ಸೋನಿಪತ್(ಹರಿಯಾಣ):ರಸ್ತೆಯಲ್ಲಿ ಕ್ಷುಲ್ಲಕ ಕಾರಣಕ್ಕೆಯುವಕರೊಂದಿಗೆ ವಾಗ್ವಾದ ನಡೆದು ಹಲ್ಲೆಗೊಳಗಾಗಿ ಗಂಭೀರವಾಗಿ ಗಾಯಗೊಂಡ ತಂದೆ ಸಾವನ್ನಪ್ಪಿದ್ದಾರೆ. ಇದರಿಂದ ನೊಂದ ಮಗ ಕೂಡಾ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹರಿಯಾಣದ ಸೋನಿಪತ್ನಲ್ಲಿ ನಡೆದಿದೆ. ತಂದೆಯ ಅಂತ್ಯಕ್ರಿಯೆ ನಡೆಸಿರುವ ಸ್ಥಳದಲ್ಲೇ ಆತನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇಂದು ಬೆಳಗ್ಗೆ ಈ ಘಟನೆ ನಡೆಯಿತು. ಸಾವಿಗೆ ಶರಣಾಗಿರುವ ಯುವಕನನ್ನು ಸಂದೀಪ್ ಎಂದು ಗುರುತಿಸಲಾಗಿದೆ.
ಸುದ್ದಿಯ ವಿವರ: ಸಂದೀಪ್ನ ತಂದೆ ಜಗ್ಬೀರ್ ಬಸ್ ಚಾಲಕರಾಗಿ ದೆಹಲಿ ಡಿಪೋದಲ್ಲಿ ಕೆಲಸ ಮಾಡುತ್ತಿದ್ದಾರೆ. ಮಂಗಳವಾರ ಬಸ್ ಚಲಾಯಿಸುತ್ತಾ ದೆಹಲಿ ಡಿಪೋಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಎಸ್ಯುವಿಯಲ್ಲಿ(ಕಾರು) ತೆರಳುತ್ತಿದ್ದ ಯುವಕರೊಂದಿಗೆ ವಾಗ್ವಾದ ನಡೆದಿದೆ. ಮಾತಿಗೆ ಮಾತು ಬೆಳೆದು ಕೋಪಗೊಂಡ ಯುವಕರು ಬಸ್ ಚಾಲಕ ಜಗ್ಬೀರ್‌ರನ್ನು ಕೊಲೆ ಮಾಡುವ ಉದ್ದೇಶದಿಂದ ಮತ್ತೆ ಹಿಂಬಾಲಿಸಿದ್ದಾರೆ.