ರೋಹ್ಟಕ್, ಹರಿಯಾಣ: ವೈದ್ಯೋ ನಾರಾಯಣ ಹರಿ ಎಂದು ಹೇಳಲಾಗುತ್ತದೆ. ಈ ಮಾತನ್ನು ಹರಿಯಾಣದ ರೋಹ್ಟಕ್ ಜಿಲ್ಲೆಯ ಪಿಜಿಐಎಂಎಸ್ ವೈದ್ಯರು ಸಾಬೀತುಪಡಿಸಿದ್ದಾರೆ. PGIMS ರೋಹ್ಟಕ್‌ನ ವೈದ್ಯರ ತಂಡವು ಬಾರಾ ಬಜಾರ್ ಪ್ರದೇಶದ ವ್ಯಕ್ತಿಯೊಬ್ಬರ ಜೀವವನ್ನು ಉಳಿಸಿದ್ದಾರೆ. ಸತತ 4 ಗಂಟೆಗಳ ಪರಿಶ್ರಮದ ಬಳಿಕ ವ್ಯಕ್ತಿಯ ಶ್ವಾಸಕೋಶದಲ್ಲಿ ಕಂಡು ಬಂದ ಗುಂಡು ಸೂಜಿಯನ್ನು ವೈದ್ಯರು ಹೊರತೆಗೆದು ವ್ಯಕ್ತಿಯ ಪ್ರಾಣ ಉಳಿಸಿದ್ದಾರೆ.
ಶ್ವಾಸನಾಳದಲ್ಲಿ ಗುಂಡು ಸೂಜಿ ಸಿಲುಕಿಕೊಂಡಿದ್ದು ಹೇಗೆ?: ಬಡಾ ಬಜಾರ್‌ನ 55 ವರ್ಷದ ವ್ಯಕ್ತಿಯೊಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹಲ್ಲಿನ ತಪಾಸಣೆಯ ಸಮಯದಲ್ಲಿ 2 ಇಂಚಿನ ಗುಂಡು ಸೂಜಿ ಅವರಬಾಯಿ ಒಳಗೆ ಹೋಗಿದೆ. ಅವರನ್ನು ಪಿಜಿಐಎಂಎಸ್ ರೋಹ್ಟಕ್‌ನ ತುರ್ತುಸ್ಥಿತಿಗೆ ಕರೆತರಲಾಯಿತು. ಸದ್ಯ ರೋಗಿ ಸಂಪೂರ್ಣ ಸುರಕ್ಷಿತವಾಗಿದ್ದು, ಮನೆಗೆ ಕಳುಹಿಸಲಾಗಿದೆ. ಪಿಜಿಐಎಂಎಸ್ ಪಲ್ಮನರಿ ಮತ್ತು ಕ್ರಿಟಿಕಲ್ ಕೇರ್ ಮೆಡಿಸಿನ್ ವಿಭಾಗದ ಸಹ ಪ್ರಾಧ್ಯಾಪಕ ಡಾ.ಪವನ್ ಈ ಮಾಹಿತಿ ನೀಡಿದ್ದಾರೆ.
X RAY ನಲ್ಲಿ ಕಾಣಿಸದ ಗುಂಡು ಸೂಜಿ:ರೋಗಿಯ X-ray ಮಾಡಿದಾಗ ಗುಂಡು ಸೂಜಿ ಕಾಣಿಸಲಿಲ್ಲ. ನಂತರ CT ಸ್ಕ್ಯಾನ್ ಮಾಡಿದ ನಂತರ ಸಹ ಗುಂಡು ಸೂಜಿ ಕಾಣಿಸಲಿಲ್ಲ. ಎರಡನೇ ಬಾರಿ CT ಸ್ಕ್ಯಾನ್ ಮಾಡಿದಾಗ ಗುಂಡು ಸೂಜಿ ಇರುವ ಸ್ಥಳ ಕಂಡು ಬಂದಿದೆ. ಎಡ ಶ್ವಾಸಕೋಶದ ಒಳಗೆ ಗುಂಡು ಸೂಜಿ ಸಿಲುಕಿಕೊಂಡಿರುವುದು ವೈದ್ಯರ ತಂಡ ಪತ್ತೆ ಮಾಡಿತ್ತು. ಎಷ್ಟೇ ಪ್ರಯತ್ನ ಮಾಡಿದರೂ ಗುಂಡು ಸೂಜಿಯನ್ನು ತೆಗೆಯಲು ಸಾಧ್ಯವಾಗಲಿಲ್ಲ. ಬಳಿಕ ರೋಗಿಯನ್ನು ಪ್ರಮುಖ ಶಸ್ತ್ರಚಿಕಿತ್ಸೆಗೆ ಒಳ ಪಡಿಸಬೇಕಾಯಿತು. ರೋಗಿಯ ಶ್ವಾಸನಾಳದಲ್ಲಿ ಸೂಜಿ ಇರುವುದರಿಂದ ಅವರ ಜೀವಕ್ಕೆ ಅಪಾಯವಿತ್ತು. ಇದನ್ನರಿತ ವೈದ್ಯರು ಜಾಗರೂಕರಾಗಿ ಶಸ್ತ್ರಚಿಕಿತ್ಸೆ ನಡೆಸಲು ಮುಂದಾದರು.
ರೋಗಿ ಸುರಕ್ಷಿತ: ಡಾ.ಪವನ್ ಅವರು ತಮ್ಮ ಸಹ ವೈದ್ಯರಾದ ಡಾ.ಅಮನ್, ತಂತ್ರಜ್ಞ ಅಶೋಕ್, ಸುಮನ್, ಸುನೀಲ್ ಮತ್ತು ಭಾವನಾ ಅವರೊಂದಿಗೆ ಸುಮಾರು 4 ಗಂಟೆಗಳ ಪರಿಶ್ರಮದ ನಂತರ ಶ್ವಾಸನಾಳದಲ್ಲಿ ಸಿಲುಕಿದ್ದ ಸೂಜಿಯನ್ನು ಚಿಕ್ಕ ಬ್ರಾಂಕೋಸ್ಕೋಪ್‌ನಿಂದ ಹೊರತೆಗೆದರು. ಇದರಿಂದಾಗಿ ರೋಗಿಯು ಸ್ವಲ್ಪ ರಕ್ತಸ್ರಾವವನ್ನು ಅನುಭವಿಸಿದರು. ಆದರೆ ರೋಗಿಯ ಜೀವ ಉಳಿಸಲಾಯಿತು ಮತ್ತು ಅವರನ್ನು ದೊಡ್ಡ ಶಸ್ತ್ರಚಿಕಿತ್ಸೆಗೆ ಒಳ ಪಡಿಸುವ ಅವಶ್ಯಕತೆ ಎದುರಾಗಲಿಲ್ಲ. ಸದ್ಯ ರೋಗಿ ಸಂಪೂರ್ಣ ಆರೋಗ್ಯವಾಗಿದ್ದು, ಮನೆಗೆ ಕಳುಹಿಸಲಾಗಿದೆ. ರೋಗಿ ಮತ್ತು ಆತನ ಸಂಬಂಧಿಕರು ಪಿಜಿಐಎಂಎಸ್ ವೈದ್ಯರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಓದಿ:ಗುಂಡೇಟು ಬಿದ್ದ ಇಂದಿರಾ ಗಾಂಧಿ ಬದುಕಿನ ಅಂತಿಮ ಕ್ಷಣಗಳು ಹೇಗಿದ್ವು? ಖ್ಯಾತ ವೈದ್ಯ ವೇಣುಗೋಪಾಲರ ಆತ್ಮಚರಿತ್ರೆಯಲ್ಲಿ ದಾಖಲು