ಕರ್ನಾಟಕ

karnataka

ETV Bharat / bharat

ಮದುವೆ ಮೂಲಕ ವಂಚಿಸುವುದೇ ಕಾಯಕ.. 7 ಪುರುಷರಿಗೆ ಟೋಪಿ ಹಾಕಿದ ಚಾಲಾಕಿ ಬಂಧನ - ಮದುವೆ ಮಾಡಿ ಹಣ ಲೂಟಿ ಮಾಡಿದ ವಧು

ವಯಸ್ಸಾದವರು, ಅವಿವಾಹಿತರನ್ನೇ ಗುರಿ​ ಮಾಡಿ ಮದುವೆ ಮಾಡಿಕೊಂಡು ಲಕ್ಷಾಂತರ ಹಣ ಲೂಟಿ ಮಾಡುತ್ತಿದ್ದ ಮಹಿಳೆಯನ್ನು ಹರಿಯಾಣ ಪೊಲೀಸರು ಬಂಧಿಸಿದ್ದಾರೆ. ಈಕೆ ಏಳು ಪುರುಷರನ್ನು ವಿವಾಹವಾಗಿ ವಂಚಿಸಿದ್ದು ಬೆಳಕಿಗೆ ಬಂದಿದೆ.

Haryana police arrested fraud bride in panipat
ಪಾಣಿಪತ್‌ನಲ್ಲಿ ಮದುವೆಯಾಗಿ ವಂಚಿಸುತ್ತಿದ್ದ ವಧು ಬಂಧನ

By

Published : Mar 27, 2022, 10:13 AM IST

Updated : Mar 27, 2022, 2:48 PM IST

ಪಾಣಿಪತ್​(ಹರಿಯಾಣ):ಮಾರ್ಚ್.13 ರಂದು ಪಾಣಿಪತ್ ಜಿಲ್ಲೆಯ ನೌಲ್ತಾ ಗ್ರಾಮದಲ್ಲಿ ಮಹಿಳೆ ವ್ಯಕ್ತಿಯೋರ್ವರ ಜೊತೆ ಐದನೇ ಮಡುವೆ ಸಿದ್ಧತೆ ನಡೆಸಿದ್ದಳು. ಈ ವಿಷಯ ತಿಳಿದು ವಂಚನೆಗೊಳಗಾದ ಮೂರು ಮತ್ತು ನಾಲ್ಕನೇ ಗಂಡಂದಿರು ಮದುವೆಯ ಆಮಂತ್ರಣ ಪತ್ರಗಳನ್ನು ತೋರಿಸಿ ಮೋಸದ ವೈಖರಿಯನ್ನು ಬಯಲು ಮಾಡಿದ್ದರು. ಪೊಲೀಸರ ತನಿಖೆ ವೇಳೆ ಇದುವರೆಗೆ ಮಹಿಳೆ ಏಳು ಜನರನ್ನು ಮದುವೆಯಾಗಿ ವಂಚಿಸಿರುವುದು ಬೆಳಕಿಗೆ ಬಂದಿದೆ.

ವಯಸ್ಸಾದ, ಮದುವೆಯಾಗದವರೇ ಟಾರ್ಗೆಟ್​:ಹರಿಯಾಣದಲ್ಲಿ ಮದುವೆಯಾಗದ ಅಥವಾ ವಿಚ್ಛೇದನ ಪಡೆದಿರುವ ಯುವಕರು ಅಧಿಕ ಸಂಖ್ಯೆಯಲ್ಲಿದ್ದಾರೆ. ಅಂತಹವರನ್ನೇ ಟಾರ್ಗೆಟ್​ ಮಾಡುತ್ತಿದ್ದ ಈ ತಂಡ​​, ಮದುವೆ ಹೆಸರಲ್ಲಿ ವಂಚನೆಯ ಖೆಡ್ಡಾಗೆ ಬೀಳಿಸುತ್ತಿತ್ತು. ಹುಡುಗರ ಅಸಹಾಯಕತೆಯನ್ನು ಬಳಸಿಕೊಂಡು ಬಲಿಪಶುಗಳನ್ನಾಗಿ ಮಾಡುತ್ತಿದ್ದರು. ಮದುವೆ ನಡೆದ 10 ದಿನಗಳಲ್ಲಿ ಮಹಿಳೆ ಆಭರಣ ಮತ್ತು ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗುತ್ತಿದ್ದಳು.

ಹುಡುಗನ ಮನೆಯವರಿಗೆ ಬೆದರಿಕೆ:ಮೂವರು ಮಹಿಳೆಯರು ಸೇರಿದಂತೆ ಏಳ ಜನರ ಗುಂಪು ಈ ಕೆಲಸದಲ್ಲಿ ತೊಡಗಿತ್ತು. ಮಹಿಳೆಯೂ ವ್ಯಕ್ತಿಯನ್ನು ಮದುವೆಯಾಗಿ ಗಂಡನ ಮನೆಯವರಗೆ ಈಕೆಯ ಬಗ್ಗೆ ವಿಷಯ ಗೊತ್ತಾಗುವ ಮೊದಲೇ ಜಗಳವಾಡಲು ಆರಂಭಿಸುತ್ತಿದ್ದಳು. ಬಳಿಕ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ಬೆದರಿಸಿವೊಡ್ಡಿ ಸಮಯ ನೋಡಿ ಹಣ ದೋಚಿ ಪರಾರಿಯಾಗುತ್ತಿದ್ದಳು.

ಏಳು ಜನರನ್ನು ಖೆಡ್ಡಾಗೆ ಬೀಳಿಸಿದ ಚಾಲಾಕಿ:ಈ ಗ್ಯಾಂಗ್​ ತುಂಬಾ ವ್ಯವಸ್ಥಿತವಾಗಿ ಯೋಜನೆ ರೂಪಿಸಿ ಹುಡುಗರನ್ನು ಬಲೆಗೆ ಬೀಳಿಸಿಕೊಳ್ಳುತ್ತಿತ್ತು. ಮಹಿಳೆಯೂ ಬೇರೆ ಬೇರೆ ಪ್ರದೇಶಗಳಲ್ಲಿನ ವ್ಯಕ್ತಿಗಳನ್ನು ಟಾರ್ಗೆಟ್​ ಮಾಡಿದ್ದಳು. ಇದರಿಂದ ಹಿಂದೆ ಮದುವೆಯಾದ ಬಗ್ಗೆ ಯಾವುದೇ ಮಾಹಿತಿ ಸಿಗುತ್ತಿರಲಿಲ್ಲ. ಪಾಣಿಪತ್‌ ನೌಲ್ತಾ ನಿವಾಸಿ ಸಂತ್ರಸ್ತ ರಾಜೇಂದ್ರ ಕುಮಾರ್ ಮಾತನಾಡಿ, ಕರ್ನಾಲ್‌ನ ಅಂಜು (ಹೆಸರು ಬದಲಾಯಿಸಲಾಗಿದೆ) ಮೊದಲು ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಖೇಡಿ ಕರಮ್ ಗ್ರಾಮದ ನಿವಾಸಿ ಸತೀಶ್ ಅವರನ್ನು ಮದುವೆಯಾಗಿದ್ದಾಳೆ. ಇದಕ್ಕೆ ಸಾಕ್ಷಿಯೆಂಬಂತೆ ಮಹಿಳೆಗೆ ಮಗುವೂ ಇದೆ. ಜನವರಿ 1 ರಂದು ರಾಜಸ್ಥಾನದಲ್ಲಿ ಎರಡನೇ ಮದುವೆ ನಡೆದಿದೆ ಎಂದು ತಿಳಿದುಬಂದಿದೆ.

ಹೆಸರು ಬದಲಿಸಿ ವಿವಾಹವಾಗುತ್ತಿದ್ದ ಮಹಿಳೆ:ಆರೋಪಿ ಮಹಿಳೆ ಆಧಾರ್ ಕಾರ್ಡಿನಲ್ಲಿ ತನ್ನ ತಂದೆಯ ಹೆಸರನ್ನು ಬದಲಾಯಿಸಿ ಮದುವೆ ಮಾಡಿಕೊಳ್ಳುತ್ತಿದ್ದಳು. ಈಕೆ ಅಂಬಾಲಾ ಜಿಲ್ಲೆಯ ಬುಟಾನಾ ಗ್ರಾಮದ ಸುನಿಲ್ ಅವರೊಂದಿಗೆ ಫೆಬ್ರವರಿ.15 ರಂದು ಮೂರನೇ ವಿವಾಹ ಮಾಡಿಕೊಂಡಿದ್ದು, ಫೆಬ್ರುವರಿ 21ರಂದು ಪಾಣಿಪತ್‌ ನೌಲ್ತಾ ಗ್ರಾಮದ ರಾಜೇಂದ್ರ ಅವರೊಂದಿಗೆ ನಾಲ್ಕನೇ ವಿವಾಹ, ಉತ್ತರ ಪ್ರದೇಶದ ಕುಟಾನಾ ಗ್ರಾಮದ ಗೌರವ್ ಅವರೊಂದಿಗೆ 5 ನೇ ವಿವಾಹವಾಗಿದ್ದಾಳೆ. ಹಾಗೆಯೇ ಕರ್ನಾಲ್ ಜಿಲ್ಲೆಯ ಸಂದೀಪ್ ಜೊತೆ ಆರನೇ ಮದುವೆ ಹಾಗೂ ಇತ್ತೀಚೆಗೆ ಪಾಣಿಪತ್ ಜಿಲ್ಲೆಯ ಬಧ್ವಾ ರಾಮ್ ಕಾಲೋನಿಯ ನಿವಾಸಿ ಸುಮಿತ್ ಜೊತೆ ಏಳನೇ ವದುವೆಯಾಗಿ ಹಣ, ಚಿನ್ನಾಭರಣ ದೋಚಿ ಪರಾರಿಯಾಗಿದ್ದಳು.

ವಂಚಕಿ ಮಹಿಳೆಯ ವಿರುದ್ಧ ನಾಲ್ಕನೇ ಪತಿ ಪೊಲೀಸರಿಗೆ ದೂರು ನೀಡಿದ್ದು, ಇದರನ್ವಯ ಮಹಿಳೆ ಸೇರಿದಂತೆ ಏಳು ಜನರ ವಿರುದ್ಧ ವಿವಿಧ ಐಪಿಸಿ ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ಕೇರಳದ ಬಾಲಕನಿಗೆ ರಕ್ತದ ಕ್ಯಾನ್ಸರ್‌; ಜೀವ ಉಳಿಸಲು ಜನರ ಹರಸಾಹಸ

Last Updated : Mar 27, 2022, 2:48 PM IST

ABOUT THE AUTHOR

...view details