದ ಅನೇಕ ನಗರಗಳಲ್ಲಿ ಮಾಲಿನ್ಯದ ಮಟ್ಟವು ಹೆಚ್ಚುತ್ತಿದೆ. ಈ ನಡುವೆಯೇ ರಾಜ್ಯ ಸರ್ಕಾರವು 70 ವರ್ಷ ಮೇಲ್ಪಟ್ಟ ಮರಗಳಿಗೆ ಪ್ರಾಣ ವಾಯು ದೇವತಾ ಪಿಂಚಣಿ ಯೋಜನೆಯನ್ನು ಪ್ರಾರಂಭಿಸಲಿದೆ. ಬೀಳುವ ಹಂತದಲ್ಲಿರುವ ಮರಗಳನ್ನು ಸರ್ಕಾರ ಗುರುತಿಸಿದೆ. ಈ ಯೋಜನೆಯನ್ನು ಆರಂಭಿಸುವ ಮೂಲಕ ರಾಜ್ಯದಲ್ಲಿ ಪರಿಸರ ಉಳಿಸಲು ಸರ್ಕಾರ ಮುಂದಾಗಿದೆ.

ಮರಗಳಿಗೆ ಪಿಂಚಣಿ ನೀಡುವ ಮೊದಲ ರಾಜ್ಯ ಹರಿಯಾಣ: ನವೆಂಬರ್ 1ರಿಂದ ಹರಿಯಾಣದಲ್ಲಿ ಮರ ಪಿಂಚಣಿ ಪ್ರಾರಂಭವಾಗಲಿದೆ. 70 ವರ್ಷಕ್ಕಿಂತ ಮೇಲ್ಪಟ್ಟ ಮರಗಳಿಗೆ ಸರ್ಕಾರವು ಪ್ರಾಣ ವಾಯು ದೇವತಾ ಪಿಂಚಣಿ ಯೋಜನೆ ಆರಂಭಿಸಲಾಗುತ್ತಿದೆ. ಇದಕ್ಕಾಗಿ ರಾಜ್ಯದ ಸುಮಾರು 4 ಸಾವಿರ ಮರಗಳನ್ನು ಗುರುತಿಸಲಾಗಿದೆ. ಪಿಂಚಣಿ ಯೋಜನೆಯಡಿ ವಾರ್ಷಿಕ 2,750 ರೂ. ಟ್ರೀ ಪೆನ್ಷನ್ ನೀಡುವ ದೇಶದ ಮೊದಲ ರಾಜ್ಯ ಹರಿಯಾಣ ಆಗಿದೆ ಎಂದು ಹರ್ಯಾಣ ಪರಿಸರ ಮತ್ತು ಅರಣ್ಯ ಸಚಿವ ಕನ್ವರ್ಪಾಲ್ ಗುರ್ಜರ್ ತಿಳಿಸಿದರು.

ಪರಿಸರವನ್ನು ಉಳಿಸುವ ದೃಷ್ಟಿಯಿಂದ ಪ್ರಮುಖ ಉಪಕ್ರಮ ಎಂದು ಪರಿಗಣಿಸಲಾಗಿದೆ. ವೃದ್ಧಾಪ್ಯ ವೇತನ, ಅಂಗವಿಕಲರ ಪಿಂಚಣಿ, ವಿಧವಾ ಪಿಂಚಣಿ ಅಲ್ಲದೇ ದೇಶದ ವಿವಿಧ ರಾಜ್ಯಗಳಲ್ಲಿ ಹಲವು ಯೋಜನೆಗಳು ಜಾರಿಯಲ್ಲಿವೆ. ಆದರೆ, ಪ್ರಾಣ ವಾಯು ದೇವತಾ ಪಿಂಚಣಿ ಯೋಜನೆಯು ವಿಭಿನ್ನ ಯೋಜನೆಯಾಗಿದೆ. ಈ ಯೋಜನೆ ಇತರ ರಾಜ್ಯಗಳಿಗೂ ಮಾದರಿಯಾಗಿದೆ. ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಈ ಯೋಜನೆಯನ್ನು ಬಹುಮುಖ್ಯವಾಗಿದೆ. ಇದಕ್ಕಾಗಿ ದೀರ್ಘಕಾಲದಿಂದ ಮರಗಳನ್ನು ಗುರುತಿಸುವ ನಡೆದಿದೆ.

ಈ ಯೋಜನೆಯ ಲಾಭ ಯಾರಿಗೆ ದೊರೆಯುತ್ತೆ?: ಪ್ರಾಣ ವಾಯು ದೇವತಾ ಪಿಂಚಣಿ ಯೋಜನೆಯ ಪ್ರಕಾರ, ಮನೆಯ ಆ ವ್ಯಾಪ್ತಿಯಲ್ಲಿ 70 ವರ್ಷಕ್ಕಿಂತ ಹಳೆಯ ಮರವಿದ್ದರೆ, ಮನೆಯ ಮಾಲೀಕರಿಗೆ ಪಿಂಚಣಿ ಸೌಲಭ್ಯ ಸಿಗುತ್ತದೆ. ಗ್ರಾಮದಲ್ಲಿ ಸರಕಾರಿ ಜಾಗದಲ್ಲಿ ಮರವಿದ್ದರೆ ಅದರ ಲಾಭ ಗ್ರಾಮ ಪಂಚಾಯಿತಿಗೆ ದೊರೆಯುತ್ತದೆ. ಜಮೀನಿನಲ್ಲಿ 70 ವರ್ಷಕ್ಕಿಂತ ಹಳೆಯ ಮರವಿದ್ದರೆ ಅದರ ಲಾಭ ರೈತನಿಗೆ ಸಿಗುತ್ತದೆ. ನಗರದಲ್ಲಿ ಹಳೆಯ ಮರವಿದ್ದರೆ ಅದರ ಲಾಭ ಸ್ಥಳೀಯ ಆಡಳಿತಕ್ಕೆ ಸಿಗುತ್ತದೆ. ಇದೇ ವೇಳೆ, ಅರಣ್ಯ ಪ್ರದೇಶದಲ್ಲಿ 70 ವರ್ಷಕ್ಕಿಂತ ಮೇಲ್ಪಟ್ಟ ಮರವಿದ್ದರೆ ಅರಣ್ಯ ಇಲಾಖೆಯ ಈ ಪಿಂಚಣಿ ಯೋಜನೆಯ ಲಾಭ ಸಿಗಲಿದೆ.

ಹುಲ್ಲುಗಾವಲು ಸುಡುವ ಪ್ರಕರಣಗಳು ಹೆಚ್ಚಳ:ಕಟ್ಟುನಿಟ್ಟಿನ ಸೂಚನೆ ಹೊರತಾಗಿಯೂ, ಹರಿಯಾಣದಲ್ಲಿ ಹುಲ್ಲುಗಾವಲು ಸುಡುವ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಅಂಕಿ - ಅಂಶಗಳ ಪ್ರಕಾರ, ಸೆಪ್ಟೆಂಬರ್ 15 ರಿಂದ ಅಕ್ಟೋಬರ್ 5 ರವರೆಗೆ ರಾಜ್ಯದಲ್ಲಿ 190 ಹುಲ್ಲು ಸುಟ್ಟ ಪ್ರಕರಣಗಳು ವರದಿಯಾಗಿವೆ. ಆದರೆ, ಹುಲ್ಲು ಸುಡುವ ರೈತರ ವಿರುದ್ಧವೂ ಸರ್ಕಾರ ನಿರಂತರವಾಗಿ ಕ್ರಮ ಕೈಗೊಳ್ಳುತ್ತಿದೆ. ಇಷ್ಟೆಲ್ಲಾ ಇದ್ದರೂ ಹುಲ್ಲು ಸುಡುವ ಪ್ರಕರಣಗಳು ಮಾತ್ರ ಕಡಿಮೆಯಾಗಿಲ್ಲ.

ರಾಜ್ಯದ ಈ 4 ನಗರಗಳ ವಾಯು ಮಟ್ಟ ಅತ್ಯಂತ ಕಲುಷಿತ:ರಾಜ್ಯದ ಹಲವು ನಗರಗಳಲ್ಲಿ ಗಾಳಿಯ ಗುಣಮಟ್ಟ ತೀರಾ ಕಳಪೆಯಾಗಿದೆ. ದೇಶದ 10 ಅತ್ಯಂತ ಕಲುಷಿತ ನಗರಗಳಲ್ಲಿ ಹರಿಯಾಣದ 4 ನಗರಗಳು ಸೇರ್ಪಡೆಯಾಗಿರುವುದು ಕಳವಳಕಾರಿ ಸಂಗತಿ. ಹರಿಯಾಣದ ಸೋನಿಪತ್‌ನ ಎಕ್ಯೂಐ ಮಟ್ಟ ರಾಜಧಾನಿ ದೆಹಲಿಗಿಂತ ಹೆಚ್ಚಿರುವುದು ಕಂಡು ಬಂದಿದೆ. ಹರ್ಯಾಣದ ವಿವಿಧ ಜಿಲ್ಲೆಗಳಲ್ಲಿ ಹುಲ್ಲುಗಾವಲು ಸುಡುವುದರಿಂದ ಮಾಲಿನ್ಯದ ಮಟ್ಟ ನಿರಂತರವಾಗಿ ಹೆಚ್ಚುತ್ತಿದೆ. ಎಕ್ಯೂಐ ಮಟ್ಟವು ಫರಿದಾಬಾದ್‌ನಲ್ಲಿ 324, ಕೈತಾಲ್‌ನಲ್ಲಿ 299, ಸೋನಿಪತ್‌ನಲ್ಲಿ 297, ಗುರುಗ್ರಾಮ್‌ನಲ್ಲಿ 292 ಮತ್ತು ಧರುಹೇರಾದಲ್ಲಿ ಎಕ್ಯೂಐ 229 ದಾಖಲಾಗಿದೆ.

ಇದನ್ನೂ ಓದಿ:ಹೈದರಾಬಾದ್‌ನಲ್ಲಿ ರಾಮೋಜಿ ರಾವ್ ಭೇಟಿಯಾದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ...

ABOUT THE AUTHOR

...view details