ಕರ್ನಾಟಕ

karnataka

ETV Bharat / bharat

ಬೆಳಗಾಗುವುದರೊಳಗೆ ರೈತ ಕೋಟ್ಯಧಿಪತಿ.. ಕೃಷಿಕನ ಖಾತೆಗೆ 200 ಕೋಟಿ ಜಮಾ... ದೃಢೀಕರಣಕ್ಕೆ ಪೊಲೀಸರ ನಕಾರ..!

ಹರಿಯಾಣದ ರೈತರೊಬ್ಬರ ಖಾತೆಗೆ 200 ಕೋಟಿ ರೂ. ಜಮಾ ಆಗಿದೆ. ತಮ್ಮ ಖಾತೆಯಲ್ಲಿ ಇಷ್ಟೊಂದು ಹಣ ಇರುವುದನ್ನು ಕಂಡು ಗಾಬರಿಯಾಗದ ರೈತರಕ್ಷಣೆ ಕೋರಿ ಪೊಲೀಸ್​ ಠಾಣೆ ಮೆ ಟ್ಟಿಲೇರಿದ್ದಾರೆ. ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.

By ETV Bharat Karnataka Team

Published : Sep 7, 2023, 10:06 PM IST

Haryana: Farmer receives Rs 200 crore in bank account, probe underway
ಬೆಳಗಾಗುವುದರೊಳಗೆ ರೈತ ಕೋಟ್ಯಧಿಪತಿ.. ಕೃಷಿಕನ ಖಾತೆಗೆ 200 ಕೋಟಿ ಜಮಾ... ದೃಢೀಕರಣಕ್ಕೆ ಪೊಲೀಸರ ನಕಾರ..!

ಚಾರ್ಖಿ ದಾದ್ರಿ(ಹರಿಯಾಣ): ಇಲ್ಲಿನ ಚರ್ಖಿ ದಾದ್ರಿ ಜಿಲ್ಲೆಯ ರೈತನೊಬ್ಬ ತನ್ನ ಬ್ಯಾಂಕ್ ಖಾತೆಗೆ 200 ಕೋಟಿ ರೂಪಾಯಿ ಜಮೆ ಆಗಿದೆ ಎಂದು ಹೇಳಿಕೊಂಡಿದ್ದಾನೆ. ಈ ಪ್ರಕರಣವೀಗ ರಾಜ್ಯಾದ್ಯಂತ ಸದ್ದು ಮಾಡುತ್ತಿದ್ದು, ಈ ಪ್ರಕರಣದ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ನಿಗೂಢ ಪ್ರಕರಣದ ಬಗ್ಗೆ ಕೂಲಂಕಷವಾಗಿ ತನಿಖೆ ಮಾಡುತ್ತಿದ್ದೇವೆ ಎಂದು ಹರಿಯಾಣ ಪೊಲೀಸರು ಗುರುವಾರ ಸ್ಪಷ್ಟಪಡಿಸುತ್ತಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪರಿಶೀಲನೆ ನಡೆಸಲು ಶುಕ್ರವಾರ ಬ್ಯಾಂಕ್‌ಗೆ ಭೇಟಿ ನೀಡವುದಾಗಿ ಪೊಲೀಸರು ತಿಳಿಸಿದ್ದಾರೆ. ತಮ್ಮ ಖಾತೆಗೆ ಹಣ ಬಂದಿರುವ ಬಗ್ಗೆ ರೈತ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಈ ಸಂಬಂಧ ಮಾಹಿತಿ ಪಡೆದ ಪೊಲೀಸರು ತಪಾಸಣೆ ನಡೆಸಿದ್ದಾರೆ. ತನ್ನ ಖಾತೆಗೆ ಹಣ ಹೇಗೆ ಬಂತು ಮತ್ತು ಎಲ್ಲಿಂದ ಹಣ ವರ್ಗಾವಣೆಯಾಗಿದೆ ಎಂಬುದು ಖಚಿತವಾಗಿಲ್ಲ ಎಂದು ರೈತ ವಿಕ್ರಂ ಹೇಳಿಕೊಂಡಿದ್ದಾರೆ.

ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಗ್ರಾಮಸ್ಥರೊಂದಿಗೆ ಗುರುವಾರ ರೈತ ಪೊಲೀಸ್ ಠಾಣೆಗೆ ಆಗಮಿಸಿ ಪೊಲೀಸರಿಗೆ ದೂರು ಸಲ್ಲಿಸಿದರು. ಇದೇ ವೇಳೆ ತಮಗೆ ರಕ್ಷಣೆ ನೀಡಬೇಕು ಎಂದು ಕೂಡಾ ಕೋರಿಕೊಂಡಿದ್ದಾರೆ. ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ವಿಕ್ರಂ, ಬ್ಯಾಂಕ್ ಖಾತೆ ಪರಿಶೀಲಿಸಿದ್ದೇವೆ. ಖಾತೆಯಲ್ಲಿ ಕೋಟ್ಯಂತರ ರೂಪಾಯಿ ಹಣವಿದೆ, ಆದರೆ, ಬ್ಯಾಂಕ್ ಖಾತೆಯಲ್ಲಿದ್ದ 200 ಕೋಟಿ ರೂಪಾಯಿ ಬದಲು 60 ಸಾವಿರ ರೂಪಾಯಿ ವಂಚನೆ ಮಾಡಿರುವುದನ್ನು ಪೊಲೀಸರು ಒಪ್ಪಿಕೊಂಡಿದ್ದಾರೆ ಎಂದು ರೈತ ಹೇಳುತ್ತಿದ್ದಾನೆ.

ರಕ್ಷಣೆ ನೀಡುವಂತೆ ಪೊಲೀಸರಿಗೆ ಮೊರೆ ಇಟ್ಟ ರೈತ:ರೈತನಿಂದ ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡಿರುವ ಪೊಲೀಸರು, ಖಾತೆಯಲ್ಲಿ ಇರುವ ಹಣ ಹಾಗೂ ಅದರ ಮೂಲಕದ ತನಿಖೆಗಾಗಿ ಶುಕ್ರವಾರ ಬ್ಯಾಂಕ್‌ಗೆ ಭೇಟಿ ನೀಡುವುದಾಗಿ ಹೇಳಿದ್ದಾರೆ. ತಮಗೆ ಗೊತ್ತಿಲ್ಲದೇ ಇಷ್ಟೊಂದು ಹಣ ತಮ್ಮ ಖಾತೆಗೆ ಜಮೆ ಆಗಿರುವ ಹಿನ್ನೆಲೆಯಲ್ಲಿ ನನ್ನ ಕುಟುಂಬ ವರ್ಗ ತುಂಬಾ ಭಯ ಭೀತವಾಗಿದೆ. ಹಾಗಾಗಿ ಈ ಸಮಸ್ಯೆಯನ್ನು ಪರಿಹರಿಸಲು ಬಯಸುತ್ತಿದ್ದೇನೆ. ನನ್ನ ಕುಟುಂಬಕ್ಕೆ ರಕ್ಷಣೆ ಬೇಕು ಎಂದು ರೈತ ವಿಕ್ರಮ್ ಪೊಲೀಸರನ್ನು ಕೋರಿಕೊಂಡಿದ್ದಾರೆ. ವಂಚನೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಕ್ರಮ ಕೈಗೊಳ್ಳುವಂತೆ ವಿಕ್ರಮ್ ಆಗ್ರಹಿಸಿದ್ದಾರೆ. ಈ ದೂರನ್ನು ಉನ್ನತ ಪೊಲೀಸ್​ ಅಧಿಕಾರಿಗಳಿಗೂ ಸಲ್ಲಿಸಲಾಗಿದೆ.

ಈ ಬಗ್ಗೆ ಪೊಲೀಸ್​ ಅಧಿಕಾರಿಗಳು ಹೇಳುವುದಿಷ್ಟು:ವಿಕ್ರಮ್ ಮತ್ತು ಅವರ ಕುಟುಂಬದವರು ದೂರು ದಾಖಲಿಸಿದ್ದಾರೆ. ವಿವರಗಳನ್ನು ಪರಿಶೀಲಿಸಲು ನಾವು ನಾಳೆ( ಶುಕ್ರವಾರ) ಬ್ಯಾಂಕ್‌ಗೆ ಭೇಟಿ ನೀಡುತ್ತೇವೆ ಮತ್ತು ನಮ್ಮ ತನಿಖೆಯನ್ನು ಮುಂದುವರಿಸುತ್ತೇವೆ. ಈಗಲೇ ಏನನ್ನು ಹೇಳಲು ಸಾಧ್ಯವಿಲ್ಲ. ಈ ಬಗ್ಗೆ ತನಿಖೆ ನಡೆಸುತ್ತೇವೆ. ಈ ಹಣ ಯಾರದ್ದು, ಎಲ್ಲಿಂದ ಬಂತು, ಮೂಲ ಏನು ಎಂಬ ಬಗ್ಗೆ ಖಚಿತ ಪಡಿಸಿಕೊಳ್ಳುತ್ತೇವೆ. ಆ ಬಗ್ಗೆ ಬ್ಯಾಂಕ್​ನಿಂದ ವಿವರಗಳನ್ನು ಪಡೆಯುತ್ತೇವೆ. ಸಂಪೂರ್ಣ ಪರಿಶೀಲನೆ ಹಾಗೂ ತನಿಖೆ ಬಳಿಕ ಪ್ರಕರಣದ ಬಗ್ಗೆ ಮಾತನಾಡಬಹುದು. ನಾವು ಬ್ಯಾಂಕ್ ಸ್ಟೇಟ್‌ಮೆಂಟ್ ಅನ್ನು ಪಡೆದಾಗ ಮಾತ್ರ ಎಷ್ಟು ಮೊತ್ತ ಆತನ ಪಾಸ್​ ಬುಕ್​ನಲ್ಲಿ ಇದೆ ಎಂದು ದೃಢೀಕರಿಸಬಹುದು ಎಂದು ಬಧ್ರಾ ಪೊಲೀಸ್ ಠಾಣೆಯ ತನಿಖಾಧಿಕಾರಿ, ಸಹಾಯಕ ಸನ್-ಇನ್‌ಸ್ಪೆಕ್ಟರ್ ಆಫ್ ಪೊಲೀಸ್ (ಎಎಸ್‌ಐ) ವಿಶಾಲ್ ಕುಮಾರ್ಹೇಳಿದ್ದಾರೆ.

ಇದನ್ನು ಓದಿ:ಕೋರ್ಟ್​ ಆದೇಶದ ಮೇರೆಗೆ ಜಪ್ತಿಗೆ ತೆರಳಿದ್ದ ಪೊಲೀಸರ ಮೇಲೆ ಮಹಿಳೆಯರಿಂದ ಹಲ್ಲೆ

ABOUT THE AUTHOR

...view details