ಪಲ್ವಾಲ್(ಹರಿಯಾಣ): ನವದೆಹಲಿ-ಝಾನ್ಸಿ ತಾಜ್ ಎಕ್ಸ್‌ಪ್ರೆಸ್ (New Delhi-Jhansi Taj Express rail) ರೈಲಿನ ಎಸಿ ಕೋಚ್‌ನಲ್ಲಿ ಬೆಂಕಿ (minor fire broke out in AC coach) ಕಾಣಿಸಿಕೊಂಡು ಪ್ರಯಾಣಿಕರಲ್ಲಿ ಆತಂಕ ಮೂಡಿಸಿದ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.
ನವದೆಹಲಿ - ಝಾನ್ಸಿ ತಾಜ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ: ಪ್ರಯಾಣಿಕರು ಬಚಾವ್ - ರೈಲಿನ ಎಸಿ ಕೋಚ್‌ನಲ್ಲಿ ಬೆಂಕಿ
ನವದೆಹಲಿ - ಝಾನ್ಸಿ ತಾಜ್ ಎಕ್ಸ್‌ಪ್ರೆಸ್ ರೈಲಿನಲ್ಲಿ (New Delhi-Jhansi Taj Express rail) ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಎಚ್ಚೆತ್ತ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಬ್ರೇಕ್ಗಳ ಜಾಮ್‌ನಿಂದ ರೈಲಿನ ಎಸಿ ಬೋಗಿಯಲ್ಲಿ (minor fire broke out in AC coach)ಬೆಂಕಿ ಹೊತ್ತಿಕೊಂಡಿತ್ತು.
![ನವದೆಹಲಿ - ಝಾನ್ಸಿ ತಾಜ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ: ಪ್ರಯಾಣಿಕರು ಬಚಾವ್ minor fire breaks out in taj express](https://etvbharatimages.akamaized.net/etvbharat/prod-images/768-512-13620672-thumbnail-3x2-fire.jpg)
ತಾಜ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ
ಹರಿಯಾಣದ ಪಲ್ವಾಲ್‌ನ ಅಸಾವತಿ ನಿಲ್ದಾಣದಿಂದ ರೈಲು ಚಲಿಸುತ್ತಿದ್ದ ವೇಳೆ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ, ಎಚ್ಚೆತ್ತ ಸಿಬ್ಬಂದಿ ಪರಿಶೀಲಗಾಗಿ ರೈಲನ್ನು ನಿಜಾಮುದ್ದೀನ್ ಮತ್ತು ಪಲ್ವಾಲ್ ವಿಭಾಗದ ನಡುವಿನ ಅಸೋಟಿ ನಿಲ್ದಾಣದಲ್ಲಿ ನಿಲ್ಲಿಸಿದ್ದಾರೆ. ಈ ಹಠಾತ್ ಬೆಳವಣಿಗೆಯಿಂದ ಪ್ರಯಾಣಿಕರು ಗಾಬರಿಗೊಂಡಿದ್ದಾರೆ.
ಬ್ರೇಕ್ ಜಾಮ್‌ನಿಂದ ಬೆಂಕಿ ಕಾಣಿಸಿಕೊಂಡಿತ್ತು. ಇದೀಗ ಬೆಂಕಿಯನ್ನು ನಂದಿಸಲಾಗಿದೆ. ಬೆಂಕಿಗಿಂತಲೂ ಬ್ರೇಕ್ಗಳ ತಿಕ್ಕಾಟದಿಂದ ಹೆಚ್ಚು ಹೊಗೆ ಕಾಣಿಸಿಕೊಂಡಿತ್ತು. ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಉತ್ತರ ರೈಲ್ವೆಯ ಸಿಪಿಆರ್ಒ ದೀಪಕ್ ಕುಮಾರ್ ತಿಳಿಸಿದ್ದಾರೆ.