ಕರ್ನಾಟಕ

karnataka

ETV Bharat / bharat

ಆಮ್ಲಜನಕದ ಮಟ್ಟ ಕುಸಿತ.. ಹರಿಯಾಣದ ಗೃಹ ಸಚಿವ ಅನಿಲ್​ ವಿಜ್​ ಆಸ್ಪತ್ರೆಗೆ ದಾಖಲು.. - PGIMER

ಅನಾರೋಗ್ಯದ ಕಾರಣಗಳಿಂದಾಗಿ ಅನಿಲ್ ವಿಜ್​ ರಾಜ್ಯ ವಿಧಾನಸಭೆಯ ಮುಂಗಾರು ಅಧಿವೇಶನವನ್ನು ತಪ್ಪಿಸಿಕೊಂಡಿದ್ದರು. ಅವರು ಕಳೆದ ವರ್ಷ ಕೋವಿಡ್​ಗೆ​ ತುತ್ತಾಗಿ, ಸುಮಾರು ಒಂದು ತಿಂಗಳು ಆಸ್ಪತ್ರೆಯಲ್ಲಿದ್ದರು..

ಅನಿಲ್​ ವಿಜ್
ಅನಿಲ್​ ವಿಜ್

By

Published : Aug 22, 2021, 9:26 PM IST

Updated : Aug 22, 2021, 9:54 PM IST

ಚಂಡೀಗಢ :ಹರಿಯಾಣದ ಗೃಹ ಮತ್ತು ಆರೋಗ್ಯ ಸಚಿವ ಅನಿಲ್ ವಿಜ್​ಗೆ ಆಮ್ಲಜನಕದ ಮಟ್ಟ ಕುಸಿದ ಹಿನ್ನೆಲೆ ಚಂಡೀಗಢದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗೆ (ಪಿಜಿಐಎಂಇಆರ್) ಸೇರಿಸಲಾಗಿದೆ. ಮೂಲಗಳ ಪ್ರಕಾರ, ಅನಿಲ್​ ವಿಜ್​ಗೆ ಶ್ವಾಸಕೋಶ ತಜ್ಞರ ನೇತೃತ್ವದಲ್ಲಿ ಚಿಕತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಕಿರಿಯ ಸಹೋದರನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಅವರು ಕಳೆದ ವಾರ ರೋಹ್ಟಕ್‌ಗೆ ಹೋಗಿದ್ದರು. ಆ ಸಮಯದಲ್ಲಿ ಹೆಲಿಕಾಪ್ಟರ್​ನಲ್ಲಿ ಪ್ರಯಾಣಿಸಿದ್ದರಿಂದ ಉಸಿರಾಟದಲ್ಲಿ ಏರಿಳಿತವಾಗಿದೆ ಎಂದು ಮೂಲಗಳು ತಿಳಿಸಿವೆ. ಸಿಎಂ ಮನೋಹರಲಾಲ್​ ಖಟ್ಟರ್​, ಆಸ್ಪತ್ರೆಗೆ ಭೇಟಿ ನೀಡಿ ವಿಜ್​ ಅವರ ಆರೋಗ್ಯ ವಿಚಾರಿಸಿದ್ದಾರೆ.

ಅನಿಲ್ ವಿಜ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಹರಿಯಾಣ ಸಿಎಂ

ಅನಾರೋಗ್ಯದ ಕಾರಣಗಳಿಂದಾಗಿ ಅನಿಲ್ ವಿಜ್​ ರಾಜ್ಯ ವಿಧಾನಸಭೆಯ ಮುಂಗಾರು ಅಧಿವೇಶನವನ್ನು ತಪ್ಪಿಸಿಕೊಂಡಿದ್ದರು. ಅವರು ಕಳೆದ ವರ್ಷ ಕೋವಿಡ್​ಗೆ​ ತುತ್ತಾಗಿ, ಸುಮಾರು ಒಂದು ತಿಂಗಳು ಆಸ್ಪತ್ರೆಯಲ್ಲಿದ್ದರು.

ಇದನ್ನೂ ಓದಿ: ಈ ಕಾರಣಕ್ಕಾಗಿಯೇ ದೇಶದಲ್ಲಿ CAA ಜಾರಿ ಅಗತ್ಯ : ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ

Last Updated : Aug 22, 2021, 9:54 PM IST

ABOUT THE AUTHOR

...view details