ಕರ್ನಾಟಕ

karnataka

ETV Bharat / bharat

Nuh violence: ಹರಿಯಾಣ ಹಿಂಸಾಚಾರ: ಅಕ್ರಮ ಕಟ್ಟಡ ಧ್ವಂಸ ಕಾರ್ಯಾಚರಣೆಗೆ ಹೈಕೋರ್ಟ್​ ತಡೆ - ಹರಿಯಾಣ ಹಿಂಸಾಚಾರ

High court stay demolition: ಹರಿಯಾಣ ಹಿಂಸಾಚಾರದ ಆರೋಪಿಗಳಿಗೆ ಸೇರಿದ ಅಕ್ರಮ ಕಟ್ಟಡಗಳ ಧ್ವಂಸ ಕಾರ್ಯಾಚರಣೆಗೆ ಹರಿಯಾಣ- ಪಂಜಾಬ್ ಹೈಕೋರ್ಟ್​ ತಡೆ ನೀಡಿದೆ. ಇನ್ನೊಂದೆಡೆ, ಸಾರ್ವಜನಿಕರಿಗೆ ಉಂಟಾಗುವ ತೊಂದರೆ ತಪ್ಪಿಸಲು ನಿಗದಿತ ಕಾಲಮಿತಿಯಲ್ಲಿ ಎಟಿಎಂ, ಬ್ಯಾಂಕ್​ ವಹಿವಾಟಿಗೆ ಅವಕಾಶ ನೀಡಲಾಗಿದೆ.

ಅಕ್ರಮ ಕಟ್ಟಡ ಧ್ವಂಸ ಕಾರ್ಯಾಚರಣೆಗೆ ಹೈಕೋರ್ಟ್​ ತಡೆ
ಅಕ್ರಮ ಕಟ್ಟಡ ಧ್ವಂಸ ಕಾರ್ಯಾಚರಣೆಗೆ ಹೈಕೋರ್ಟ್​ ತಡೆ

By

Published : Aug 7, 2023, 4:17 PM IST

ನುಹ್:ಹರಿಯಾಣದ ನುಹ್‌ ಜಿಲ್ಲೆಯಲ್ಲಿ ಎರಡು ಗುಂಪುಗಳ ನಡುವೆ ನಡೆದ ಸಂಘರ್ಷ, ಹಿಂಸಾಚಾರದಲ್ಲಿ ಅಪಾರ ಆಸ್ತಿಪಾಸ್ತಿ ನಾಶ, ಲೂಟಿ ಮಾಡಿದ ಆರೋಪಿಗಳಿಗೆ ಸಂಬಂಧಿಸಿದ ಅಕ್ರಮ ಕಟ್ಟಡ, ಅಂಗಡಿಗಳನ್ನು ನೆಲಸಮ ಮಾಡುವ ಕಾರ್ಯಾಚರಣೆಗೆ ಪಂಜಾಬ್​ ಮತ್ತು ಹರಿಯಾಣ ಹೈಕೋರ್ಟ್​ ಇಂದು (ಸೋಮವಾರ) ತಡೆ ನೀಡಿತು.

ಆಗಸ್ಟ್​ 1ರಂದು ನುಹ್​ನಲ್ಲಿ ಬ್ರಜ್ ಮಂಡಲ್ ಶೋಭಾಯಾತ್ರೆಯ ವೇಳೆ ಎರಡು ಸಮುದಾಯಗಳ ನಡುವೆ ಹಿಂಸಾಚಾರ ನಡೆದಿತ್ತು. ನಂತರ ಜಿಲ್ಲೆಯಲ್ಲಿ ಅತಿಕ್ರಮಣದ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಜರುಗಿಸಿತ್ತು. ಈವರೆಗೆ 35 ಕಡೆಗಳಲ್ಲಿ ಬುಲ್ಡೋಜರ್​ ಬಳಸಿ ಅಕ್ರಮ ಕಟ್ಟಡಗಳು, ಅಂಗಡಿಗಳು, ಹೋಟೆಲ್​ಗಳನ್ನು ನೆಲಸಮ ಮಾಡಲಾಗಿದೆ. ಒತ್ತುವರಿಯಾಗಿದ್ದ 57 ಎಕರೆ ಭೂಮಿಯನ್ನು ವಶಕ್ಕೆ ಪಡೆಯಲಾಗಿದೆ.

ಸರ್ಕಾರದ ಬಲ್ಡೋಜರ್​ ಕಾರ್ಯಾಚರಣೆ ಜನರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು. ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನುಹ್ ಜಿಲ್ಲೆಯಲ್ಲಿ ಕಟ್ಟಡ ಧ್ವಂಸ ಕಾರ್ಯಾಚರಣೆಗೆ ತಕ್ಷಣಕ್ಕೆ ತಡೆ ಹಾಕಿ ಆದೇಶಿಸಿದೆ.

ಕಲ್ಲು ತೂರಾಟ ನಡೆದ ಹೋಟೆಲ್​ ಧ್ವಂಸ:ನುಹ್​ ನಗರದ ನಲ್ಹಾದ್ ಪ್ರದೇಶದಲ್ಲಿರುವ ಸಹಾರಾ ಹೋಟೆಲ್​ ಮೇಲಿಂದ ಕಲ್ಲು ತೂರಾಟ ನಡೆಸಲಾಗಿತ್ತು. ಬಳಿಕ ಹೋಟೆಲ್​ ಪಕ್ಕದಲ್ಲಿದ್ದ ಗೋದಾಮನ್ನು ಲೂಟಿ ಮಾಡಿ ಬೆಂಕಿ ಹಚ್ಚಲಾಗಿತ್ತು. ಹೀಗಾಗಿ ಹೋಟೆಲ್​ ಅನ್ನು ಅಧಿಕಾರಿಗಳು ಅಕ್ರಮ ನಿರ್ಮಾಣದ ಅಡಿಯಲ್ಲಿ ನೆಲಸಮ ಮಾಡಿದ್ದಾರೆ. ಅದರ ಪಕ್ಕದ ಹಲವು ಮನೆಗಳು, ಸೇರಿದಂತೆ ಸ್ಲಂಗಳನ್ನೂ ತೆರವು ಮಾಡಿಸಲಾಗಿದೆ.

156 ಜನರ ಬಂಧನ, ಇಂಟರ್ನೆಟ್​ ಸ್ಥಗಿತ​:ನುಹ್ ಹಿಂಸಾಚಾರದ ನಂತರ ಪರಿಸ್ಥಿತಿ ಸಹಜವಾಗಿದ್ದರೂ, ಮುನ್ನೆಚ್ಚರಿಕೆಯಾಗಿ ಆ.8 ರವರೆಗೆ ಜಿಲ್ಲೆಯಲ್ಲಿ ಇಂಟರ್ನೆಟ್​​ ಸೇವೆಯನ್ನು ಬಂದ್​​ ಮಾಡಲಾಗಿದೆ. ಇದಲ್ಲದೇ ಜಿಲ್ಲೆಯಲ್ಲಿ ಇನ್ನೂ ಕರ್ಫ್ಯೂ ಜಾರಿಯಲ್ಲಿದೆ. ಈವರೆಗೂ 156 ಜನರನ್ನು ಬಂಧಿಸಲಾಗಿದೆ. ಜನರು ಕಠಿಣ ನಿರ್ಬಂಧಗಳಿಂದ ತೊಂದರೆ ಅನುಭವಿಸದಿರಲಿ ಎಂಬ ಕಾರಣಕ್ಕಾಗಿ ಸೋಮವಾರ ನಾಲ್ಕು ಗಂಟೆಗಳ ಕಾಲ ಕರ್ಫ್ಯೂ ಸಡಿಲಿಸಲಾಗಿತ್ತು.

ಬ್ಯಾಂಕ್​, ಎಟಿಎಂ ಪುನಾರಂಭ:ನುಹ್​ನಲ್ಲಿ ಹಿಂಸಾಚಾರ ನಡೆದು 8ನೇ ದಿನವಾದ ಸೋಮವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ಬ್ಯಾಂಕ್ ಮತ್ತು ಎಟಿಎಂಗಳನ್ನು ತೆರೆಯಲು ಆದೇಶ ನೀಡಲಾಗಿದೆ. ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ರವರೆಗೆ ಬ್ಯಾಂಕ್‌ಗಳಲ್ಲಿ ಹಣಕಾಸು ವಹಿವಾಟು ನಡೆಸಲು ಅನುಮತಿಸಿದರೆ, ಎಟಿಎಂಗಳು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ತೆರೆದಿರುತ್ತವೆ. ಬ್ಯಾಂಕ್, ಎಟಿಎಂ ತೆರೆಯಲು ಜಿಲ್ಲಾಡಳಿತ ನಿರ್ಧರಿಸಿದ್ದರೂ ಸಾಮಾನ್ಯ ದಿನಗಳಲ್ಲಿ ಕಂಡು ಬರುತ್ತಿದ್ದಷ್ಟು ಜನರು ಕಾಣಸಿಗುತ್ತಿಲ್ಲ.

ಇದನ್ನೂ ಓದಿ:ಹರಿಯಾಣ ಹಿಂಸಾಚಾರ: ಇಂದು ಸಹ ಮುಂದುವರಿದ ಬುಲ್ಡೋಜರ್​ ಸದ್ದು, ಸಮಾಜಘಾತುಕರಿಗೆ ತಟ್ಟಿದ ಬಿಸಿ

ABOUT THE AUTHOR

...view details