ಕರ್ನಾಟಕ

karnataka

By

Published : May 24, 2021, 8:42 PM IST

ETV Bharat / bharat

ಹರಿಯಾಣ ಸರ್ಕಾರದಿಂದ ಉಚಿತ ಪತಂಜಲಿ ಕೊರೊನಿಲ್ ಕಿಟ್ ವಿತರಣೆ: ಘೋಷಣೆ

ಹರಿಯಾಣದಲ್ಲಿ ಒಂದು ಲಕ್ಷ ಪತಂಜಲಿಯ ಕೊರೊನಿಲ್ ಕಿಟ್‌ಗಳನ್ನು ಉಚಿತವಾಗಿ ವಿತರಿಸಲಾಗುವುದು ಎಂದು ಅನಿಲ್ ವಿಜ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

haryana-government-will-distribute-patanjalis-coronil-kit-for-free
haryana-government-will-distribute-patanjalis-coronil-kit-for-free

ಚಂಡೀಗಢ: ಹರಿಯಾಣದ ಕೊರೊನಾ ಸೋಂಕಿತರಿಗೆ ಪತಂಜಲಿಯ ಕರೋನಿಲ್ ಕಿಟ್ ವಿತರಿಸಲಾಗುವುದು ಎಂದು ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜ್ ಟ್ವೀಟ್ ನಲ್ಲಿ ಪ್ರಕಟಿಸಿದ್ದಾರೆ. ಈ ಕಿಟ್ ಅನ್ನು ರೋಗಿಗಳಿಗೆ ಉಚಿತವಾಗಿ ನೀಡಲಾಗುತ್ತದಂತೆ.

ಹರಿಯಾಣದಲ್ಲಿ ಒಂದು ಲಕ್ಷ ಪತಂಜಲಿಯ ಕೊರೊನಿಲ್ ಕಿಟ್‌ಗಳನ್ನು ಉಚಿತವಾಗಿ ವಿತರಿಸಲಾಗುವುದು ಎಂದು ಅನಿಲ್ ವಿಜ್ ಟ್ವೀಟ್ ಮೂಲಕ ತಿಳಿಸಿದ್ದಾರೆ. ಕೊರೊನಿಲ್ ವೆಚ್ಚದ ಅರ್ಧದಷ್ಟು ಭಾಗವನ್ನು ಪತಂಜಲಿ ಮತ್ತು ಅರ್ಧದಷ್ಟು ಹರಿಯಾಣ ಸರ್ಕಾರದ ಕೋವಿಡ್ ರಿಲೀಫ್ ಫಂಡ್​ನಿಂದ ಭರಿಸಲಾಗುವುದು ಎಂದು ಅಲ್ಲಿನ ಸರ್ಕಾರ ತಿಳಿಸಿದೆ.

ಬಾಬಾ ರಾಮದೇವ್ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಆಪಾದಿತ ವಿಡಿಯೊದಲ್ಲಿ, ಬಾಬಾ ರಾಮದೇವ್ ಅವರು ಕೊರೊನಾ ಎರಡೂ ಲಸಿಕೆಗಳನ್ನು ಹಾಕಿದರೂ ದೇಶದ 1000 ವೈದ್ಯರು ಪ್ರಾಣ ಕಳೆದುಕೊಂಡಿದ್ದಾರೆ. ರಾಮದೇವ್ ಅವರ ಈ ಹೇಳಿಕೆಯ ನಂತರ ದೊಡ್ಡ ವಿವಾದ ಸಹ ಉದ್ಭವಿಸಿದೆ. ಇನ್ನು ಭಾರತೀಯ ವೈದ್ಯಕೀಯ ಸಂಘ (ಐಎಂಎ) ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಬಂಧನಕ್ಕೂ ಒತ್ತಾಯಿಸಿದೆ.

ABOUT THE AUTHOR

...view details