ಲೂದಿಯಾನ(ಪಂಜಾಬ್) : ಲೂಧಿಯಾನದಲ್ಲಿ ನಡೆದ ಡೈರಿ ಮತ್ತು ಕಿಸಾನ್ ಮೇಳದಲ್ಲಿ ಹರಿಯಾಣದ ಹಸುವೊಂದು 24 ಗಂಟೆಗಳಲ್ಲಿ 72 ಲೀಟರ್ ಹಾಗೂ 400 ಮಿಲಿಲೀಟರ್ ಹಾಲು ನೀಡುವ ಮೂಲಕ ರಾಷ್ಟ್ರೀಯ ದಾಖಲೆ ನಿರ್ಮಿಸಿದೆ. ಲೂಧಿಯಾನದ ಜಾಗರಾನ್‌ನಲ್ಲಿ ನಡೆಯುತ್ತಿರುವ ಡೈರಿ ಮತ್ತು ಕಿಸಾನ್ ಮೇಳದಲ್ಲಿ ಹರಿಯಾಣದ ಹಸುವೊಂದು ವಿನೂತನ ದಾಖಲೆ ಬರೆದಿದೆ. 24 ಗಂಟೆಗಳಲ್ಲಿ 72 ಲೀಟರ್ 400 ಮಿಲಿ ಲೀಟರ್ ಹಾಲು ನೀಡುವ ಮೂಲಕ ಹರಿಯಾಣದ ಕುರುಕ್ಷೇತ್ರದ ಹಿಂದೆ ಇದ್ದ ದಾಖಲೆಗಳನ್ನು ಮುರಿದು, ಹೊಸ ದಾಖಲೆ ನಿರ್ಮಿಸಿದೆ.
ಪಿಡಿಎಫ್‌ಎಯಿಂದ ಟ್ರ್ಯಾಕ್ಟರ್ ನೀಡಿ ಗೌರವ ಸಲ್ಲಿಕೆ: ಈ ಹಿಂದೆ 2018ರಲ್ಲಿ ಮತ್ತೊಂದು ಹಸು 70 ಲೀಟರ್ ಹಾಗೂ 400 ಮಿಲಿ ಲೀಟರ್ ಹಾಲು ನೀಡಿತ್ತು. ಆದರೆ, ಸದ್ಯ ಈ ಹಸು ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ. ವಿವಿಧ ರಾಜ್ಯಗಳ 30 ಗ್ರಾಮಗಳು ಈ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದವು. ಈ ಬಹುಮಾನ ವಿಜೇತ ಹಸುವಿನ ಮಾಲೀಕರಿಗೆ ಭಾರತ ಸರ್ಕಾರ ಮತ್ತು ಪಿಡಿಎಫ್‌ಎಯಿಂದ ಟ್ರ್ಯಾಕ್ಟರ್ ನೀಡಿ ಗೌರವಿಸಲಾಯಿತು.
ಎಚ್ಎಫ್ ಹಸು ಹೊಸ ದಾಖಲೆ:ಸ್ಪರ್ಧೆಯಲ್ಲಿ ಪಾಲ್ಗೊಂಡಿರುವ ರೈತ ಎಚ್.ಎಫ್ ಹಸು ಹೊಂದಿದ್ದಾರೆ. ಎಚ್ಎಫ್ ಹಸು ಹೊಸ ದಾಖಲೆಯನ್ನು ನಿರ್ಮಿಸಿರುವುದು ನನಗೆ ತುಂಬಾ ಸಂತೋಷವಾಗಿದೆ. ಸ್ಪರ್ಧೆಯಲ್ಲಿ ನಾನು ಬಹುಮಾನ ಗೆದ್ದಿರುವುದು ಇದೇ ಮೊದಲು. ಸರ್ಕಾರ ಹೈನುಗಾರಿಕೆಗೆ ಹೆಚ್ಚು ಉತ್ತೇಜನ ನೀಡಬೇಕು. ಇತ್ತೀಚಿನ ದಿನಮಾನಗಳಲ್ಲಿ ಹೆಚ್ಚು ಹೆಚ್ಚು ಯುವಕರನ್ನು ಈ ಪೂರಕವಾದ ಉದ್ಯಮದತ್ತ ಆಕರ್ಷಿತರಾಗುತ್ತಾರೆ' ಎಂದು ಪ್ರಶಸ್ತಿ ವಿಜೇತ ರೈತ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.