ನವದೆಹಲಿ:ಹರಿಯಾಣದ ಪೊಲೀಸ್ ಸಬ್ ಇನ್ಸ್ಪೆಕ್ಟರ್ನನ್ನು ದೆಹಲಿಯ ಪೊಲೀಸ್ ಕಾನ್ಸ್ಟೇಬಲ್ ಗುಂಡಿಕ್ಕಿ ಸಾಯಿಸಿರುವ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.
ಮೃತ ಸಬ್ ಇನ್ಸ್ಪೆಕ್ಟರ್ಅನ್ನು ರೋಹ್ಟಕ್ ಮೂಲದ ವೀರೇಂದ್ರ ಎಂದು ಗುರುತಿಸಲಾಗಿದೆ. ಇವರು ಕಳೆದ ಐದಾರು ದಿನಗಳಿಂದ ದೆಹಲಿಯ ಕೃಷ್ಣ ನಗರದಲ್ಲಿರುವ ತಮ್ಮ ಸೋದರ ಮಾವನ ಮನೆಯಲ್ಲಿ ತಂಗಿದ್ದರು. ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ದೆಹಲಿಯ ಸಫ್ದರ್‌ಜಂಗ್ ಪ್ರದೇಶದಲ್ಲಿ ವಿಕ್ರಮ್ ಎಂಬ ದೆಹಲಿಯ ಕಾನ್ಸ್ಟೇಬಲ್ ವೀರೇಂದ್ರ ಅವರ ತಲೆಗೆ ಗುಂಡಿಕ್ಕಿ ಹತ್ಯೆಗೈದಿದ್ದಾರೆ.